ದೆಹಲಿ: ಬಾನೆಟ್ ಮೇಲೆ ವ್ಯಕ್ತಿಯೊಂದಿಗೆ 2-3 ಕಿಮೀ ದೂರದವರೆಗೆ ಕಾರು ಚಲಾಯಿಸಿದ ಡ್ರೈವರ್
ನವದೆಹಲಿ ಮೇ 1: ದೇಶದ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ಭಾನುವಾರ ರಾತ್ರಿ ಬೆಳಕಿಗೆ ಬಂದಿದೆ. ಆಶ್ರಮ ಚೌಕ್‌ನಿಂದ ನಿಜಾಮುದ್ದೀನ್ ದರ್ಗಾ ನಡುವೆ ಕಾರು ಚಾಲನೆ ಮಾಡುತ್ತಿರುವ ವಿಡಿಯೋವೊಂದು ಹೊರಬಿದ್ದಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ಕಾರಿನ ಬಾನೆಟ್‌ಗೆ ನೇತಾಡುತ್ತಿರುವುದನ್ನು ನೋಡಬಹುದು. ಜೊತೆಗೆ ಈ ಕಾರು 2-3 ಕಿ.ಮೀ. ವ್ಯಕ್ತಿಯೊಂದಿಗೆ ಚಲಿಸಿದೆ. ಕಾರು ಬಿಹಾರ ಸಂಸದ ಚಂದನ್ ಸಿಂಗ್ ಅವರದ್ದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋದಲ್ಲಿ ಕಾರಿನ ಬಾನೆಟ್‌ಗೆ ವ್ಯಕ್ತಿ ನೇತಾಡುತ್ತಿರುವುದನ್ನು ಕಾಣಬಹುದು. ಘಟನೆ ಬಳಿಕ ಬಾನೆಟ್ ಮೇಲೆ ನೇತಾಡುತ್ತಿದ್ದ ಯುವಕ ಚೇತನ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾನೆ.

'ನಾನು ಚಾಲಕನಾಗಿ ಕೆಲಸ ಮಾಡುತ್ತೇನೆ, ನಾನು ಪ್ರಯಾಣಿಕರನ್ನು ಇಳಿಸಿ ಹಿಂತಿರುಗುತ್ತಿದ್ದೆ. ನಾನು ಆಶ್ರಮದ ಬಳಿ ತಲುಪಿದೆ. ಈ ವೇಳೆ ನಾನು ಕಾರಿನಿಂದ ಇಳಿದು ಮುಂಭಾಗದಲ್ಲಿ ನಿಂತಿದ್ದೆ. ಆಗ ಒಂದು ಕಾರು ನನ್ನ ಕಾರಿಗೆ ಹಿಂಬದಿಯಲ್ಲಿ ಮೂರು ಬಾರಿ ಗುದ್ದಿದೆ. ಈ ಘಟನೆಯ ಬಳಿಕ ಕಾರು ನಿಲ್ಲಿಸಲಿಲ್ಲ. ಕಾರು ಮುಂಭಾಗದಲ್ಲಿ ನಿಂತದ್ದ ನಾನು ಆ ಕಾರಿನ ಬಾನೆಟ್ ಹಿಡಿದುಕೊಂಡೆ. ಆಗಲೂ ಕಾರು ನಿಲ್ಲಿಸಲಿಲ್ಲ' ಎಂದಿದ್ದಾರೆ.
#WATCH | Delhi: At around 11 pm last night, a car coming from Ashram Chowk to Nizamuddin Dargah drove for around 2-3 kilometres with a person hanging on the bonnet. pic.twitter.com/54dOCqxWTh
— ANI (@ANI) May 1, 2023
ಕಾರು ಚಾಲಕ ಕಾರನ್ನು ವೇಗವಾಗಿ ಓಡಿಸಲು ಆರಂಭಿಸಿದ. ನಾನು ಕಾರಿನ ಬಾನೆಟ್‌ಗೆ ನೇತಾಡಿದೆ. ಆದರೆ ಚಾಲಕನು ಆಶ್ರಮ ಚೌಕ್‌ನಿಂದ ನಿಜಾಮುಡ್ಡಿಗೆ ಕಾರನ್ನು ಓಡಿಸುವುದನ್ನು ಮುಂದುವರೆಸಿದ್ದಾನೆ. ನಾನು ಕಾರು ನಿಲ್ಲಿಸಿ ಎಂದು ಹೇಳುತ್ತಿದ್ದೆ, ಆದರೆ ಆತ ನಿಲ್ಲಲಿಲ್ಲ. ಕಾರು ಚಾಲಕ ಪಾನಮತ್ತನಾಗಿದ್ದ, ಬಳಿಕ ಬೇರೆಯವರು ಹಾಗೂ ಪೊಲೀಸರು ಕಾರನ್ನು ಹಿಂಬಾಲಿಸಿ ನಿಲ್ಲಿಸಿದರು. ಕಾರು ಆಶ್ರಮ ಚೌಕ್‌ನಿಂದ ನಿಜಾಮುದ್ದೀನ್ ದರ್ಗಾಕ್ಕೆ ತೆರಳುತ್ತಿದ್ದಾಗ ಪೊಲೀಸರು ಕಾರನ್ನು ಗುರುತಿಸಿ ನಿಲ್ಲಿಸಿದ್ದಾರೆ. ಬಾನೆಟ್ ಹಿಡಿದುಕೊಂಡ ವ್ಯಕ್ತಿಯೊಂದಿಗೆ ಕಾರು ಸುಮಾರು 2-3 ಕಿ.ಮೀ. ಚಲಿಸಿದೆ.
ಅದೇ ವೇಳೆ ಆರೋಪಿ ಕಾರು ಚಾಲಕ ರಾಮಚಂದ್ ಕುಮಾರ್ ನನ್ನ ಕಾರು ಬೇರೊಂದು ಕಾರಿಗೆ ಗುದ್ದಿಲ್ಲ. ಉದ್ದೇಶಪೂರ್ವಕವಾಗಿ ನನ್ನ ಕಾರಿನ ಬಾನೆಟ್‌ಗೆ ನೇತುಬಿದ್ದಿದ್ದಾರೆ. ನಾನು ಕಾರನ್ನು ಓಡಿಸುತ್ತಿದ್ದೆ ಎಂದು ಹೇಳುತ್ತಾರೆ. ಕೆಳಗಿಳಿಯಲು ಹೇಳಿದರೂ ಕೇಳಲಿಲ್ಲ. ಇದಾದ ನಂತರ ನಾನು ಕಾರನ್ನು ನಿಲ್ಲಿಸಿ ನೀವು ಏನು ಮಾಡುತ್ತಿದ್ದೀರಿ ಎಂದು ಕೇಳಿದೆ ಎಂದು ಕಾರು ಚಾಲಕ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರು ಹಿಟ್ ಆಂಡ್ ರನ್ ಪ್ರಕರಣ
ರಾಜಾಜಿನಗರದ ಮಧುಲೋಕ ಬಾರ್ ಬಳಿ ಜನವರಿಯಲ್ಲಿ ಬೈಕ್ ಸವಾರನಿಗೆ ಗುದ್ದಿ ಫಾರ್ಚೂನರ್ ಕಾರು ಪರಾರಿಯಾಗಿತ್ತು. ತಡೆಯಲು ಪ್ರಯತ್ನಿಸಿದ ಸಾರ್ವಜನಿಕರ ಮೇಲೂ ಕಾರು ಹತ್ತಿಸುವ ಪ್ರಯತ್ನವನ್ನು ಸಹ ಚಾಲಕ ಮಾಡಿದ್ದನು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಫಾರ್ಚೂನರ್ ಕಾರು ಗುದ್ದಿದ ರಭಸಕ್ಕೆ ಬೈಕ್ ಸವಾರ ಸುಮಾರು ದೂರ ಹಾರಿಬಿದ್ದಿದ್ದಾನೆ. ಅದೃಷ್ಟವಶಾತ್ ಬೈಕ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ಕೂಟರ್ ಹಿಡಿದಿದ್ದ ಹಿರಿಯ ನಾಗಕರಿಕರೊಬ್ಬರನ್ನು ದರದರನೆ ಎಳೆದೊಯ್ದ ಯುವಕನೊಬ್ಬನ ಮೃಗೀಯ ಕೃತ್ಯದ ಘಟನೆ ಜನಮಾನಸದಲ್ಲಿ ಮಾಸಿಲ್ಲ. ಮತ್ತೊಂದು ಘಟನೆ ಜನವರಿಯಲ್ಲಿ ನಡೆದಿದೆ. ನಗರದಲ್ಲಿ ಕಾರಿನ ಬಾನೆಟ್ ಮೇಲೆ ಯುವಕ ನೇತಾಡುತ್ತಿದ್ದರೂ ಲೆಕ್ಕಿಸದೆ ಸುಮಾರು 3 ಕಿ.ಮೀ. ಕಾರು ಚಲಾಯಿಸಿ ಟೆಕ್ಕಿಯೊಬ್ಬರು ಅಮಾನವೀಯವಾಗಿ ನಡೆದುಕೊಂಡ ಘಟನೆ ನಡೆದಿತ್ತು.
ಉಲ್ಲಾಳ ಮುಖ್ಯರಸ್ತೆಯಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಸ್ಥಳೀಯ ಯುವಕ ಹಾಗೂ ಕಾರು ಚಾಲಕಿ ನಡುವೆ ನಡೆದ ಕ್ಷುಲ್ಲಕ ಜಗಳ ಅತಿರೇಕಕ್ಕೆ ತಿರುಗಿ ಈ ಘಟನೆ ನಡೆದಿತ್ತು. ಪರಿಣಾಮ ಕಾರು ಚಾಲಕಿ ಹಾಗೂ ನಾಲ್ವರು ಯುವಕರು ಕಾನೂನಿನ ಉರುಳಿನಲ್ಲಿ ಸಿಲುಕಿಕೊಂಡಿದ್ದಾರೆ.












Click it and Unblock the Notifications