Get Updates
Get notified of breaking news, exclusive insights, and must-see stories!

ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಕೊಲೆ: ದೆಹಲಿ ಕೋರ್ಟ್‌ನಿಂದ ಮಹತ್ವದ ತೀರ್ಪು

ನವದೆಹಲಿ, ಅಕ್ಟೋಬರ್ 18: ಸುಮಾರು ಹದಿನೈದು ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಪತ್ರಕರ್ತೆಯ ಸೌಮ್ಯ ವಿಶ್ವನಾಥನ್ ಅವರ ಹತ್ಯೆ ಪ್ರಕರಣದ ಐವರು ಆರೋಪಿಗಳನ್ನು ದೆಹಲಿ ನ್ಯಾಯಾಲಯ ದೋಷಿಗಳು (ಅಪರಾಧಿ) ಎಂದು ತೀರ್ಪು ನೀಡಿದೆ.

ಹೆಡ್‌ಲೈನ್ಸ್ ಟುಡೆ ಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತೆ ಸೌಮ್ಯ ವಿಶ್ವನಾಥನ್ (25) 2008ರಲ್ಲಿ ಹತ್ಯೆಯಾಗಿದ್ದರು. ಪ್ರಕರಣ ವಿಚಾರಣೆ ನಡೆದ ನ್ಯಾಯಾಲಯ ಬುಧವಾರ ತನ್ನ ತೀರ್ಪಿನಲ್ಲಿ ಐವರು ಆರೋಪಿಗಳನ್ನು ಅಪರಾಧಿಗಳು ಎಂದು ಹೇಳಿದೆ.

ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಯ ನಿಬಂಧನೆಗಳ ಅಡಿಯಲ್ಲಿ ದೋಷಿಗಳು ಎಂದು ಕೋರ್ಟ್ ತಿಳಿಸಿದೆ.

journalist-soumya-vishwanathan-murder-case

ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜಿತ್ ಮಲ್ಲಿಕ್ ಮತ್ತು ಅಕ್ಷಯ್ ಕುಮಾರ್ ಅವರನ್ನು ಕೊಲೆ ಮತ್ತು ಕಳ್ಳತನ (ಲೂಟಿ) ಅಪರಾಧಿಗಳೆಂದು ಪರಿಗಣಿಸಲಾಗಿದೆ. ಇವರೆಲ್ಲರಿಗೆ ಸಹಾಯ ಮಾಡಿ ಅಜಯ್ ಸೇಥಿ ಯನ್ನು ಐದನೇ ಆರೋಪಿಯಾಗಿ ಕೋರ್ಟ್ ಪರಿಗಣಿಸಿದೆ.

2008 ರಲ್ಲಿ ಪತ್ರಕರ್ತೆ ಸೌಮ್ಯಾ ಅವರು ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳುತ್ತಿದ್ದರು. ಈ ವೇಳೆ ದೆಹಲಿಯ ವಸಂತ ವಿಹಾರ್‌ನಲ್ಲಿ ಅವರು ಇದೇ ಅಪರಾಧಿಗಳಿಂದ ಹತ್ಯೆಯಾದರು. ಬಳಿಕ ಅವರ ಮೃತದೇಹವನ್ನು ಅವರ ಕಾರಿನಲ್ಲಿ ಹಾಕಲಾಗಿತ್ತು.

ಮೃತ ಪತ್ರಕರ್ತೆಯ ತಾಯಿ ಪ್ರತಿಕ್ರಿಯೆ

ದೆಹಲಿ ನ್ಯಾಯಾಯಲಯದ ತೀರ್ಪು ಹೊರ ಬೀಳುತ್ತಿದ್ದಂತೆ ಸುದ್ದಿಗಾರರ ಜೊತೆಗೆ ಮಾತನಾಡಿದ ಮೃತ ಪತ್ರಕರ್ತೆ ತಾಯಿ, ನಾವು ಮಗಳನ್ನು ಕಳೆದುಕೊಂಡಿದ್ದೇವೆ. ಆದರೆ ಈ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಇತರರಿಗೆ ಅಡ್ಡಿ ಆಗುವ ಸಾಧ್ಯತೆಗಳು ಇವೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಬಯಸುವುದಾಗಿ ಅವರು ತಿಳಿಸಿದರು.

journalist-soumya-vishwanathan-murder-case

ಮತ್ತೊಂದು ಪ್ರತ್ಯೇಕ ಮಹಿಳೆಯ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆಯಲ್ಲಿ ಪ್ರಗತಿ ಸಾಧಿಸಿದ್ದರು. ಪತ್ರಕರ್ತೆ ಸೌಮ್ಯಾ ನಂತರ ಐಟಿ ಕಾರ್ಯನಿರ್ವಾಹಕ ಜಿಗೀಶಾ ಘೋಸ್ ಅವರು ಫರಿದಾಬಾದ್‌ನಲ್ಲಿ ಶವವಾಗಿ ಪತ್ತೆ ಆಗಿದ್ದರು.

ಈ ಐಟಿ ಅಧಿಕಾರಿಯ ಸಾವಿನ ಪ್ರಕರಣಕ್ಕೆ ಕುರಿತಂತೆ ಪೊಲೀಸರು ಅಪರಾಧಿ ಸ್ಥಾನದಲ್ಲಿರುವ ಈ ಕಪೂರ್, ಶುಕ್ಲಾ ಮತ್ತು ಮಲಿಕ್ ಅವರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ವಸಂತ್ ವಿಹಾರ್ ಕೊಲೆಗೂ ಇವರಿಗೂ ನಂಟು ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಅವರಿಂದ ಕಲೆ ಹಾಕಿ ಮಾಹಿತಿ ಮೇರೆಗೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.

620 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

ಪ್ರಕರಣ ಸಂಬಂಧ 2009ರಲ್ಲಿ ಪೊಲೀಸರು ಸಲ್ಲಿಸಿದ್ದ 620 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಕೊಲೆಯ ಹಿಂದಿನ ಉದ್ದೇಶ ದರೋಡೆ ಎಂದು ದೆಹಲಿ ಪೊಲೀಸರು ಉಲ್ಲೇಖಿಸಿದ್ದರು. ಈ ಐವರ ಮೇಲೆ ಕೊಲೆ, ಸಾಕ್ಷ್ಯ ನಾಶ, ಫೋರ್ಜರಿ ಮತ್ತು ಕ್ರಿಮಿನಲ್ ಪಿತೂರಿಯ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಚ್‌ಜಿಎಸ್‌ ಧಲಿವಾಲ್ ತಿಳಿಸಿದರು.

ಈ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಅನ್ನು ಮೊದಲು ಮುಂಬೈನಲ್ಲಿ ಜಾರಿಗೊಳಿಸಲಾಗಿತ್ತು. ನಂತರ ಕೇಂದ್ರ ಗೃಹ ಸಚಿವಾಲಯವು 2002ರಲ್ಲಿ ಕಾಯ್ದೆಯನ್ನು ದೆಹಲಿಗೆ ವಿಸ್ತರಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+