Get Updates
Get notified of breaking news, exclusive insights, and must-see stories!

Money Laundering Case: ಇಡಿ ಸಮನ್ಸ್‌ಗೆ ಕೇರ್ ಮಾಡದ ಕೇಜ್ರಿವಾಲ್- ಇಂದು ಬಂಧನ ಸಾಧ್ಯತೆ?

ದೆಹಲಿ ಜನವರಿ 4: ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ನಂತರ ಗುರುವಾರ ಬೆಳಿಗ್ಗೆ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿಕೊಂಡಿದೆ.

ಆಪಾದಿತ ದೆಹಲಿ ಮದ್ಯ ನೀತಿ 'ಹಗರಣ'ದಲ್ಲಿ ತನ್ನ ಮುಂದೆ ಹಾಜರಾಗುವಂತೆ ಇಡಿ ಅವರಿಗೆ ನೀಡಲಾದ ಮೂರನೇ ಸಮನ್ಸ್‌ಗಳನ್ನು ಕೇಜ್ರಿವಾಲ್ ಅವರು ಕೈಬಿಟ್ಟ ನಂತರ ಈ ಬೆಳವಣಿಗೆ ನಡೆದಿದೆ. "ನಾಳೆ ಬೆಳಗ್ಗೆ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಲಿದೆ ಎಂಬ ಸುದ್ದಿ ಬರುತ್ತಿದೆ. ಬಂಧಿಸುವ ಸಾಧ್ಯತೆಯಿದೆ" ಎಂದು ಬುಧವಾರ ರಾತ್ರಿ ಪಕ್ಷದ ನಾಯಕರಾದ ಅತಿಶಿ ಟ್ವೀಟ್ ಮಾಡಿದ್ದಾರೆ.

Delhi CM Arvind Kejriwal not paying attention to ED summons: possibility of arrest today?

ಆಜ್ ತಕ್ ಟಿವಿ/ಇಂಡಿಯಾ ಟುಡೆ ಟಿವಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅತಿಶಿ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ಕೇಜ್ರಿವಾಲ್‌ಗೆ ಸಮನ್ಸ್‌ ಜಾರಿ ಮಾಡುವ ಇಡಿ ಕೆಲಸ. ಇದೆಲ್ಲವೂ ಕೇಂದ್ರ ನಾಯಕರು ಮಾಡುತ್ತಿರುವ ಪಿತೂರಿ ಎಂದು ದೂರಿದ್ದಾರೆ.

ಆಪ್ ನಾಯಕರ ಟ್ವೀಟ್ ಹೀಗೆದೆ--

"ಇಡಿ ಕೇಳುವ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ಕೇಜ್ರಿವಾಲ್ ಸಿದ್ಧರಾಗಿದ್ದಾರೆ. ಕಳೆದ ಎರಡು ವಾರಗಳಲ್ಲಿ ಕೇಜ್ರಿವಾಲ್‌ಗೆ ಮೂರು ಸಮನ್ಸ್‌ಗಳನ್ನು ನೀಡಲಾಗಿದೆ. ಆದರೆ ಇಡಿ ಪ್ರಶ್ನೆಗಳನ್ನು ಲಿಖಿತವಾಗಿ ನೀಡುತ್ತಿಲ್ಲ" ಎಂದು ಅವರು ಹೇಳಿದರು.

Delhi CM Arvind Kejriwal not paying attention to ED summons: possibility of arrest today?

ಇದೇ ರೀತಿಯ ಟ್ವೀಟ್‌ಗಳನ್ನು ಅತಿಶಿ ಅವರ ಸಹೋದ್ಯೋಗಿಗಳಾದ ಸೌರಭ್ ಭಾರದ್ವಾಜ್ ಮತ್ತು ಜಾಸ್ಮಿನ್ ಶಾ ಕೂಡ ಮಾಡಿದ್ದಾರೆ. "ನಾಳೆ ಬೆಳಗ್ಗೆ ಇಡಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಮನೆಗೆ ತಲುಪಲಿದೆ ಮತ್ತು ಅವರನ್ನು ಬಂಧಿಸಲಿದೆ ಎಂದು ನಮಗೆ ಮಾಹಿತಿ ಬಂದಿದೆ" ಎಂದು ಭಾರದ್ವಾಜ್ ಬುಧವಾರ ರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Delhi CM Arvind Kejriwal not paying attention to ED summons: possibility of arrest today?

ಜೊತೆಗೆ "ಬ್ರೇಕಿಂಗ್: ನಾಳೆ ಬೆಳಗ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ಇಡಿ ದಾಳಿ ನಡೆಸಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಅವರನ್ನು ಬಂಧಿಸುವ ಸಾಧ್ಯತೆಯಿದೆ" ಎಂದು ಶಾ ಎಕ್ಸ್‌ನಲ್ಲಿ ಬರೆದಿದ್ದಾರೆ.

ಮನಿ ಲಾಂಡರಿಂಗ್ ಪ್ರಕರಣ: ಸಮನ್ಸ್‌ಗೆ ಕೇರ್ ಮಾಡದ ಕೇಜ್ರಿವಾಲ್

ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇಡಿ ಬುಧವಾರ ಕೇಜ್ರಿವಾಲ್ ಅವರನ್ನು ಕರೆಸಿದೆ. ಆದರೆ ಅವರು ಹಾಜರಾಗಲಿಲ್ಲ ಮತ್ತು ತನಿಖಾ ಸಂಸ್ಥೆಗೆ ಪ್ರತಿಕ್ರಿಯೆಯನ್ನು ಕಳುಹಿಸಿದರು. ತನಿಖೆಗೆ ಸಹಕರಿಸಲು ಸಿದ್ಧ ಎಂದು ಹೇಳಿದರು. ಆದರೆ, ಈ ನೋಟಿಸ್ ಕಾನೂನು ಬಾಹಿರ ಎಂದು ಅವರು ಕರೆದಿದ್ದಾರೆ.

Delhi CM Arvind Kejriwal not paying attention to ED summons: possibility of arrest today?

ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸಲು ಇಡಿ ಉದ್ದೇಶಿಸಿದೆ. ಚುನಾವಣಾ ಪ್ರಚಾರದಿಂದ ಅವರನ್ನು ತಡೆಯಲು ಬಯಸಿದೆ. ಹೀಗಾಗಿ ಅವರನ್ನು ಬಂಧಿಸಲು ಮುಂದಾಗಬಹುದು ಎಂದು ಎಎಪಿ ಆರೋಪಿಸಿದೆ. ಪ್ರತಿಪಕ್ಷ ನಾಯಕರನ್ನು ಬಂಧಿಸಲು ಸರ್ಕಾರ ಬಯಸದೆ. ಭ್ರಷ್ಟ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ನಮ್ಮ ನಾಯಕರ ಮೇಲೆ ಸುಳ್ಳು ಆರೋಪವನ್ನು ಮಾಡುತ್ತಿದೆ ಎಂದು ಎಎಪಿ ಆರೋಪಿಸಿದೆ.

ರಾಜಕೀಯ ಪ್ರೇರಿತ

ಕಳೆದ ವರ್ಷ ನವೆಂಬರ್ 2 ಮತ್ತು ಡಿಸೆಂಬರ್ 21 ರಂದು ಎರಡು ಸಮನ್ಸ್‌ಗಳ ಮೇಲೆ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ಕೇಜ್ರಿವಾಲ್ ನಿರಾಕರಿಸಿದ್ದರು. ನಂತರ ಕೇಜ್ರಿವಾಲ್ ಅವರಿಗೆ ನೀಡಲಾದ ಮೂರನೇ ನೋಟಿಸ್ ಇದಾಗಿದೆ. ಎಎಪಿ ಮುಖ್ಯಸ್ಥರು ಆ ಸಮನ್ಸ್‌ಗಳನ್ನು "ಅಕ್ರಮ" ಮತ್ತು "ರಾಜಕೀಯ ಪ್ರೇರಿತ" ಎಂದು ಕರೆದಿದ್ದಾರೆ.

ಇದರಿಂದ ಇಡಿ ಕೇಜ್ರಿವಾಲ್ ಅವರನ್ನು ಬಂಧಿಸುವುದು ಎಂದು ಎಎಪಿ ಹೇಳಿಕೊಂಡಿದೆ. ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸಿದರೆ ರಾಜೀನಾಮೆ ನೀಡಬೇಕೇ ಅಥವಾ ಜೈಲಿನಿಂದ ಸರ್ಕಾರವನ್ನು ನಡೆಸಬೇಕೇ ಎಂಬ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಪಡೆಯಲು ಪಕ್ಷದ ನಾಯಕರು 'ಮೈ ಭಿ ಕೇಜ್ರಿವಾಲ್' ಎಂಬ ಅಭಿಯಾನವನ್ನು ನಡೆಸುತ್ತಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರ ಸಹೋದ್ಯೋಗಿಗಳಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಈಗಾಗಲೇ ಜೈಲಿನಲ್ಲಿದ್ದಾರೆ.

ಕೇಜ್ರಿವಾಲ್ ಮೇಲೆ ಬಿಜೆಪಿ ದಾಳಿ

ಕೇಜ್ರಿವಾಲ್ ಅವರು ಭಯದಿಂದ ನಡುಗುತ್ತಿದ್ದಾರೆ. ಅವರು ದೆಹಲಿ ಮದ್ಯ ನೀತಿ ಹಗರಣದ "ಕಿಂಗ್‌ಪಿನ್" ಆಗಿರುವುದರಿಂದ ಇಡಿ ಮುಂದೆ ಹಾಜರಾಗುತ್ತಿಲ್ಲ ಎಂದು ಬಿಜೆಪಿ ನಾಯಕ ಗೌರವ್ ಭಾಟಿಯಾ ಆರೋಪಿಸಿದ್ದಾರೆ. ಅಪ್ರಾಮಾಣಿಕ ಮತ್ತು ದುಷ್ಟ ಅರವಿಂದ್ ಕೇಜ್ರಿವಾಲ್ ಭಯದಿಂದ ನಡುಗುತ್ತಿದ್ದಾರೆ ಇಡಿ ಮುಂದೆ ಹಾಜರಾಗದೆ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

"ಕೇಜ್ರಿವಾಲ್ ಅವರು ಇಂದು ಭಯಭೀತರಾಗಿದ್ದಾರೆ ಎಂದು ಹೇಳುವುದು ತಪ್ಪಾಗುವುದಿಲ್ಲ ಏಕೆಂದರೆ ಅವರ ಬಂಧನವು ಸನ್ನಿಹಿತವಾಗಿದೆ ಎಂದು ಅವರಿಗೆ ತಿಳಿದಿದೆ, ಅವರು ಕಿಂಗ್‌ಪಿನ್ ಎಂದು ತಿಳಿದಿದ್ದಾರೆ. ಹೀಗಾಗಿ ಅವರ ಬಳಿ ಉತ್ತರವಿಲ್ಲ (ಇಡಿ ಪ್ರಶ್ನೆಗಳಿಗೆ). ಅದಕ್ಕಾಗಿಯೇ ಅವರು ಕಾನೂನಿನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ" ಅವರು ವಾಗ್ದಾಳಿ ಮಾಡಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು, "ಇಂದು ಮತ್ತೊಮ್ಮೆ, ಅರವಿಂದ್ ಕೇಜ್ರಿವಾಲ್ ಮೂರನೇ ಸಮನ್ಸ್ ಅನ್ನು ತಿರುಗಿ ನೋಡಿಲ್ಲ. ಇದು ತನಿಖೆ ಮರೆಮಾಡುವ ಕುತಂತ್ರ. ಆದ್ದರಿಂದ ಅವರು ಅಪರಾಧಿಯಂತೆ ತಲೆಮರೆಸಿಕೊಂಡಿದ್ದಾರೆ" ಎಂದು ಕಿಡಿ ಕಾರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+