ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Delhi Budget 2023: 2 ದಿನಗಳ ಆಪ್ ಮತ್ತು ಕೇಂದ್ರದ ನಾಟಕಕ್ಕೆ ತೆರೆ; ಇಂದು ದೆಹಲಿ ಬಜೆಟ್ ಮಂಡನೆ

ಮೂಲಸೌಕರ್ಯ, ಜಾಹೀರಾತುಗಳಿಗೆ ನೀಡಿರುವ ಕೆಲವು ಹಂಚಿಕೆಗಳಿಗೆ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ನಂತರ ಗೃಹ ಸಚಿವಾಲಯ ದೆಹಲಿ ಬಜೆಟ್‌ಗೆ ಅನುಮೋದನೆ ನೀಡಿದೆ.

|
Google Oneindia Kannada News

ನವದೆಹಲಿ, ಮಾರ್ಚ್. 22: ಎರಡು ದಿನಗಳ ದೆಹಲಿ ಮತ್ತು ಕಂದ್ರ ಸರ್ಕಾರದ ನಡುವಿನ ನಾಟಕಕ್ಕೆ ತೆರೆ ಬಿದ್ದಿದೆ. ದೆಹಲಿ ಸರ್ಕಾರದ ಸ್ಪಷ್ಟೀಕರಣದ ನಂತರ ಎಎಪಿ ಸರ್ಕಾರ ಮತ್ತು ಕೇಂದ್ರದ ನಡುವಿನ ಬಿಕ್ಕಟ್ಟನ್ನು ಕೊನೆಗೊಳಿಸಿ ಗೃಹ ಸಚಿವಾಲಯವು ಅನುಮೋದನೆ ನೀಡಿದ್ದು, ದೆಹಲಿ ಬಜೆಟ್ 2023 ಅನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಲಾಗುತ್ತದೆ.

ಮೂಲಸೌಕರ್ಯ, ಜಾಹೀರಾತುಗಳಿಗೆ ನೀಡಿರುವ ಕೆಲವು ಹಂಚಿಕೆಗಳಿಗೆ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ನಂತರ ಗೃಹ ಸಚಿವಾಲಯ ಮಂಗಳವಾರ ದೆಹಲಿ ಬಜೆಟ್‌ಗೆ ಅನುಮೋದನೆ ನೀಡಿದೆ. ಆದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇಂದ್ರ ತನ್ನ ಅಹಂ ಅನ್ನು ತೃಪ್ತಿಗಿಳಿಸಿಕೊಳ್ಳಲು ಬಜೆಟ್ ಅನ್ನು ಅದನ್ನು ಸ್ಥಗಿತಗೊಳಿಸಿತ್ತು ಎಂದು ಆರೋಪಿಸಿದ್ದಾರೆ.

Delhi Budget 2023: Budget will be tabled in the assembly on Wednesday

ದೆಹಲಿಯ ನೂತನ ಹಣಕಾಸು ಸಚಿವ ಕೈಲಾಶ್ ಗೆಹ್ಲೋಟ್ ಅವರು ಹಣಕಾಸು ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಮೊದಲ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಇದೀಗ ಬುಧವಾರ ಮಂಡಿಸಲಿರುವ ಬಜೆಟ್ ಅನ್ನು ಕೇಂದ್ರಕ್ಕೆ ಅನುಮತಿಗಾಗಿ ಕಳುಹಿಸುವ ಪರಿಪಾಠವನ್ನು ಪ್ರಶ್ನಿಸಿದ್ದರಿಂದ "ಯಾವುದೇ ಬದಲಾವಣೆಯಿಲ್ಲದೆ" ಅಂಗೀಕರಿಸಲಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿ ಬಜೆಟ್ ಮಂಗಳವಾರ ಮಂಡಿಸಲು ನಿರ್ಧರಿಸಲಾಗಿತ್ತು. ಆದರೆ ಎಎಪಿ ಸರ್ಕಾರದಿಂದ ಮೂಲಸೌಕರ್ಯ ಮತ್ತು ಜಾಹೀರಾತುಗಳಿಗೆ ಹಣ ಹಂಚಿಕೆ ಕುರಿತು ಗೃಹ ಸಚಿವಾಲಯ ಸ್ಪಷ್ಟೀಕರಣವನ್ನು ಕೋರಿದ ನಂತರ ಬಜೆಟ್ ಮಂಡನೆಗೆ ವಿಳಂಬವಾಗಿದೆ. ಮೂಲಗಳ ಪ್ರಕಾರ, ಜಾಹೀರಾತುಗಳಿಗೆ ಹೆಚ್ಚಿನ ಹಂಚಿಕೆ ಮತ್ತು ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿ ಯೋಜನೆಗಳಿಗೆ ತುಲನಾತ್ಮಕವಾಗಿ ಕಡಿಮೆ ಹಣವನ್ನು ನಿಗದಿಪಡಿಸಲಾಗಿದೆ ಎಂದು ವಿವರಿಸಲು ಎಎಪಿ ಸರ್ಕಾರವನ್ನು ಕೇಳಲಾಗಿತ್ತು.

Delhi Budget 2023: Budget will be tabled in the assembly on Wednesday

ಆರೋಪಗಳನ್ನು ನಿರಾಕರಿಸಿದ ಹಣಕಾಸು ಸಚಿವ ಕೈಲಾಶ್ ಗೆಹ್ಲೋಟ್ ಅವರು ಬುಧವಾರ ದೆಹಲಿ ವಿಧಾನಸಭೆಯಲ್ಲಿ 78,800 ಕೋಟಿ ರೂಪಾಯಿ ಬಜೆಟ್ ಮಂಡಿಸಲಿದ್ದು, 22,000 ಕೋಟಿ ರೂಪಾಯಿ ಮೂಲಸೌಕರ್ಯ ಮತ್ತು 550 ಕೋಟಿ ರೂಪಾಯಿ ಜಾಹೀರಾತುಗಳಿಗೆ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ಕೇಂದ್ರದ ಆಕ್ಷೇಪಣೆಗಳು ಅಸಾಂವಿಧಾನಿಕ ಮತ್ತು ಆಧಾರರಹಿತವಾಗಿದೆ. ಯಾವುದೇ ಬದಲಾವಣೆಯಿಲ್ಲದೆ ಬಜೆಟ್ ಅನ್ನು ಅನುಮೋದಿಸಲಾಗಿದೆ ಎಂದಿದ್ದು, ಅದನ್ನು ಕೇಂದ್ರಕ್ಕೆ ಅನುಮತಿಗಾಗಿ ಕಳುಹಿಸುವ ಅಭ್ಯಾಸವನ್ನು ಪ್ರಶ್ನಿಸಿದ್ದಾರೆ.

ದೆಹಲಿ ಸರ್ಕಾರ ಮೂರು ದಿನಗಳ ಕಾಲ ಸ್ಪಷ್ಟೀಕರಣಗಳನ್ನು ಕೇಳಿದೆ. ನಂತರ ಅಗ್ಗದ ಪ್ರಚಾರಗಳಿಸಲು ಕೇಂದ್ರವನ್ನು ದೂಷಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಜಾಹೀರಾತಿಗಾಗಿ ಸಾರ್ವಜನಿಕ ಹಣವನ್ನು ಎಎಪಿ ದುರುಪಯೋಗಪಡಿಸಿಕೊಂಡಿದೆ ಎಂಬ ಬಿಜೆಪಿ ಆರೋಪಗಳು 2015 ರಿಂದಲೂ ಕಳಿ ಬರುತ್ತೀವೆ. 2021 ರಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಬಗ್ಗೆ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

Delhi Budget 2023: ದೆಹಲಿ ಬಜೆಟ್ ಮಂಡಿಸದಂತೆ ಎಎಪಿ ಸರ್ಕಾರದ ಮೇಲೆ ಕೇಂದ್ರದ ಒತ್ತಡ: ಕೇಜ್ರಿವಾಲ್ ಆರೋಪDelhi Budget 2023: ದೆಹಲಿ ಬಜೆಟ್ ಮಂಡಿಸದಂತೆ ಎಎಪಿ ಸರ್ಕಾರದ ಮೇಲೆ ಕೇಂದ್ರದ ಒತ್ತಡ: ಕೇಜ್ರಿವಾಲ್ ಆರೋಪ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಜಾಹೀರಾತುಗಳಿಗಾಗಿ ಎಎಪಿ ಅಕ್ರಮವಾಗಿ ಖರ್ಚು ಮಾಡಿದ 163.62 ಕೋಟಿ ಹಣವನ್ನು ಸರ್ಕಾರಕ್ಕೆ ಮರುಪಾವತಿ ಮಾಡುವಂತೆ ಆದೇಶಿಸಿದ್ದರು. ದೆಹಲಿ ಸರ್ಕಾರಕ್ಕೆ ವಾರ್ತಾ ಮತ್ತು ಪ್ರಚಾರ ನಿರ್ದೇಶನಾಲಯ ನೀಡಿರುವ ವಸೂಲಾತಿ ನೋಟಿಸ್ ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು.

ದೆಹಲಿಯ ದಿನಪತ್ರಿಕೆಗಳಲ್ಲೂ ಬಿಜೆಪಿ ಮುಖ್ಯಮಂತ್ರಿಗಳ ಜಾಹೀರಾತು ಪ್ರಕಟವಾಗುತ್ತದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗಮನ ಸೆಳೆದಿದ್ದರು. ಬಿಜೆಪಿ ಅವರಿಂದ ಹಣ ವಸೂಲಿ ಮಾಡುವುದೇ ಎಂದು ಕಟುವಾಗಿ ಪ್ರಶ್ನಿಸಿದ್ದರು.

English summary
Delhi Budget 2023: Delhi government's budget will be tabled in the assembly on Wednesday after the home ministry approved. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X