Delhi Assembly Elections 2025: ಚುನಾವಣೆಗೆ ಐದೇ ದಿನ ಇರುವಾಗ ಎಎಪಿಗೆ ಬಿಗ್ ಶಾಕ್!
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ತಮ್ಮದೇ ಪಕ್ಷದವರಿಂದ ಮುಜುಗರವಾಗುತ್ತಿದ್ದು. ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ದೆಹಲಿಯಲ್ಲಿ ಎಎಪಿಯು ಈ ಬಾರಿ ಅಧಿಕಾರಕ್ಕೆ ಬರುವುದಕ್ಕೆ ಹರಸಾಹಸಪಡುತ್ತಿದೆ. ಆದರೆ ಇದರ ನಡುವೆ ಅವರದೇ ಪಕ್ಷದ ಶಾಸಕರು ಹಾಗೂ ಸಂಸದರು ಎಎಪಿಗೆ ಶಾಕ್ ಕೊಡುತ್ತಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆ ಫೆಬ್ರವರಿ 5ಕ್ಕೆ ಇದೆ. ಆದರೆ ಚುನಾವಣೆಗೆ ಬೆರಳೆಣಿಕೆಯ ದಿನಗಳು ಇರುವಾಗಲೇ ಎಎಪಿಯ 7 ಶಾಸಕರು ಗುಡ್‌ಬೈ ಹೇಳಿದ್ದು. ಅರವಿಂದ್ ಕೇಜ್ರಿವಾಲ್ ಅವರು ಕಂಗಾಲಾಗಿದ್ದಾರೆ.
ಈ ಬಾರಿ ದೆಹಲಿಯಲ್ಲಿ ಎಎಪಿಗೆ ಗೆಲುವು ಅಷ್ಟು ಸುಲಭವಲ್ಲ ಎಂದು ಈಗಾಗಲೇ ಹೇಳಲಾಗಿದೆ. ಇನ್ನು ದೆಹಲಿಯಲ್ಲಿ ಈ ಬಾರಿ ಎಎಪಿ ಹಾಗೂ ಬಿಜೆಪಿಯ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್, ಎಎಪಿ ಹಾಗೂ ಬಿಜೆಪಿ ತ್ರಿಕೋನ ಸ್ಪರ್ಧೆ ಇದೆಯಾದರೂ ಕಾಂಗ್ರೆಸ್ ಇಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಟ್ರಾಂಗ್ ಫೈಟ್ ಕೊಡುತ್ತಿಲ್ಲ. ಇದರ ನಡುವೆ ಎಎಪಿ ಪಕ್ಷಕ್ಕೆ ಸಂಕಷ್ಟ ಎದುರಾಗಿದೆ. ದೆಹಲಿ ವಿಧಾನಸಭೆ ಚುನಾವಣೆಗಳಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಅಸಮಾಧಾನಿತರಾಗಿರುವ ಆಮ್ ಆದ್ಮಿ ಪಕ್ಷದ (ಎಎಪಿ) 7 ಜನ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

ದೆಹಲಿಯ ಎಎಪಿಯ ಶಾಸಕರಾದ ರೋಹಿತ್ ಮೆಹ್ರೌಲಿ, ಮದನ್ ಲಾಲ್, ರಾಜೇಶ್ ರಿಷಿ, ಪಾಲಂನ ಭಾವನಾ ಗೌರ್, ಭೂಪಿಂದರ್ ಸಿಂಗ್ ಹಾಗೂ ಪವನ್ ಕುಮಾರ್ ಶರ್ಮಾ ಎನ್ನುವವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಮುಖ್ಯವಾಗಿ ಈ ಆರು ಜನ ಶಾಸಕರಿಗೆ ಟಿಕೆಟ್ ಕೊಡದೆ ಇರುವುದೇ ಅವರು ಎಎಪಿ ತೊರೆಯುವುದಕ್ಕೆ ಕಾರಣ ಎಂದು ಹೇಳಲಾಗಿದೆ.
ಕಸ ಸುರಿದಿದ್ದ ಎಎಪಿ ಸಂಸದೆ
ಇನ್ನು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಅವಮಾನ ಆಗುವ ಹಲವು ಪ್ರಕರಣಗಳು ವರದಿಯಗುತ್ತಿವೆ.
ದೆಹಲಿಯನ್ನು ಕಸದ ತೊಟ್ಟಿಯಾಗಿ ಬದಲಾಯಿಸಲಾಗಿದೆ ಎಂದು ಆರೋಪಿಸಿ ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರು ಅರವಿಂದ್ ಕೇಜ್ರಿವಾಲ್ ಮನೆ ಮುಂದೆ ಕಸ ಸುರಿದಿದ್ದರು. ನಾನಿಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಬಳಿ ಮಾತನಾಡುವುದಕ್ಕೆ ಬಂದಿದ್ದೆ. ನೀವು ಬದಲಾಗಬೇಕು ಇಲ್ಲವೇ ಜನರೇ ನಿಮ್ಮನ್ನು ಬದಲಾಯಿಸಲಿದ್ದಾರೆ ಎಂದು ಅವರಿಗೆ ಹೇಳುವುದಕ್ಕೆ ನಾನು ಇಷ್ಟಪಡುತ್ತೇನೆ ಎಂದು ಅವರು ಸವಾಲು ಹಾಕಿದ್ದರು.
ದೆಹಲಿ ಚುನಾವಣಾ ಕಣ: ದೆಹಲಿ ವಿಧಾನಸಭೆಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿವೆ. ದೆಹಲಿಯಲ್ಲಿ ಕಳೆದ ಎರಡು ಅವಧಿಯಿಂದ ಎಎಪಿ ಪಕ್ಷವು ಅಧಿಕಾರದಲ್ಲಿ ಇದೆ. ಈ ಬಾರಿ ಎಎಪಿ ಅಧಿಕಾರಕ್ಕೆ ಬರುವುದಕ್ಕೆ ಸರ್ಕಸ್ ಮುಂದುವರಿಸಿದೆ. ಇನ್ನು ದೆಹಲಿಯಲ್ಲಿ ಫೆಬ್ರವರಿ 5ಕ್ಕೆ ಚುನಾವಣೆ ನಡೆದರೆ ಫೆಬ್ರವರಿ 8ಕ್ಕೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಮದ್ಯ ನೀತಿ ಹಗರಣದಲ್ಲಿ ಸಾಲು ಸಾಲು ಎಎಪಿ ಮುಖಂಡರು ಹಾಗೂ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ಜೈಲು ಸೇರಿದ್ದರು.












Click it and Unblock the Notifications