ಸೇನೆಗೆ ಹೊಸ ಆಯುಧ 'ವರುಣಾಸ್ತ್ರ'; ಏನಿದರ ವಿಶೇಷ?

Written By:
Subscribe to Oneindia Kannada

ನವದೆಹಲಿ, ಜೂನ್ , 30: ಭಾರತ ನೌಕಾಸೇನೆಗೆ ಇನ್ನು ಮುಂದೆ "ವರುಣಾಸ್ತ್ರ"ದ ಶಕ್ತಿ. ಸ್ವದೇಶಿ ನಿರ್ಮಿತ ಟೋರ್ಪಿಡೋ 'ವರುಣಾಸ್ತ್ರ'ವನ್ನು ಕೇಂದ್ರ ರಕ್ಷಾ ಸಚಿವ ಮನೋಹರ್ ಪರಿಕ್ಕರ್ ನೌಕಾ ಸೇನೆಗೆ ಬುಧವಾರ ಹಸ್ತಾಂತರ ಮಾಡಿದರು.

ಹಸ್ತಾಂತರ ಮಾಡಿ ನಂತರ ಮಾತನಾಡಿದ ಸಚಿವರು, ಡಿಆರ್ ಡಿಒದ ಸಾಧನೆಯನ್ನು ಬಣ್ಣಿಸಿದರು. ಭಾರತದ ಸೇನೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಸಾಧನೆ ಡಿಆರ್ ಡಿ ಒ ಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲೂ ಇದು ಮುಂದುವರಿಯಲಿದೆ ಎಂದು ಹೇಳಿದರು.[ಭಾರತದ ನೌಕಾಪಡೆಗೆ ಸುನೀಲ್ ಲಂಬಾ ಹೊಸ ಸಾರಥಿ]

india

ನೌಕಾ ಸೇನೆಯ ಆಡ್ಮಿರಲ್ ಸುನೀಲ್ ಲಂಬಾ ಅವರನ್ನು ಇದೇ ವೇಳೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪಿತಾಮಹ ಎಂದು ಬಣ್ಣಿಸಲಾಯಿತು.[ಕರ್ನಾಟಕದ ಕರಾವಳಿ ಮೇಲೆ ಐಸಿಜಿಎಸ್ ಶೂರ್ ಕಣ್ಗಾವಲು]

india

ವರುಣಾಸ್ತ್ರವನ್ನು ಡಿಆರ್‌ಡಿಒದ ನೆವಲ್ ಸೈನ್ಸ್ ಆಂಡ್ ಟೆಕ್ನಾಲಜಿಕಲ್ ಲ್ಯಾಬೋರೇಟರಿಯಲ್ಲಿ ಈ ವಿನ್ಯಾಸಗೊಳಿಸಲಾಗಿದೆ. 1.25 ಟನ್ ತೂಕವಿರುವ ವರುಣಾಸ್ತ್ರ, 250 ಕೆಜಿ ತೂಕದ ಸ್ಫೋಟಕ ಸಾಮಗ್ರಿಗಳನ್ನು ವೇಗವಾಗಿ ಹೊತ್ತೊಯ್ಯಬಲ್ಲದು. ಭಾರದ ಸಾಮಗ್ರಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸರಾಗವಾಗಿ ಹೊತ್ತೊಯ್ಯುವುದೇ ವರುಣಾಸ್ತ್ರದ ವಿಶೇಷ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Defence Minister Manohar Parrikarhanded over "Varunastra", a Ship Launched Heavy Weight Torpedo", to the Indian Navy here on Wednesday. Indigenously developed heavyweight torpedo Varunastra, which was showcased for the first time on the Republic Day Parade at Rajpath this year.
Please Wait while comments are loading...