ಪುಣೆ: ಯಾವ ಗುಂಡಿ ಒತ್ತಿದ್ದರೂ ಕೈಗೆ ಮತ!

Posted By:
Subscribe to Oneindia Kannada

ಪುಣೆ, ಏ.17: ಇಲ್ಲಿನ ಶಾಮರಾವ್ ಕಲ್ಮಾಡಿ ಶಾಲೆಯ ಮತಕೇಂದ್ರಕ್ಕೆ ಗುರುವಾರ ಬೆಳಗ್ಗೆ ಮತದಾನ ಮಾಡಿದ ಮತದಾರರು ನಿಜಕ್ಕೂ ಅಚ್ಚರಿಗೊಳಗಾದರು. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಯಾವುದೇ ಬಟನ್ ಒತ್ತಿದರೂ ಕಾಂಗ್ರೆಸ್ ಚಿಹ್ನೆ ಮೇಲೆ ಲೈಟ್ ಆನ್ ಆಗುತ್ತಿತ್ತು. ಯಾರೇ ಯಾವುದೇ ಗುಂಡಿ ಒತ್ತಿದ್ದರೂ ಕಾಂಗ್ರೆಸ್ ಗೆ ಮತ ಬೀಳುತ್ತಿತ್ತು. ಇದರಿಂದ ಕ್ಷಣ ಕಾಲ ಚುನಾವಣಾಧಿಕಾರಿಗಳು ಕೂಡಾ ತಬ್ಬಿಬ್ಬಾದರು.

ಮತಯಂತ್ರ ದೋಷವನ್ನ ಗಮನಿಸಿದ ಕೆಲ ಮತದಾರರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಮತದಾನ ಸ್ಥಗಿತಗೊಳಿಸಲಾಯಿತು. ಕೆಲ ಕಾಲ ಮತದಾನ ಸ್ಥಗಿತಗೊಂಡು ಹೊಸ ಮತಯಂತ್ರ ತರಲು ಅಧಿಕಾರಿಗಳು ಆದೇಶಿಸಿದರು. ಈ ಮೊದಲು ಮತಹಾಕಿದ್ದ 28 ಮತದಾರರಿಗೆ ಮರು ಮತದಾನ ಮಾಡಲು ಅವಕಾಶ ನೀಡಲಾಯಿತು ಎಂದು ಸ್ಥಳೀಯ ಬಿಜೆಪಿ ಮುಖಂಡ ಮಧುರ್ ಸಹಸ್ರಾಬುದ್ಧೆ ಹೇಳಿದ್ದಾರೆ.

Defective Pune EVM 'transfers' all votes to Congress

ಈ ಹಿಂದೆ ಗುವಾಹಟಿಯಲ್ಲಿ ವಿದ್ಯುನ್ಮಾನ ಮತಯಂತ್ರದ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಹಾಕುವಂಥ ಘಟನೆ ಇತ್ತೀಚೆಗೆ ನಡೆದಿದೆ. ಇಲ್ಲಿನ ಜೋರ್ಹಟ್ ನಲ್ಲಿ ನಡೆದ ಅಣಕು ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಇವಿಎಂ ನ ಯಾವ ಗುಂಡಿ ಒತ್ತಿದರೂ ಮತ ಮಾತ್ರ ಬಿಜೆಪಿಗೆ ಬೀಳುತ್ತಿದ್ದನ್ನು ಕಂಡು ಅಧಿಕಾರಿಗಳು ಅವಾಕ್ಕಾಗಿದ್ದರು. [ಮತದಾನ: 121 ಕ್ಷೇತ್ರಗಳ ವೋಟಿಂಗ್ ಲೈವ್ ಅಪ್ಡೇಡ್]

ಆದರೆ, ಅಸ್ಸಾಂನ ಜೋರ್ಹಟ್ ಸಂಸದೀಯ ಕ್ಷೇತ್ರದಲ್ಲಿ ಅಣಕು ವೋಟಿಂಗ್ ಪ್ರಕ್ರಿಯೆ ಸಂದರ್ಭದಲ್ಲಿ ಈ ರೀತಿ ಒಂದೇ ಪಕ್ಷಕ್ಕೆ ವೋಟ್ ಬೀಳುವ ಪ್ರಸಂಗ ನಡೆದಿತ್ತು. ಆದರೆ, ಪುಣೆಯಲ್ಲಿ ರಿಯಲ್ ಮತದಾನದ ವೇಳೆ ಈ ರೀತಿ ಆಗಿದ್ದು ಆತಂಕಕಾರಿಯಾಗಿದೆ.

ಇವಿಎಂನಲ್ಲಿ ಕಂಟ್ರೋಲ್ ಯೂನಿಟ್ ಹಾಗೂ ಬಾಲೆಟ್ ಯೂನಿಟ್ ಇರುತ್ತದೆ ಎರಡನ್ನು ಕೇಬಲ್ ಮೂಲಕ ಬೆಸೆಯಲಾಗಿರುತ್ತದೆ. ನೀಲಿ ಬಣ್ಣದ ಬಟನ್ ಒತ್ತುವ ಮೂಲಕ ಮತದಾನ ಮಾಡಬಹುದು. ಕಂಟ್ರೋಲ್ ಯೂನಿಟ್ ಸೀಲ್ ಆಗಿದ್ದು ಯಾರೂ ಓಪನ್ ಮಾಡಲು ಬರುವುದಿಲ್ಲ. ದೋಷಪೂರಿತ ಯಂತ್ರವನ್ನು ಹಿಂಪಡೆಯಲಾಗಿದ್ದು ಹೊಸ ಇವಿಎಂ ನೀಡಲಾಗಿದ್ದು, ಮತದಾನ ಪ್ರಕ್ರಿಯೆ ಸುಸೂತ್ರವಾಗಿ ಸಾಗಿದೆ. ದೋಷಪೂರಿತ ಯಂತ್ರಗಳ ಪರೀಕ್ಷೆ ನಡೆಸಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. (ಐಎಎನ್ ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pune :Early morning voters, including many senior citizens, were bewildered when an electronic voting machine (EVM) reportedly "transferred" all votes to the Congress.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ