ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇನುಗೂಡಿಗೆ ಕಲ್ಲು ಹೊಡೆದ #MyChoice ಜಾಹೀರಾತು

|
Google Oneindia Kannada News

ಬಾಸ್: ಕಚೇರಿಗೆ ಯಾಕೆ ಲೇಟಾಗಿ ಬಂದಿದ್ದೀರಾ?
ಉದ್ಯೋಗಿ: ಇದು, #MyChoice!
ಬಾಸ್: ನಿನ್ನನ್ನು ಈ ಕೂಡಲೇ ವಜಾ ಮಾಡಿದ್ದೇನೆ.
ಉದ್ಯೋಗಿ: ಯಾಕೆ!?
ಬಾಸ್ : ದಿಸ್ ಇಸ್ # MyChoice!!!

ಹೌದು.... ಮೇಲಿನ ಜೋಕ್ #MyChoice ವಿಡಿಯೋದ ಹಲವಾರು ಮುಖಗಳನ್ನು ತೆರೆದಿಡುತ್ತದೆ. 'ನಾನು ನನ್ನಿಷ್ಟದಂತೆ ಇರ್ತೇನೆ, ಸೆಕ್ಸ್ ಮಾಡಬೇಕಾ? ಬಿಡಬೇಕಾ? ಮದುವೆಗೆ ಮುಂಚೆ ಅದು ಓಕೆನಾ? ಇಲ್ಲವಾ ಇದೆಲ್ಲ ನನ್ನ ಚಿಂತನೆಗೆ ಬಿಟ್ಟಿದ್ದು, ಎಲ್ಲದಕ್ಕೂ ನನ್ನ ಆಯ್ಕೆಯೇ ಅಂತಿಮ, #MyChoice' ... ಇಂಥ ಸಂದೇಶಗಳನ್ನು ನೀಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿವಾದ ಎಬ್ಬಿಸಿದೆ.[ದೀಪಿಕಾ ಎದೆ ಸೀಳುನೋಟ ವಿವಾದದ ಮೇಲೆ ವಾರೆನೋಟ]

ಮಹಿಳಾ ಸಬಲೀಕರಣದ ಹೆಸರಿನಲ್ಲಿ ಫ್ಯಾಷನ್‌ ಮ್ಯಾಗಜೀನ್‌ 'ವೋಗ್‌' ಬಿಡುಗಡೆ ಮಾಡಿರುವ ನಟಿ ದೀಪಿಕಾ ಪಡುಕೋಣೆ ಅಭಿನಯದ '#MyChoice' ವಿಡಿಯೋಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವ್ಯಾಪಾರದ ಉದ್ದೇಶಕ್ಕೆಂದು ಖಾಸಗಿ ಕಂಪನಿಯೊಂದು ಸೆಲೆಬ್ರಿಟಿವೊಬ್ಬರನ್ನು ಬಳಸಿಕೊಂಡು ತಯಾರು ಮಾಡಿರುವ ವಿಡಿಯೋಕ್ಕೆ ಪರವಾಗಿ ಮಾತನಾಡುವರಿಗಿಂತ ವಿರೋಧದ ಅಲೆಯೇ ಹೆಚ್ಚಾಗಿದೆ. ಅಲ್ಲದೇ ಪುರುಷ ಕೇಂದ್ರಿತ ಮೈ ಚಾಯ್ಸ್ ವಿಡಿಯೋ ಸಹ ಬಿಡುಗಡೆಯಾಗಿ ಹಿಟ್ ಪಡೆದುಕೊಳ್ಳುತ್ತಿದೆ.

ನನ್ನ ದೇಹ, ನನ್ನ ಮನಸ್ಸು

ನನ್ನ ದೇಹ, ನನ್ನ ಮನಸ್ಸು

ನಾನು ದಪ್ಪಗಿರಬೇಕೋ, ಸೈಜ್‌ ಝೀರೋ ಆಗಬೇಕೋ, ಅದು ನನ್ನ ಇಚ್ಛೆಯ ವಿಷಯ. ಮದುವೆ ಆಗ ಬೇಕೋ? ಬೇಡವೋ, ಮದುವೆಗಿಂತ ಮುಂಚೆ ಸೆಕ್ಸ್‌ ಮಾಡಬಹುದೋ, ಪರ ಪುರುಷನ ಜತೆ ಸೆಕ್ಸ್‌ ಮಾಡಬಹುದೋ, ಅಥವಾ ಸೆಕ್ಸ್‌ ಮಾಡಲೇಬೇಕಾ? ಇದೆಲ್ಲ ನಮ್ಮ ತೀರ್ಮಾನಕ್ಕೆ ಬಿಟ್ಟದ್ದು ಈ ರೀತಿಯ ಮಾತುಗಳೇ ವೀಡಿಯೋದಲ್ಲಿ ತುಂಬಿದ್ದು ದೀಪಿಕಾ ಪಡುಕೋಣೆ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.

ನಾನು ಯಾರನ್ನೂ ಬೇಕಾದರೂ ಪ್ರೀತಿಸುತ್ತೇನೆ!

ನಾನು ಯಾರನ್ನೂ ಬೇಕಾದರೂ ಪ್ರೀತಿಸುತ್ತೇನೆ!

ನನಗೆ ಸ್ವಾತಂತ್ರ್ಯವಿದೆ. ನಾನು ಯಾರನ್ನು ಬೇಕಾದರೂ ಪ್ರೀತಿಸಿತ್ತೇನೆ. ಅದನ್ನು ಕೇಳುವ ಹಕ್ಕು ನಿಮಗಿಲ್ಲ ಎಂದು ಪರೋಕ್ಷವಾಗಿ ಪುರುಷ ಮನಸ್ಥಿತಿಯನ್ನು ಟೀಕಿಸಲಾಗಿದೆ.

2.34 ನಿಮಿಷದ ವಿಡಿಯೋ

2.34 ನಿಮಿಷದ ವಿಡಿಯೋ

ಮಹಿಳೆಯರು ಯಾವ ರೀತಿ ಬಟ್ಟೆ ಹಾಕಬೇಕು ಎಂಬುದನ್ನು ಅವರಿಗೆ ಹೇಳಬೇಕಾಗಿಲ್ಲ. ಆಯ್ಕೆ ಅವರ ಸ್ವತ್ತು ಎಂಬ ಅರ್ಥದಲ್ಲಿ ಮುಂದುವರಿಯುವ ವಿಡಿಯೋ 2.34 ನಿಮಿಷದ ಕಾಲ ಇದೆ. ಬಹುತೇಕ ಕಪ್ಪು-ಬಿಳುಪು ಮಾದರಿಯಲ್ಲೇ ವಿಡಿಯೋ ಚಿತ್ರಿಸಲಾಗಿದೆ.

ನಿರ್ದೇಶಕರು ಯಾರು

ನಿರ್ದೇಶಕರು ಯಾರು

ಹೋಮಿ ಅದಾಜನಿಯಾ ನಿರ್ಮಿಸಿದ ಈ ವಿಡಿಯೋವನ್ನು ಕೇವಲ ಸೆಕ್ಸ್ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಇದರ ನೈಜ ಉದ್ದೇಶ ಮಹಿಳಾ ಸಬಲೀಕರಣ. ಅದಕ್ಕಾಗಿ ಬೋಲ್ಡ್ ಆಗಿ ಮಾತನಾಡಿದರೆ ತಪ್ಪೇನು ಎಂಬ ಅಭಿಪ್ರಾಯಹಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ

ದೀಪಿಕಾ 'ಸೀಳು' ವಿವಾದ

ದೀಪಿಕಾ 'ಸೀಳು' ವಿವಾದ

ಹಿಂದೊಮ್ಮೆ ಮಾಧ್ಯಮವೊಂದರ ನಡವಳಿಕೆಯನ್ನು ಗಂಭೀರವಾಗಿ ಟೀಕಿಸಿದ್ದ ದೀಪಿಕಾ ' ನಿಮಗೆ ಅದನ್ನು ಬಿಟ್ಟರೇ, ಬೇರೇನೂ ಕಾಣುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದರು. ಈಗ 99 ಮಹಿಳೆಯರ ಧ್ವನಿಗೆ ಧ್ವನಿ ಕೂಡಿಸಿದ್ದಾರೆ.

ಬೇರೆ ರೀತಿಯ ಮಹಿಳೆಯರೂ ಇದ್ದಾರೆ

ದೀಪಿಕಾ ನಿಮಗೆ ಗ್ರಾಮೀಣ ಭಾಗದ, ಹೋರಾಟವನ್ನೇ ಬದುಕಾಗಿರಿಸಿಕೊಂಡಿರುವ ಮಹಿಳೆಯರು ಕಾಣುತ್ತಿಲ್ಲವೇ. ನಿಮ್ಮ ಕೃತಕ ಮಹಿಳಾ ಪರ ಕಣ್ಣೀರನ್ನು, ಹೇಳಿಕೆಯನ್ನು ಬದಲಿಸಿಕೊಳ್ಳಿ' ಎಂಬ ಖಾರವಾದ ಕಮೆಂಟ್ ಗಳಿಗೂ ಬರವಿಲ್ಲ.

ಬದಲಾದ ಗನ್ ಪಾಯಿಂಟ್

ಇಷ್ಟು ದಿನ ಅನುಷ್ಕಾ ಶರ್ಮಾ ಮೇಲೆ ನೆಟ್ಟಿದ್ದ ಬಾಣಗಳು ಇದೀಗ ದೀಪಿಕಾ ಮೇಲೆ ತಿರುಗುತ್ತಿವೆ. ಪ್ರಚಾರಕ್ಕೋಸ್ಕರ ಇಂಥ ವಿವಾದ ಹುಟ್ಟುಹಾಕುವುದರಲ್ಲಿ ಅರ್ಥವಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಚಿತ್ರ ತೆಗೆಯುವುದು #my choice

ಡಿಯರ್, ದೀಪಿಕಾ ಪಡುಕೋಣೆ ಅವರೇ, ನಿಮ್ಮ ಚಿತ್ರ ತೆಗೆಯುವುದು ಮಾಧ್ಯಮ ಪ್ರತಿನಿಧಿಯ ಆಯ್ಕೆ, ಅದಕ್ಕೇಕೆ ಅಂದು ವಿರೋಧ ವ್ಯಕ್ತಪಡಿಸಿ ಮಾತನಾಡಿದ್ರಿ..

ಬಾಸ್-ಉದ್ಯೋಗಿ ಜೋಕ್

ಕೆಲಸಕ್ಕೆ ತಡವಾಗಿ ಬಂದ ಉದ್ಯೋಗಿಗೆ ಬಾಸ್ ಕೇಳುವ ಪ್ರಶ್ನೆಗೆ ಆತ #my choice ಎಂದು ಉತ್ತರ ನೀಡಿದರೆ, ಪರಿಣಾಮ ಏನಾಗುತ್ತದೆ ಎಂಬುದನ್ನು ವಿವರಿಸುವ ಟ್ವೀಟ್

Array

ಅರ್ಥ ಮಾಡಿಕೊಳ್ಳಿ

ದೀಪಿಕಾ ಅವರೇ, ಸ್ವಾತಂತ್ರ್ಯ-ಸ್ವೇಚ್ಛಾಚಾರ, ಸ್ವಾರ್ಥ-ನಂಬಿಕೆ, ಪ್ರೀತಿ-ಕಾಮದ ನಡುವಿನ ವ್ಯತ್ಯಾಸ ಅರ್ಥ ಮಾಡಿಕೊಳ್ಳಿ

ಸಮಾಜಕ್ಕೆ ಏನು ಹೇಳುತ್ತದೆ?

ಇಂಥ ಜಾಹೀರಾತು ಸಮಾಜಕ್ಕೆ ಯಾವ ಸಂದೇಶ ನೀಡುತ್ತದೆ? ಮದುವೆ ಎಂಬ ಪದಕ್ಕೆ ಅರ್ಥವೇ ಇಲ್ಲವೇ? ಮಹಿಳಾ ಸ್ವಾತಂತ್ರ್ಯವನ್ನು ಊ ರೀತಿ ಬಳಸಿಕೊಳ್ಳುವುದು ಸರಿಯೇ? ನಿಜಕ್ಕೂ ಇದರ ಉದ್ದೇಶವೇನು? ಈ ರೀತಿಯ ಹಲವಾರು ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

English summary
Bollywood actress Deepika Padukone dared Indian society and said loudly, "My body, my mind, my choice." The actress along with many other women from different field was seen in a bold video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X