ಪಠಾಣ್ ಕೋಟ್ ದಾಳಿ : ಚೀನಾ ಸಹಾಯ ಕೇಳಲಿದೆ ಭಾರತ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 13 : ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ಜೈಷ್-ಏ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮತ್ತು ಆತನ ಸಹೋದರನನ್ನು ಅಂತರಾಷ್ಟ್ರೀಯ ಭಯೋತ್ಪಾದಕರೆಂದು ಘೋಷಣೆ ಮಾಡುವಂತೆ ಭಾರತ ಚೀನಾವನ್ನು ಒತ್ತಾಯಿಸಲಿದೆ.

ವಾಯುನೆಲೆ ಮೇಲಿನ ದಾಳಿಯ ಸಂಚು ರೂಪಿಸಿದ ಮೌಲಾನಾ ಮಸೂದ್ ಅಜರ್ ಮತ್ತು ಅಬ್ದುಲ್ ರಫಲ್ ಅಸರ್ ಮೇಲೆ ಪಾಕಿಸ್ತಾನ ಕೈಗೊಂಡ ಕ್ರಮಗಳು ತೃಪ್ತಿದಾಯಕವಾಗಿಲ್ಲ. ಈ ಇಬ್ಬರು ಉಗ್ರರು ಪಾಕಿಸ್ತಾನದಲ್ಲಿದ್ದು, ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಭಾರತ ಮನವರಿಕೆ ಮಾಡಿಕೊಡಲಿದೆ. [ಉಗ್ರರು ಕರೆ ಮಾಡಿದ 3 ನಂಬರ್ ಪಾಕಿಸ್ತಾನದ್ದು]

pathankot

ಮೊದಲು ಮೌಲಾನಾ ಮಸೂದ್ ಅಜರ್ ಭಾರತದ ವಶದಲ್ಲಿದ್ದ. ಕಂದಹಾರ್ ವಿಮಾನ ಅಪಹರಣವಾದಾಗ ಆತನನ್ನು ಭಾರತ ಬಿಡುಗಡೆ ಮಾಡಿತ್ತು. ಪಾಕಿಸ್ತಾನಕ್ಕೆ ಹೋದ ಆತ ಜೈಷ್-ಏ-ಮೊಹಮ್ಮದ್ ಉಗ್ರ ಸಂಘಟನೆ ಆರಂಭಿಸಿದ. ಸಂಘಟನೆಗೆ ಆತನೇ ಮುಖ್ಯಸ್ಥನಾಗಿದ್ದು, ಅಬ್ದುಲ್ ರಫಲ್ ಕಾರ್ಯಚರಣೆಯ ನೇತೃತ್ವವನ್ನು ವಹಿಸಿಕೊಂಡಿದ್ದಾನೆ. [ಪಠಾಣ್ ಕೋಟ್ ದಾಳಿ : ಭಾರತವನ್ನು ಲೇವಡಿ ಮಾಡಿದ ಮಸೂದ್]

ಚೀನಾ ಮೇಲೆ ಒತ್ತಡವೇಕೆ? : ಮೌಲಾನಾ ಮಸೂದ್ ಅಜರ್ ಮತ್ತು ಆತನ ಸಹೋದರನ ಮೇಲೆ ಕ್ರಮ ಕೈಗೊಳ್ಳುವಂತೆ ಚೀನಾ ಮೇಲೆ ಒತ್ತಡ ಹೇರುವುದು ಮಹತ್ವದ ಬೆಳವಣಿಗೆಯಾಗಲಿದೆ. ಭಾರತ ಪಠಾಣ್ ಕೋಟ್ ದಾಳಿಯಲ್ಲಿ ಮಸೂದ್ ಕೈವಾಡವಿರುವ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದು, ಅದನ್ನು ಚೀನಾಗೆ ಸಲ್ಲಿಸಲಿದೆ.

ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯನ್ನು ಚೀನಾ ಖಂಡಿಸಿತ್ತು. ದಾಳಿಯ ಕುರಿತು ಸಾಕ್ಷಿ ನೀಡಿ, ಮಸೂದ್ ವಿರುದ್ಧ ಕ್ರಮ ಕೈಗೊಳ್ಳಲು ಪಾಕ್‌ಗೆ ಸೂಚಿಸುವಂತೆ ಚೀನಾಗೆ ಮನವಿ ಮಾಡಲಿದೆ. ಮಸೂದ್ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಅಲ್-ರೆಹಮತ್ ಟ್ರಸ್ಟ್ ವಿರುದ್ಧವೂ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಿದೆ. ಈ ಟ್ರಸ್ಟ್ ಜೈಷ್-ಏ-ಮೊಹಮ್ಮದ್ ಸಂಘಟನೆಗೆ ಹಣಕಾಸಿನ ನೆರವನ್ನು ನೀಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India is likely to urge China in a bid to have Maulana Masood Azhar and his brother Abdul Rauf Asghar as international terrorists. No amount of probe by Pakistan would be satisfactory if the two brothers who run the Jaish-e-Mohammad.
Please Wait while comments are loading...