ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಜೀವ ಬೆದರಿಕೆ ಕರೆ

Posted By:
Subscribe to Oneindia Kannada

ಲಖನೌ, ಆಗಸ್ಟ್ 18: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ದೆಹಲಿ ಪೊಲೀಸರಿಗೆ ಅಪರಿಚಿತರಿಂದ ಕರೆ ಬಂದಿದ್ದು, ಈ ಪ್ರಕರಣವನ್ನು ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳಕ್ಕೆ ವರ್ಗಾಯಿಸಲಾಗಿದೆ.

ರಸ್ತೆಯಲ್ಲಿ ನಮಾಜ್, ಪೊಲೀಸ್ ಠಾಣೆ ಜನ್ಮಾಷ್ಟಮಿ: ಯೋಗಿ ಏನಂದ್ರು?

"ನಾವು ತನಿಖೆಯನ್ನು ಉತ್ತರಪ್ರದೇಶ ಭಯೋತ್ಪಾದಕ ನಿಗ್ರಹ ದಳಕ್ಕೆ ವರ್ಗಾಯಿಸಿದ್ದೇವೆ. ಆ ಕರೆಯನ್ನು ವಾಯ್ಸ್- ಓವರ್ ಇಂಟರ್ನೆಟ್ ಪ್ರೊಟೋಕಾಲ್ ಮೂಲಕ ಮಾಡಲಾಗಿದೆ. ಆದ್ದರಿಂದ ಕರೆ ಮಾಡಿದವರನ್ನು ಪತ್ತೆ ಮಾಡುವುದು ಸಾಧ್ಯವಿಲ್ಲ. ಆದರೆ ನಾವು ಈ ಪ್ರಕರಣದಲ್ಲಿ ಕಾರ್ಯೋನ್ಮುಖರಾಗಿದ್ದೇವೆ" ಎಂದು ಎಡಿಜಿಪಿ (ಕಾನೂನು ಸುವ್ಯವಸ್ಥೆ) ಆನಂದ್ ಕುಮಾರ್ ಹೇಳಿದ್ದಾರೆ.

Death threat call to Uttar Pradesh CM Yogi Adityanath

ದೆಹಲಿ ಪೊಲೀಸ್ ಕಂಟ್ರೋಲ್ ರೂಮ್ ನ ಲ್ಯಾಂಡ್ ಲೈನ್ ಫೋನಿಗೆ ಗುರುವಾರ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಕರೆ ಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಆದಿತ್ಯನಾಥ್ ನ ಬದುಕಿಸಿಕೊಳ್ಳುವುದಕ್ಕೆ ನಿಮಗೆ ಕೆಲವೇ ಗಂಟೆಗಳಿವೆ ಎಂದು ಹೇಳಿ ಫೋನಿಟ್ಟಿದ್ದಾನೆ.

ಇದು ಹುಸಿ ಕರೆ ಇರಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. ಇನ್ನು ಈ ಕರೆ ವಿಚಾರವಾಗಿ ದೆಹಲಿ ಪೊಲೀಸ್ ವಿಶೇಷ ವಿಭಾಗ ಕೂಡ ತನಿಖೆಯಲ್ಲಿ ತೊಡಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Unidentified caller threatened to kill Uttar Pradesh CM Yogi Adityanath. He called to Delhi control room and threatened. Now case has been transferred to Anti Terrorism Squad of Uttar Pradesh.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ