ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಪ್ರಯೋಗ ಮತ್ತೆ ಶುರು ಮಾಡಲು ಸೆರಮ್ ಸಂಸ್ಥೆಗೆ ಅನುಮತಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯು (ಡಿಸಿಜಿಐ) ದೇಶದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ಕೋವಿಶೀಲ್ಡ್‌ನ ಕ್ಲಿನಿಕಲ್ ಪ್ರಯೋಗವನ್ನು ಪುನಃ ಆರಂಭಿಸಲು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಅನುಮತಿ ನೀಡಿದೆ. ಎರಡನೆಯ ಹಂತ ಮತ್ತು ಮೂರನ ಹಂತದ ಪರೀಕ್ಷೆಗಳಿಗೆ ಸ್ವಯಂಸೇವಕರನ್ನು ಬಳಸಿಕೊಳ್ಳದಂತೆ ನೀಡಲಾಗಿದ್ದ ತಡೆಯನ್ನು ಅದು ಹಿಂದಕ್ಕೆ ಪಡೆದುಕೊಂಡಿದೆ.

ಆದರೆ ಅನುಮತಿಯೊಂದಿಗೆ ಡಿಸಿಜಿಐ ಹಲವು ಷರತ್ತುಗಳನ್ನು ಕೂಡ ಸೆರಮ್ ಸಂಸ್ಥೆಗೆ ವಿಧಿಸಿದೆ. ಸ್ಕ್ರೀನಿಂಗ್ ಸಂದರ್ಭದಲ್ಲಿ ಹೆಚ್ಚಿನ ಜಾಗರೂಕತೆ, ಸ್ವಯಂ ಸೇವಕರ ಕುರಿತು ಹೆಚ್ಚುವರಿ ವಿವರ ಒದಗಿಸುವುದು, ಲಸಿಕೆ ಪ್ರಯೋಗಕ್ಕೆ ಒಳಗಾದ ಸ್ವಯಂ ಸೇವಕರ ಆರೋಗ್ಯದ ಬಗ್ಗೆ ನಿರಂತರ ಪರಿಶೀಲನೆ ಮಾಡುವುದು ಮುಂತಾದ ನಿಯಮಗಳನ್ನು ಸೆರಮ್ ಸಂಸ್ಥೆ ಪಾಲಿಸಬೇಕಿದೆ.

ಕೊವಿಡ್ 19: ಯಾವ ದೇಶದಲ್ಲಿ ಅತಿ ಹೆಚ್ಚು ಸಾವು, ಚೇತರಿಕೆ?ಕೊವಿಡ್ 19: ಯಾವ ದೇಶದಲ್ಲಿ ಅತಿ ಹೆಚ್ಚು ಸಾವು, ಚೇತರಿಕೆ?

ವಿಪತ್ತಿನ ಸಮಯಗಳ ನಿರ್ವಹಣೆಗೆ ಶಿಷ್ಟಾಚಾರಗಳಿಗೆ ಅನುಗುಣವಾಗಿ ಬಳಸಲಾಗುವ ವೈದ್ಯಕೀಯ ಕ್ರಮಗಳ ವಿವರಗಳನ್ನು ಸಹ ಡಿಸಿಜಿಐಗೆ ಸಲ್ಲಿಸುವಂತೆ ಎಸ್‌ಐಐಗೆ ಸೂಚನೆ ನೀಡಲಾಗಿದೆ.

DCGI Gives Nod To Serum Institute To Resume Oxford COVID-19 Vaccine Trial In India

Recommended Video

Diganth ಹಾಗು Aindrita Ray ಮೊದಲ ದಿನದ ವಿಚಾರಣೆ ಹೇಗಾಯ್ತು | Oneindia Kannada

ಆಕ್ಸ್‌ಫರ್ಡ್ ವಿ.ವಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ಔಷಧ ದಿಗ್ಗಜ ಸಂಸ್ಥೆ ಆಸ್ಟ್ರಾಜೆನೆಕಾ ಜತೆಗೂಡಿ ಉತ್ಪಾದಿಸಲಾಗುತ್ತಿದೆ. ಭಾರತದಲ್ಲಿ ಸೆರಮ್ ಸಂಸ್ಥೆ ಇದನ್ನು ತಯಾರಿಸುತ್ತಿದೆ. ಬ್ರಿಟನ್‌ನಲ್ಲಿ ಪ್ರಯೋಗಕ್ಕೆ ಒಳಪಟ್ಟಿದ್ದ ಸ್ವಯಂಸೇವಕರೊಬ್ಬರಲ್ಲಿ ಅಸಹಜ ರೀತಿಯಲ್ಲಿ ಆರೋಗ್ಯ ಸಮಸ್ಯೆ ಕಂಡಿದ್ದರಿಂದ ಬ್ರಿಟನ್ ಸೇರಿದಂತೆ ನಾಲ್ಕು ದೇಶಗಳಲ್ಲಿ ಪ್ರಯೋಗಕ್ಕೆ ತಡೆ ನೀಡಲಾಗಿತ್ತು. ಭಾರತದಲ್ಲಿಯೂ ಎರಡು ಮತ್ತು ಮೂರನೇ ಹಂತದ ಪ್ರಯೋಗ ನಿಲ್ಲಿಸುವಂತೆ ಸೆ. 11ರಂದು ಸೆರಮ್ ಸಂಸ್ಥೆಗೆ ಡಿಸಿಜಿಐ ಸೂಚನೆ ನೀಡಿತ್ತು.

English summary
Drugs Controller General Of India (DCGI) on Tuesday gave permission to Serum Institute of India to resume clinical trial of the Oxford Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X