ಮಗ ಹುಟ್ಟಿದ ಸಂತೋಷಕ್ಕೆ ಕುಡಿತದ ಪಾರ್ಟಿಗಾಗಿ ಹಠ ಹಿಡಿದು ದಲಿತನ ಹತ್ಯೆ!
ಬರೇಲಿ ಆಗಸ್ಟ್ 3: 20ರ ಹರೆಯದ ನಾಲ್ವರು ಸಹೋದರರು 25ರ ಹರೆಯದ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಮದ್ಯದ ಪಾರ್ಟಿ ನಡೆಸಲು ನಿರಾಕರಿಸಿದ್ದಕ್ಕೆ ಥಳಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಗಾಯಾಳು ಬುಧವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಸಚಿನ್ ಕುಮಾರ್ ಅವರ ಕುಟುಂಬದವರು ನೀಡಿದ ದೂರಿನ ಪ್ರಕಾರ, ಘಟನೆ ಜುಲೈ 30 ರಂದು ನಡೆದಿತ್ತು. ಆದರೆ ಪ್ರಕರಣದ ಎಫ್‌ಐಆರ್ ಅನ್ನು ಆಗಸ್ಟ್ 1 ರಂದು ದಾಖಲಿಸಲಾಗಿದೆ. ಮೃತನನ್ನು ಸಚಿನ್ ಕುಮಾರ್ ಎಂದು ಗುರುತಿಸಲಾಗಿದೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಗ್ರಾಮೀಣ) ರಾಜ್‌ಕುಮಾರ್ ಅಗರ್ವಾಲ್, "ಮರಣೋತ್ತರ ಪರೀಕ್ಷೆ ಮುಗಿದ ನಂತರ ಎಸ್‌ಸಿ/ಎಸ್‌ಟಿ ಕಾಯ್ದೆಯ ಜೊತೆಗೆ ಐಪಿಸಿಯ ಸೆಕ್ಷನ್ 304 (ಅಪರಾಧ ನರಹತ್ಯೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬುಧವಾರ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಜೈಲಿಗೆ ಕಳುಹಿಸಲಾಗಿದೆ. ಪ್ರಕರಣದ ನಾಲ್ಕನೇ ಆರೋಪಿಯನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಫರೀದ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪಾರ್ತಾರಾ ಗ್ರಾಮದ ನಿವಾಸಿ ಹಾಗೂ ರೈತ ಸಚಿನ್ ಕುಮಾರ್ ಅವರು ಪತ್ನಿ ಶಿವಾನಿ, ಅವರ ಒಂದು ತಿಂಗಳ ಮಗ ಮತ್ತು ಅವರ ತಾಯಿ ಗೀತಾ ದೇವಿ ಅವರನ್ನು ಅಗಲಿದ್ದಾರೆ.
ನನ್ನ ಸೊಸೆ ಶಿವಾನಿ ಜುಲೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆಗ ನನ್ನ ಮಗ ಸಚಿನ್ ಗ್ರಾಮದಲ್ಲಿ ಸಿಹಿ ಹಂಚಿದರು. ನಂತರ ವಿಕಾಸ್ ಕುಮಾರ್ ಮತ್ತು ಅವರ ಮೂವರು ಸಹೋದರರು ಬಲವಂತವಾಗಿ ನಮ್ಮ ಮನೆಗೆ ನುಗ್ಗಿ ಸಿಹಿ ನೀಡುವಂತೆ ಕೇಳಿದರು. ಮದ್ಯ ಖರೀದಿಸಲು ಹಣ ಕೇಳಿದರು. ಘಟನೆ ಸಂಭವಿಸಿದಾಗ ನಾನು ಮತ್ತು ನನ್ನ ಮಗ ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು. ಆಕೆ ನಿರಾಕರಿಸಿದಾಗ ಅವರು ಅವಳೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ಬಳಿಕ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ.
"ನಮಗೆ ವಿಷಯ ತಿಳಿದ ನಂತರ ನಾವು ಮನೆಗೆ ಧಾವಿಸಿದೆವು. ಅವರು ನನ್ನ ಮಗನನ್ನು ಹಿಡಿದು ಮರಕ್ಕೆ ಕಟ್ಟಿ ರಾಡ್ ಮತ್ತು ದೊಣ್ಣೆಗಳಿಂದ ಹೊಡೆದರು" ಎಂದು ದೇವಿ ಹೇಳಿಕೊಂಡಿದ್ದಾರೆ.












Click it and Unblock the Notifications