ಮಾಂಡೌಸ್ ಚಂಡಮಾರುತ: ತಮಿಳುನಾಡಿನಲ್ಲಿ ಮಳೆ ಅರ್ಭಟಕ್ಕೆ ಧರೆಗುರುಳಿದ ಮರಗಳು- 4 ಜನ ಸಾವು
ಮಾಂಡೌಸ್ ಚಂಡಮಾರುತ ತೀವ್ರಗೊಂಡಿದ್ದು ಅಧಿಕ ಮಳೆ ಗಾಳಿಗೆ ತಮಿಳುನಾಡಿನ ಹಲವೆಡೆ ಮರಗಳು ಧರೆಗುರುಳಿವೆ. ಜೊತೆಗೆ ಅಲ್ಲಲ್ಲಿ ಭೂಕುಸಿತದ ವರದಿಗಳಾಗಿವೆ. ಮಾಂಡೌಸ್ ಚಂಡಮಾರುತದಿಂದ ದಕ್ಷಿಣ ರಾಜ್ಯಕ್ಕೆ ಭಾರೀ ಮಳೆಯನ್ನು ತಂದಿದೆ. ಚಂಡಮಾರುತ ತಮಿಳುನಾಡಿನ ಕರಾವಳಿಯನ್ನು ದಾಟಿ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುತ್ತದೆ. ಡಿಸೆಂಬರ್ 10 ರ ನಂತರ ವೇಳೆಗೆ ಕ್ರಮೇಣ ಕಡಿಮೆಯಾಗಲಿದೆ ಎಂದು ಐಎಂಡಿ ಆರಂಭದಲ್ಲಿ ಟ್ವೀಟ್‌ನಲ್ಲಿ ತಿಳಿಸಿದೆ. ಚೆನ್ನೈನಲ್ಲಿ ಸುಮಾರು 400 ಮರಗಳು ಬಿದ್ದಿವೆ ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ. ಚಂಡಮಾರುತದಿಂದ ತಮಿಳುನಾಡಿನಲ್ಲಿ 4 ಜನ ಸಾವನ್ನಪ್ಪಿದ್ದು ಹಲವೆಡೆ ವಿದ್ಯುತ್ ಕಡಿತಗೊಂಡಿದೆ.
ಇಂದು ಮಾಂಡೌಸ್ ಚಂಡಮಾರುತ ಮಧ್ಯರಾತ್ರಿ 2 ಗಂಟೆಗೆ ಮಾಮಲ್ಲಪುರಂ ಕರಾವಳಿಯನ್ನು ದಾಟಿದೆ. ಹೀಗಾಗಿ ಒಟ್ಟು 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತ ರಾಜ್ಯವನ್ನು ದಾಟುತ್ತಿದ್ದಂತೆಯೇ ಚೆನ್ನೈನ ಉಪನಗರವಾದ ಕಟ್ಟುಪಾಕ್ಕಂನಲ್ಲಿ ಅತಿ ಹೆಚ್ಚು (16 ಸೆಂ.ಮೀ) ಮಳೆ ದಾಖಲಾಗಿದೆ.
ಶುಕ್ರವಾರ ತಡರಾತ್ರಿಯಿಂದ ಸುರಿದ ಅಧಿಕ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಶನಿವಾರ ಮುಂಜಾನೆ ಭೂಕುಸಿತ ಉಂಟಾಗಿರುವ ವರದಿಗಳಾಗಿವೆ. ಬೂಕುಸಿತದಿಂದ ಮರಗಳು ಧರೆಗುರುಳಿವೆ.
|
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಮಳೆಯಿಂದಾಗಿ ಮದುರಾಂತಕಂ, ಈಸ್ಟ್ ಕೋಸ್ಟ್ ರೋಡ್, ಹಳೆ ಮಹಾಬಲಿಪುರಂ ರಸ್ತೆ ಸೇರಿದಂತೆ ಚೆನ್ನೈನ ಹಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಒಟ್ಟು 16 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಮಳೆ ರಜೆ ಘೋಷಿಸಲಾಗಿದ್ದು, ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂಜಾನೆ 4 ಗಂಟೆಯವರೆಗೆ ಸ್ಥಗಿತಗೊಂಡಿದ್ದ ಎಲ್ಲಾ ಸರ್ಕಾರಿ ಬಸ್‌ಗಳು ಮತ್ತೆ ಕಾರ್ಯಾಚರಣೆ ಆರಂಭಿಸಿವೆ.
|
ತೀವ್ರ ಗಾಳಿಯಿಂದ ಹಾರಿಹೋದ ಇಂಧನ ಕೇಂದ್ರದ ಮೇಲ್ಛಾವಣಿ
ಕಳೆದ ರಾತ್ರಿ ಮಾಂಡೌಸ್ ಚಂಡಮಾರುತದಿಂದಾಗಿ ಭಾರೀ ಗಾಳಿ ಮತ್ತು ಮಳೆಯಿಂದಾಗಿ ಚೆನ್ನೈನ ಎಗ್ಮೋರ್‌ನಲ್ಲಿರುವ ಇಂಧನ ಕೇಂದ್ರದ ಮೇಲ್ಛಾವಣಿ ಕೂಡ ಕುಸಿದಿದೆ. ಗಾಳಿಯ ರಭಸಕ್ಕೆ ಆವರಣದಲ್ಲಿರುವ ಮರವೊಂದು ಉರುಳಿ ಬಿದ್ದಿದೆ. ಜೊತೆಗೆ ಕೆಟ್ಟ ಹವಾಮಾನದಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ 13 ದೇಶೀಯ ಮತ್ತು ಮೂರು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. "ಪ್ರಯಾಣಿಕರು ಹೆಚ್ಚಿನ ನವೀಕರಣಗಳಿಗಾಗಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸಲು ವಿನಂತಿಸಲಾಗಿದೆ" ಎಂದು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟ್ವೀಟ್ ಮಾಡಿದೆ.
|
ಪ್ರವಾಹ ಪರಿಹಾರ ಸಾಮಗ್ರಿಗಳನ್ನು ನೀಡಿದ ಸಿಎಂ
ಭದ್ರತೆ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ತಮಿಳುನಾಡಿನಲ್ಲಿ 16,000 ಪೊಲೀಸ್ ಸಿಬ್ಬಂದಿ ಮತ್ತು 1,500 ಗೃಹ ರಕ್ಷಕರನ್ನು ನಿಯೋಜಿಸಲಾಗಿದೆ ಮತ್ತು 12 ಜಿಲ್ಲಾ ವಿಪತ್ತು ನಿರ್ವಹಣಾ ಪಡೆಗಳ ತಂಡಗಳಿಗೆ ಹೆಚ್ಚುವರಿಯಾಗಿ ಟಿಎನ್ ರಾಜ್ಯ ವಿಪತ್ತು ನಿರ್ವಹಣಾ ಪಡೆಯ 40 ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ. ಇಂದು ಮುಂಜಾನೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಚೆನ್ನೈನ ಕಾಸಿಮೇಡು ಪ್ರದೇಶದಲ್ಲಿ ಮಾಂಡೌಸ್ ಚಂಡಮಾರುತದ ಸಂತ್ರಸ್ತರಿಗೆ ಪ್ರವಾಹ ಪರಿಹಾರ ಸಾಮಗ್ರಿಗಳು ಮತ್ತು ಆಹಾರವನ್ನು ವಿತರಿಸಿದರು.
ಶನಿವಾರ ಮುಂಜಾನೆ ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಮತ್ತು ರಾಯಲಸೀಮಾ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಎಪಿ ಸರ್ಕಾರದ ಸ್ಥಿತಿ ವರದಿಯ ಪ್ರಕಾರ, ತಿರುಪತಿ ಜಿಲ್ಲೆಯ ನಾಯ್ಡುಪೇಟಾದಲ್ಲಿ ಕಳೆದ 24 ಗಂಟೆಗಳಲ್ಲಿ 281.5 ಮಿಮೀ ಮಳೆಯಾಗಿದ್ದು, ಶನಿವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಿದೆ.
|
ಪರಿಹಾರ ಶಿಬಿರಗಳನ್ನು ತೆರೆಯಲು ಆಂಧ್ರ ಸಿಎಂ ಸೂಚನೆ
ಅಧಿಕೃತ ಮಾಹಿತಿಯ ಪ್ರಕಾರ, ಡಿಸೆಂಬರ್ 8-10 ರ ಅವಧಿಯಲ್ಲಿ ಭಾರೀ ಮಳೆಯಿಂದಾಗಿ ಆರು ಜಿಲ್ಲೆಗಳಲ್ಲಿ ಹರಡಿರುವ 89 ಲಕ್ಷ ಚಂದಾದಾರರಿಗೆ ಕಾಮನ್ ಅಲರ್ಟ್ ಪ್ರೋಟೋಕಾಲ್ (ಸಿಎಪಿ) ಮೂಲಕ ಸೈಕ್ಲೋನ್ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಚಂಡಮಾರುತ ಸಂಬಂಧಿತ ಮಳೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಎಸ್‌ಪಿಎಸ್‌ಆರ್ ನೆಲ್ಲೂರು, ತಿರುಪತಿ, ಚಿತ್ತೂರು ಮತ್ತು ಅನ್ನಮಯ್ಯ ಜಿಲ್ಲೆಗಳ ಕಲೆಕ್ಟರ್‌ಗಳು ಜಾಗರೂಕರಾಗಿರಬೇಕು ಮತ್ತು ಅಗತ್ಯವಿರುವಲ್ಲೆಲ್ಲಾ ಪರಿಹಾರ ಶಿಬಿರಗಳನ್ನು ತೆರೆಯಬೇಕು ಎಂದು ಅವರು ಸೂಚನೆ ನೀಡಿದರು. ಭಾರೀ ಮಳೆಯಾಗುವ ನಿರೀಕ್ಷೆಯಿರುವ ಪ್ರದೇಶಗಳಲ್ಲಿ ಜನರು ಹೊರಗೆ ಹೋಗದಂತೆ ನೋಡಿಕೊಳ್ಳುವಂತೆ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.












Click it and Unblock the Notifications