Cyclone Mandaus Effect : ಮಾಂಡೌಸ್ ಚಂಡಮಾರುತ: ತಮಿಳುನಾಡು-ಆಂಧ್ರದಲ್ಲಿ ಅಧಿಕ ಮಳೆ, ವಿಮಾನ ಹಾರಾಟ ರದ್ದು
ದೆಹಲಿ
ಡಿಸೆಂಬರ್ 10: ದೇಶದೆಲ್ಲೆಡೆ ಅಧಿಕ ಚಳಿಯಿಂದಾಗಿ ಜನ ಮನೆಬಿಟ್ಟು ಹೊರಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮಾಂಡೌಸ್ ಚಂಡಮಾರುತದಿಂದಾಗಿ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ವಿಮಾನ ಹಾರಾಟ ರದ್ದು ಮಾಡಲಾಗಿದೆ. ತಮಿಳುನಾಡು ಮತ್ತು ಆಂಧ್ರದ ಕರಾವಳಿ ಪ್ರದೇಶಗಳಲ್ಲಿ ಮಳೆ ಆರಂಭವಾಗಿದೆ. ಪ್ರಸ್ತುತ, ಚೆಂಗಲ್ಪಟ್ಟು, ವಿಲ್ಲುಪುರಂ ಮತ್ತು ಕಾಂಚೀಪುರಂ ಮತ್ತು ಚೆನ್ನೈ ಭಾರೀ ಮಳೆಯ ಹಿಡಿತದಲ್ಲಿದೆ. ಚಂಡಮಾರುತದ ಪ್ರಭಾವಕ್ಕೆ ಕೊಡೈಕೆನಾಲ್‌ನ ಹಲವೆಡೆ ಮರಗಳು ಉರುಳಿ ರಸ್ತೆಗೆ ಬಿದ್ದಿವೆ. ಹವಾಮಾನ ವೈಪರೀತ್ಯದಿಂದಾಗಿ ಚೆನ್ನೈ ವಿಮಾನ ನಿಲ್ದಾಣದಿಂದ ಹಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದ್ದು, ಕರಾವಳಿ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ತಡೆಯಲಾಗಿದೆ. id="toptextpromo"> id='are-slot-1' class='oiad oi-axt oiadv'>ಸಾಮಾಜಿಕ
ಜಾಲತಾಣಗಳಲ್ಲಿ ವೈರಲ್ ಆದ ಫೋಟೋಗಳ ಪ್ರಕಾರ 'ಮಾಂಡೌಸ್'ನ ಪ್ರಭಾವದಿಂದ ನಾಗಪಟ್ಟಣಂ ತಿರುಚ್ಚಿಯಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಸಮುದ್ರದಲ್ಲಿ ಎತ್ತರದ ಅಲೆಗಳು ಏಳುತ್ತಿವೆ. ಹಾಗಾಗಿ ಇದರಿಂದ ಅಪಾರ ಹಾನಿಯಾಗಿವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದಾಗಿ ಆಡಳಿತ ಈ ಚಂಡಮಾರುತವನ್ನು ಎದುರಿಸಲು ಸಂಪೂರ್ಣ ಸನ್ನದ್ಧವಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಗಮನಾರ್ಹವೆಂದರೆ ಪ್ರಸ್ತುತ ತಮಿಳುನಾಡಿನ 10 ಜಿಲ್ಲೆಗಳಲ್ಲಿ 12 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. id='are-slot-2' class='oiad oi-axt oiadv'>
2 ಸಬ್ ಇನ್ಸ್‌ಪೆಕ್ಟರ್ 24 ಪೊಲೀಸ್ ನಿಯೋಜನೆ
ಹವಾಮಾನದ ಬಗ್ಗೆ ಮಾಹಿತಿ ನೀಡಿದ ಎನ್‌ಡಿಆರ್‌ಎಫ್ ಕಮಾಂಡರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಸಂದೀಪ್ ಕುಮಾರ್ ಮಾಧ್ಯಮಗಳಿಗೆ 'ಮಾಂಡೌಸ್ ಚಂಡಮಾರುತವನ್ನು ಎದುರಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ, ನಮ್ಮ ಬಳಿ ಎಲ್ಲಾ ಉಪಕರಣಗಳಿವೆ. ನನ್ನ ತಂಡದ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳು ಮತ್ತು 24 ಪೊಲೀರ್ ಇಲ್ಲಿದ್ದಾರೆ' ಎಂದರು.

ತಮಿಳುನಾಡು ಆಂಧ್ರದಲ್ಲಿ ಗಾಳಿಯೊಂದಿಗೆ ಮಳೆ
ಅಂದಾಜಿನ ಪ್ರಕಾರ, ಮಾಂಡೌಸ್ ಕಾರೈಕಾಲ್‌ನಿಂದ ಸುಮಾರು 420 ಕಿಮೀ ದೂರದಲ್ಲಿದೆ ಮತ್ತು ಇದು ಇಂದು ಮಧ್ಯರಾತ್ರಿ ಉತ್ತರ ತಮಿಳುನಾಡು, ದಕ್ಷಿಣ ಆಂಧ್ರ ಪ್ರದೇಶ, ಪುದುಚೇರಿ ಮತ್ತು ಶ್ರೀಹರಿಕೋಟಾವನ್ನು ದಾಟಬಹುದು. ಹೀಗಾಗಿ ಇಂದು ಮತ್ತು ನಾಳೆ ತಮಿಳುನಾಡು, ಆಂಧ್ರ ಹೊರತುಪಡಿಸಿ ಕೇರಳ, ಕರ್ನಾಟಕದಲ್ಲಿ ಮಳೆಯಾಗಲಿದ್ದು, ಜನರು ಜಾಗೃತರಾಗಬೇಕಿದೆ. ಜನರು ಮನೆಯಿಂದ ಹೊರಗೆ ಹೋಗುವಾಗ ಹವಾಮಾನ ಪರಿಸ್ಥಿತಿಯನ್ನು ತಿಳಿದುಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಚಳಿಯೊಂದಿಗೆ ಮಳೆ
ಮಾಂಡೌಸ್ ಚಂಡಮಾರುತದಿಂದಾಗಿ ಅಧಿಕ ಮಳೆಯಾಗುವ ಮುನ್ಸೂಚನೆ ಇದ್ದು ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಹಾಸನ, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಹಲವೆಡೆ ಡಿಸೆಂಬರ್ 13ರವರೆಗೆ ಹಳದಿ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕದ ಹಲವೆಡೆ ಮೋಡ ಕವಿತ ವಾತಾವರಣವಿದ್ದು ಜಿಟಿ ಜಿಟಿ ಮಳೆಯಾಗುತ್ತಿದೆ. ಅಧಿಕ ಚಳಿಯೊಂದಿಗೆ ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಜನ ಕಿರಿಕಿರಿ ಅನುಭವಿಸುವಂತಾಗಿದೆ. ನಿನ್ನೆ ಸಂಜೆಯಿಂದಲೇ ಬೆಂಗಳೂರು ಸೇರಿದಂತೆ ಹಲವೆಡೆ ತುಂತುರು ಮಳೆ ಶುರುವಾಗಿದ್ದು ಇಂದೂ ಕೂಡ ಮುಂದುವರೆದಿದೆ. ಬೆಳಗಿನ ಜಾವವೇ ಮಳೆಯಿಂದಾಗಿ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗಿದೆ. ಇನ್ನೂ ಹಲವೆಡೆ ವಾರಾಂತ್ಯದಲ್ಲಿ ಜನ ಮಳೆಯನ್ನು ಆನಂದಿಸುತ್ತಿದ್ದಾರೆ.

ಇತರ ರಾಜ್ಯಗಳ ಸ್ಥಿತಿ
ದಕ್ಷಿಣ ಭಾರತ ಚಂಡಮಾರುತದ ನೆರಳಿನಲ್ಲಿದೆ. ಮತ್ತೊಂದೆಡೆ, ಉತ್ತರ ಭಾರತ ದುರ್ಬಲಗೊಂಡಿದೆ. ಇದರಿಂದಾಗಿ ಹಿಮಾಚಲ-ಕಾಶ್ಮೀರದಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆ ಮತ್ತು ಹಿಮಪಾತವಿಲ್ಲ. ಹಾಗಾಗಿ ಬಯಲು ಸೀಮೆಯಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆಗಳಿವೆ. ದೆಹಲಿ-ಎನ್‌ಸಿಆರ್‌ನಲ್ಲಿ ಮುಂದಿನ ದಿನಗಳಲ್ಲಿ ಮಂಜು ಮುಸುಕಿದ ವಾತಾವರಣವಿದ್ದು, ಮತ್ತೊಂದೆಡೆ ಯುಪಿ, ಬಿಹಾರ, ಎಂಪಿ ಮತ್ತು ಛತ್ತೀಸ್‌ಗಢದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ರಾಜಸ್ಥಾನದಲ್ಲಿ ಚಳಿಗಾಳಿ ಕಾಣಿಸಿಕೊಂಡಿದೆ.












Click it and Unblock the Notifications