ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ, ಒಡಿಶಾ ಕರಾವಳಿಯಲ್ಲಿ ಹುಡ್ ಹುಡ್

By Mahesh
|
Google Oneindia Kannada News

ವಿಶಾಖಪಟ್ಟಣಂ, ಅ.12: ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಹುಡ್​ ಹುಡ್​ ಚಂಡಮಾರುತ ನಿರೀಕ್ಷೆಗೂ ಮೀರಿ ಆಬ್ಬರಿಸಿದೆ.ಚಂಡಮಾರುತ ಬಂದು ಹೋದ ಮೇಲೂ ಆಂಧ್ರಪ್ರದೇಶದ ನಾಲ್ಕು ಜಿಲ್ಲೆಗಳು, ಒಡಿಶಾದ ಕರಾವಳಿ ಸೇರಿದಂತೆ ಹಲವೆಡೆ ಭಾರಿ ಮಳೆ ಮುಂದುವರೆದಿದೆ.

17.45: ಹುಡ್ ಹುಡ್ ಚಂಡಮಾರುತ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿಗೆ ಮಾತ್ರ ಹಾನಿ ಮಾಡಿಲ್ಲ. ಅನೇಕ ರಾಜ್ಯಗಳ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಹುಡ್ ಹುಡ್ ಚಂಡಮಾರುತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಎಂದು ಪ್ರಧಾನಿ ಮೋದಿ ಅವರಿಗೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೋರಿದ್ದಾರೆ.

4.45: ಆಂಧ್ರ ಹಾಗೂ ಒಡಿಶಾ ಕರಾವಳಿಯನ್ನು ತತ್ತರಿಸುವಂತೆ ಮಾಡಿದ ಹುಡ್ ಹುಡ್ ಸುಮಾರು 5 ಜನರನ್ನು ಬಲಿ ಪಡೆದುಕೊಂಡಿದೆ.

15.05:
ಹುಡ್ ಹುಡ್ ನಿಂದಾಗಿ ಸುಮಾರು 62 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. 51 ರೈಲುಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ದಕ್ಷಿಣ ಕೇಂದ್ರ ವಲಯ ರೈಲ್ವೆ ಇಲಾಖೆ ಪ್ರಕಟಿಸಿದೆ.

14.05: ಇನ್ನೊಂದಿಷ್ಟು ಹೆಲ್ಪ್ ಲೈನ್ ಗಳು: ವೈಜಾಗ್:1800 42500002, ಶ್ರೀಕಾಕುಳಂ :18004256625, ವಿಜಯನಗರಂ: 1070

13.15:
ಆಂಧ್ರಪ್ರದೇಶದಲ್ಲಿ ಇದುವರೆವಿಗೂ ಸುಮಾರು 5 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

13.05:
ಹುಡ್ ಹುಡ್ ರುದ್ರನರ್ತನದಿಂದಾಗಿ ರಾಷ್ಟ್ರೀಯ ಹೆದ್ದಾರಿ 5ರಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

Cyclone Hudhud

12.50: ವೈಜಾಗ್ ನ 8 ಘಟಕಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ನಗರದಲ್ಲಿ ಸಂಪೂರ್ಣವಾಗಿ ವಿದ್ಯುತ್ ಪೂರೈಕೆ ನಿಂತಿದೆ.

12.40: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್: ಸಂತ್ರಸ್ತರಿಗೆ 600ಕ್ಕೂ ತಾತ್ಕಾಲಿಕ ಶೆಡ್ ಗಳಲ್ಲಿ ಊಟ, ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

12.25: ವಿಶೇಷ ಹೆಲ್ಪ್ ಲೈನ್ 1948(ಒಡಿಶಾ), ಆಂಧ್ರಪ್ರದೇಶ (1949).

12.15: ಒಡಿಶಾದ ಗೋಪಾಲಪುರಂನಿಂದ ಚಂಡಮಾರುತ ಕೇಂದ್ರಿಕೃತವಾಗಿ ಅಬ್ಬರ ಸೃಷ್ಟಿಸುತ್ತಿದೆ.

12.10:
ಒಡಿಶಾದಲ್ಲಿ ಭಾನುವಾರ ಬೆಳಗ್ಗೆಯಿಂದ ಸುಮಾರು 10 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

11.50: ಹುಡ್ ಹುಡ್ ದಾಳಿಗೆ ಸಿಲುಕಿದ ವಿಶಾಖಪಟ್ಟಣಂ ನಲುಕಿರುವ ಚಿತ್ರಗಳನ್ನು ಟ್ವೀಟ್ ನಲ್ಲಿ ನೋಡಿ


11.40: ಹುಡ್ ಹುಡ್ ಚಂಡಮಾರುತ ತನ್ನ ವೇಗವನ್ನು 205 ಕಿ.ಮೀ/ಗಂಟೆಗೆ ಹೆಚ್ಚಿಸಿಕೊಂಡಿದ್ದು, ವಿಶಾಖಪಟ್ಟಣಂನಲ್ಲಿ ಮೊದಲ ಬಲಿ ಪಡೆದುಕೊಂಡಿದೆ. ಭೂ ಕುಸಿತದಿಂದಾಗಿ ಇಬ್ಬರು ಮೃತಪಟ್ಟಿರುವ ವರದಿಗಳು ವಿಶಾಖಪಟ್ಟಣಂ ಹಾಗೂ ಶ್ರೀಕಾಕುಳಂನಿಂದ ಬಂದಿದೆ.

11.35: ಶ್ರೀಕಾಕುಳಂನ ಕಡಲತೀರದಲ್ಲಿ ನುರಿತ ಈಜುಗಾರರ 5 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಜಲಸೇನೆ ಹಾಗೂ ವಿಪತ್ತು ರಕ್ಷಣಾ ದಳದ ಸಿಬ್ಬಂದಿ ತ್ವರಿತ ಗತಿ ನೆರವು ನೀಡಲು ಸನ್ನದ್ಧರಾಗಿದ್ದಾರೆ.

10.45: ಕ್ಯಾಬಿನೆಟ್ ಕಾರ್ಯದರ್ಶಿ ಅಜಿತ್ ಸೇಠ್ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ಜೊತೆ 10.30ರಿಂದ ಸಭೆ ನಡೆಸಿದ್ದು, ಕಾಲ ಕಾಲದ ಮಾಹಿತಿ ಹಾಗೂ ಎಚ್ಚರಿಕೆ ಸಂದೇಶವನ್ನು ಪ್ರಸಾರಿಸಲು ಕರೆ ನೀಡಿದ್ದಾರೆ.


10.35: 11 ಗಂಟೆಯಿಂದ 12.30ರ ಅವಧಿಯಲ್ಲಿ ಕಳಿಂಗ, ಭೀಮುನಿಪಟ್ಟಣಂ ಕರಾವಳಿಯಲ್ಲಿ ಹುಡ್ ಹುಡ್ ನುಗ್ಗಲಿದ್ದು ಸುಮಾರು 50 ಕಿ.ಮೀ ವಿಸ್ತೀರ್ಣ ಸುಮಾರು 2 ಮೀಟರ್ ಎತ್ತರದ ಅಲೆ ಸೃಷ್ಟಿಸುವ ಸಾಧ್ಯತೆಯಿದೆ.

10.25: ಆಂಧ್ರಪ್ರದೇಶದ ವೈಜಾಗ್​, ವಿಶಾಖಪಟ್ಟಣಂ ಸೇರಿದಂತೆ ನಾಲ್ಕು ಜಿಲ್ಲೆಗಳ 365 ಗ್ರಾಮಗಳು ಚಂಡಮಾರುತ ಭೀತಿಯಲ್ಲಿ ಸಿಲುಕಿವೆ.
10.20: ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಭಾರೀ ಮಳೆ ಆರಂಭವಾಗಿದ್ದು, ಎಲ್ಲೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ.

Cyclone Hudhud News Updates Andhra Pradesh Odisha Oct 12

10.15: ಎರಡೂ ರಾಜ್ಯಗಳಲ್ಲಿ ಸುಮಾರು 70 ರೈಲುಗಳ ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ. ವಾಯು, ಜಲ ಹಾಗೂ ರಸ್ತೆ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ.

10.10: ಜನರ ರಕ್ಷಣೆ ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ವಾಯು ಪಡೆಯಿಂದ 10 ಹೆಲಿಕಾಪ್ಟರ್​, ನೌಕಾ ನೆಲೆ ಹಾಗೂ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಪಡೆಗಳು ಸರ್ವ ಸನ್ನದ್ಧವಾಗಿವೆ.

10.00: ಕರಾವಳಿ ಜಿಲ್ಲೆಗಳಲ್ಲಿ 146 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ನೆರೆ ಪರಿಹಾರ ಕಾರ್ಯ ಕೈಗೊಳ್ಳಲು ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದೆ.

9.50: ಹುಡ್‌ಹುಡ್‌ ಚಂಡಮಾರುತದಿಂದ ತೊಂದರೆಗೆ ಸಿಲುಕುವ ಜನರ ಸಹಾಯಕ್ಕಾಗಿ ಕಂಟ್ರೋಲ್‌ ರೂಂಗಳನ್ನು ಆರಂಭಿಸಲಾಗಿದೆ. ಪೂರ್ವ ಗೋದಾವರಿ 088-42359173, ವಿಶಾಖಪಟ್ಟಣಂ 1800-42500002, ಶ್ರೀಕಾಕುಳಂ 1800-4256625, ವಿಜಯನಗರಂ 0892-2276888.

9.00:ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 11 ತಂಡಗಳು ಸಿದ್ಧವಾಗಿವೆ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚ­ರಣೆ­ಯಲ್ಲಿ ನೆರವಾಗು­ವು­ದಕ್ಕಾಗಿ ವಿಶಾಖ­ಪಟ್ಟಣದಲ್ಲಿ ಸೇನೆಯ 250 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಗಂಟೆಗೆ ಸುಮಾರು170- 190 ಕಿ.ಮೀ. ಬೀಸುವ ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಜಾಗ್ರತಾ ಕ್ರಮವಾಗಿ ಆಂಧ್ರ­ದಲ್ಲಿ ಸುಮಾರು 5 ಲಕ್ಷ ಮತ್ತು ಒಡಿಶಾದಲ್ಲಿ 3.5 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

English summary
Top News of the today :Cyclone Hudhud makes landfall in Vishakhapatnam, wind speed reaches 205 km per hour. Andhra Pradesh CM Chandrababu Naidu wants PM Modi to declare Hudhud as a national calamity and also get news updates from Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X