ರಾಯಭಾರ ಕಚೇರಿ ಸಿಬ್ಬಂದಿ ಕಡಿತಗೊಳಿಸಿ; ಪಾಕ್‌ಗೆ ಭಾರತದ ಸೂಚನೆ

ನವದೆಹಲಿ, ಜೂನ್ 23 : ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿನ ಶೇ 50ರಷ್ಟು ಸಿಬ್ಬಂದಿಗಳನ್ನು ಕಡಿತಗೊಳಿಸುವಂತೆ ಭಾರತ ಸೂಚನೆ ನೀಡಿದೆ. ಇಸ್ಲಾಮಾಬಾದ್‌ನಲ್ಲಿರುವ ಕಚೇರಿಯಲ್ಲಿ ಸಿಬ್ಬಂದಿ ಕಡಿತ ಮಾಡುವುದಾಗಿ ಭಾರತ ಹೇಳಿದೆ.

Recommended Video

      ಚೀನಾ ವಿಚಾರದಲ್ಲಿ ಭಾರತಕ್ಕೆ ರಷ್ಯಾ ಸಪೋರ್ಟ್ ಮಾಡಲ್ಲ ಎಂದ ರಷ್ಯಾ ಸಚಿವ | Russia | China | Oneindia Kannada

      ಪಾಕಿಸ್ತಾನ ರಾಯಭಾರ ಕಚೇರಿಯ ಮೂವರು ಅಧಿಕಾರಿಗಳು ಬೇಹುಗಾರಿಕೆಯಲ್ಲಿ ತೊಡಗಿದ್ದಾಗ ಬಂಧಿಸಲಾಗಿತ್ತು. ಪಾಕಿಸ್ತಾನದಲ್ಲಿನ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಅಕ್ರಮವಾಗಿ ಬಂಧಿಸಿ ಹಿಂಸೆ ನೀಡಲಾಗಿತ್ತು.

      ಈ ಎಲ್ಲಾ ಬೆಳವಣಿಗೆಗಳ ಬಳಿಕ ದೆಹಲಿಯ ರಾಯಭಾರ ಕಚೇರಿಯಲ್ಲಿ ಶೇ 50ರಷ್ಟು ಸಿಬ್ಭಂದಿ ಕಡಿಮೆ ಮಾಡುವಂತೆ ವಿದೇಶಾಂಗ ಇಲಾಖೆ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ. ಏಳು ದಿನದಲ್ಲಿ ಕಚೇರಿಯ ಸಿಬ್ಬಂದಿಯನ್ನು ಶೇ 50ರಷ್ಟು ಕಡಿತಗೊಳಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

      Cut Off Staff At High Commission India Tells Pakistan

      ಭಾರತ ಇಸ್ಲಾಮಾಬಾದ್‌ನಲ್ಲಿರುವ ರಾಯಭಾರ ಕಚೇರಿಯ ಸಿಬ್ಬಂದಿಗಳನ್ನು ಕಡಿತಗೊಳಿಸಿದೆ. ಶೇ 50ರಷ್ಟು ಸಿಬ್ಬಂದಿಗಳನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲಿದೆ. ಈಗಾಗಲೇ ಐಎಸ್‌ಐನಿಂದ ಅಪಹರಣಕ್ಕೆ ಒಳಗಾಗಿದ್ದ ಇಬ್ಬರು ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿದೆ.

      ಬೇಹುಗಾರಿಕೆಯಲ್ಲಿ ತೊಡಗಿದ್ದ ಪಾಕಿಸ್ತಾನದ ರಾಯಭಾರ ಕಚೇರಿಯ ಮೂವರು ಸಿಬ್ಬಂದಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳಿಸಲಾಗಿತ್ತು. ಇದಾದ ಬಳಿಕ ಭಾರತದ ಇಬ್ಬರು ಅಧಿಕಾರಿಗಳನ್ನು ಐಎಸ್‌ಐ ಅಪಹರಣ ಮಾಡಿ ಹಿಂಸೆ ನೀಡಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+