ನೋಟು ಬದಲಿನ ಗೊಂದಲ ಗ್ರಾಹಕರಲ್ಲೂ ಇವೆ, ಬ್ಯಾಂಕ್ ನೌಕರರಲ್ಲೂ

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ನವೆಂಬರ್ 10: 500, 1000 ರುಪಾಯಿಯ ನೋಟುಗಳನ್ನು ಬದಲಿಸಿಕೊಳ್ಳಲು ಬ್ಯಾಂಕ್ ಗಳ ಹೊರಗೆ ಸಾಲುಗಟ್ಟಿ ನಿಂತಿರುವ ಜನರಲ್ಲಿ ಅದೆಷ್ಟು ಪ್ರಶ್ನೆಗಳಿವೆಯೋ? ಅದರ ಜೊತೆಗೆ ಎಷ್ಟೋ ಮಂದಿ ಗುರುವಾರ ಎಟಿಎಂ ತೆರೆದಿರುತ್ತದೆ ಎಂಬ ಭಾವನೆಯಲ್ಲೇ ಇದ್ದಾರೆ. ಅವರಿಗೆ ಈಗ ಬ್ಯಾಂಕ್ ನವರೇ ಹೇಳುವಂತಾಗಿದೆ: ಎಟಿಎಂಗಳು ಶುಕ್ರವಾರದಿಂದ ಕೆಲಸ ಶುರು ಮಾಡುತ್ತವೆ.

ಇಂಥ ಗೊಂದಲಗಳು ಬರೀ ಗ್ರಾಹಕರಿಗಿದೆ ಅಂದುಕೊಳ್ಳಬೇಡಿ. ಬೆಳಗ್ಗೆ ಆರು ಗಂಟೆಯಿಂದ ಸರತಿಯಲ್ಲಿ ನಿಂತಿರುವ ಇಷ್ಟೊಂದು ಜನರನ್ನು ಸಂಭಾಳಿಸೋದು ಹೇಗೆ ಎಂಬ ಬಗ್ಗೆಯೇ ಬ್ಯಾಂಕ್ ನೌಕರರಿಗೆ ಚಿಂತೆ ಶುರುವಾಗಿದೆ. ಈ ವೇಳೆಯಲ್ಲಿ ಗ್ರಾಹಕರಿಗೆ ಸಹಜವಾಗಿ ಮೂಡಬಹುದಾದ ಪ್ರಶ್ನೆಗಳನ್ನೆಲ್ಲ ಪಟ್ಟಿ ಮಾಡಿ, ಕನ್ನಡ-ಹಿಂದಿ ಹಾಗೂ ಇಂಗ್ಲಿಷ್ ನಲ್ಲಿ ಬ್ಯಾಂಕ್ ನ ಹೊರಭಾಗದಲ್ಲಿ ಹಾಕಿದ್ದರೆ, ಜೊತೆಗೆ ಕರಪತ್ರಗಳನ್ನು ಹಂಚಿದ್ದರೆ ನೌಕರರಿಗೂ-ಗ್ರಾಹಕರಿಗೂ ಅನುಕೂಲ ಆಗ್ತಿತ್ತು.[ಫೋಸ್ಟ್ ಆಫೀಸ್‌ಗಳಲ್ಲೂ ಜನರ ಹಣಕ್ಕೆ ಪರದಾಟ]

Currency exchange- Confusion hits both customers and bank staff

ನಾವು ಈಗಷ್ಟೇ ನೋಟುಗಳ ಬದಲಾವಣೆ ಹಾಗೂ ಬೇರೆ ಬ್ಯಾಂಕ್ ವ್ಯವಹಾರಗಳನ್ನು ಶುರು ಮಾಡಿದ್ದೀವಿ. ಒಬ್ಬರು ದಿನಕ್ಕೆ ತಲಾ ಎರಡು ಸಾವಿರ ರುಪಾಯಿಯಷ್ಟು ನೋಟನ್ನು ಬದಲಿಸಿಕೊಳ್ಳಬಹುದು. ಖಾತೆದಾರರಾದರೆ ದಿನಕ್ಕೆ ಹತ್ತು ಸಾವಿರ ರುಪಾಯಿವರೆಗೆ ಡ್ರಾ ಮಾಡಬಹುದು. ಆದರೆ ವಾರಕ್ಕೆ ಇಪ್ಪತ್ತು ಸಾವಿರ ಮಾತ್ರ ಡ್ರಾ ಮಾಡಲು ಸಾಧ್ಯ. ಸಣ್ಣ-ಪುಟ್ಟ ವಾಗ್ವಾದಗಳಾಗಿವೆ. ಆದರೆ ಅವೆಲ್ಲ ನೋಡಿಕೊಳ್ತಿದ್ದೀವಿ ಎಂದು ಒನ್ ಇಂಡಿಯಾಗೆ ತಿಳಿಸಿದವರು ಜಯನಗರ ಶಾಖೆ ಎಸ್ ಬಿಐ ಮ್ಯಾನೇಜರ್ ಕೆ.ಭಾರತೀಶ್.[In Pics : ಹಳೆ ನೋಟು ಹಿಡಿದು, ಹೊಸ ನೋಟಿಗಾಗಿ ಮುಗಿಬಿದ್ದ ಜನ]

ಕೆಲಸದ ದಿನಗಳಲ್ಲಿ ಬ್ಯಾಂಕ್ ಗೆ ಬರೋದು ಬಹಳ ಕಷ್ಟ. ನಾವು ಕೆಲಸಗಳಿಗೆ ಹೋಗೋ ಜನ. ಮಾಮೂಲಿಗಿಂತ ಹೆಚ್ಚು ಕಾಲ ಇಲ್ಲಿ ಕಾಯ್ತಾ ನಿಲ್ಲಬೇಕು. ನಾನೀಗ ಹನ್ನೊಂದು ಸಾವಿರ ರುಪಾಯಿ ಬದಲಾಯಿಸಿಕೊಳ್ಳೋಕೆ ಬಂದಿದ್ದೀನಿ. ಈ ದುಡ್ಡನ್ನು ಬರೀ ಮೂರು ದಿನದ ಹಿಂದಷ್ಟೇ ಡ್ರಾ ಮಾಡಿದ್ದೆ ಎಂದು ಗ್ರಾಹಕಿ ಅಶ್ವಿನಿ ಬೇಸರ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As people crowded outside banks to get their Rs 500 and 1,000 notes exchanged, a great deal of confusion prevailed. The confusion was not restricted just to the customers. Several bank staff too looked confused as they dealt with a large number of customers who have been in line since 6 AM today.
Please Wait while comments are loading...