ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CUET UG Result 2022 : ಪದವಿ ಪೂರ್ವ ಪರೀಕ್ಷಾ ಫಲಿತಾಂಶ ಪ್ರಕಟ, ಚೆಕ್ ಮಾಡಿ!

|
Google Oneindia Kannada News

ನವದೆಹಲಿ, ಸೆ 16: ದೇಶದಾದ್ಯಂತ ಇರುವ ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ 2022-23ನೇ ಸಾಲಿನಿಂದ ಪ್ರವೇಶ ಪರೀಕ್ಷೆ (ಸಿಯುಇಟಿ) ಕಡ್ಡಾಯವಾಗಿದೆ.ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್‌ಗಳಿಗೆ (ಯುಜಿ) ಪ್ರವೇಶ ಪಡೆಯಬೇಕಾದರೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ ಆಗುವುದು ಕಡ್ಡಾಯ ಮಾಡಲಾಗಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಎಟಿ) ತಡರಾತ್ರಿ ಪ್ರವೇಶ ಪರೀಕ್ಷೆ (ಸಿಯುಇಟಿ) UG 2022 ಫಲಿತಾಂಶ ಪ್ರಕಟಿಸಿದೆ.

ಪದವಿಪೂರ್ವ ಪ್ರವೇಶಕ್ಕಾಗಿ CUET-UG ಚೊಚ್ಚಲ ಆವೃತ್ತಿಯು ಜುಲೈನಲ್ಲಿ ಪ್ರಾರಂಭವಾಯಿತು ಮತ್ತು ಆಗಸ್ಟ್ 30 ರಂದು ಮುಕ್ತಾಯವಾಯಿತು. CUET UG ಫಲಿತಾಂಶದ ಆಧಾರದ ಮೇಲೆ, ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತಮ್ಮ ಕಟ್-ಆಫ್ ಪಟ್ಟಿಯನ್ನು ಸಿದ್ಧಪಡಿಸುತ್ತವೆ. ಕಟ್-ಆಫ್ ಪಟ್ಟಿಯ ಆಧಾರದ ಮೇಲೆ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಾರೆ. ವಿವಿಧ ಪದವಿಪೂರ್ವ ಕೋರ್ಸ್‌ಗಳ ಭಾಗವಾಗಲು ಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದಾರೆ. (ಸಿಯುಇಟಿ) UG 2022 ಫಲಿತಾಂಶವನ್ನು ಅಧಿಕೃತ ವೆಬ್ ತಾಣ cuet.samarth.ac.in. ಮೂಲಕ ಪಡೆದುಕೊಳ್ಳಲು ಸೂಚಿಸಲಾಗಿದೆ.

ಪದವಿಪೂರ್ವ ಕಾಲೇಜುಗಳಿಗೆ 3708 ಅತಿಥಿ ಉಪನ್ಯಾಸಕರ ನೇಮಕ ಪದವಿಪೂರ್ವ ಕಾಲೇಜುಗಳಿಗೆ 3708 ಅತಿಥಿ ಉಪನ್ಯಾಸಕರ ನೇಮಕ

CUET UG 2022 ರ ಆರನೇ ಮತ್ತು ಅಂತಿಮ ಹಂತಗಳು ಆಗಸ್ಟ್ 30 ರಂದು ಮುಕ್ತಾಯಗೊಂಡಿತ್ತು. ಮೊದಲ ಹಂತದ ಪರೀಕ್ಷೆಯು ಮೇ 15 ರಂದು ನಡೆಯಿತು. ಎಲ್ಲಾ ಆರು ಹಂತದ ಪರೀಕ್ಷೆಗಳಿಗೆ 14.90 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು ಅವರಲ್ಲಿ ಸುಮಾರು 60 ಪ್ರತಿಶತದಷ್ಟು ಅಭ್ಯರ್ಥಿಗಳು ಹಾಜರಾಗಿದ್ದಾರೆ ಎಂದು ಪ್ರೊ ಕುಮಾರ್ ಹೇಳಿದ್ದಾರೆ.

CUET UG Result 2022: NTA releases Common University Entrance Test (CUET) UG Result

ಭಾರತದಲ್ಲಿ 239 ನಗರಗಳ 444 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಭಾರತವನ್ನು ಹೊರತುಪಡಿಸಿ, ಮಸ್ಕತ್, ರಿಯಾದ್, ದುಬೈ, ಮನಾಮ, ದೋಹಾ, ಕಠ್ಮಂಡು, ಶಾರ್ಜಾ, ಸಿಂಗಪುರ್ ಮತ್ತು ಕುವೈತ್‌ನಲ್ಲಿ ಪರೀಕ್ಷೆ ನಡೆಯಿತು. ದೆಹಲಿ ವಿಶ್ವವಿದ್ಯಾಲಯ (DU) ಸೇರಿದಂತೆ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ CUET UG ಸ್ಕೋರ್ ಆಧಾರದ ಮೇಲೆ ಪ್ರವೇಶವನ್ನು ಮಾಡಲಾಗುತ್ತದೆ.

DU 80 ವಿಭಾಗಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಕೇಂದ್ರೀಯ ವಿಶ್ವವಿದ್ಯಾಲಯವಾಗಿದೆ. ಡಿಯು ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌ಡಿ ಮತ್ತು ಪ್ರಮಾಣಪತ್ರ ಕೋರ್ಸ್‌ಗಳನ್ನು ನೀಡುತ್ತದೆ. DU ಸುಮಾರು 79 ಕಾಲೇಜುಗಳನ್ನು ಹೊಂದಿದೆ, ಇದರಲ್ಲಿ ಪ್ರತಿ ವರ್ಷ 70,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ ಮತ್ತು ಮಾನವಿಕ ವಿಭಾಗಗಳಲ್ಲಿ ಪ್ರವೇಶ ಪಡೆಯುತ್ತಾರೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕೂಡ ಪ್ರಸ್ತುತ ಶೈಕ್ಷಣಿಕ ಅವಧಿಯಿಂದ ಆಯ್ದ ಪದವಿ ಕೋರ್ಸ್‌ಗಳಲ್ಲಿ ಪ್ರವೇಶಕ್ಕಾಗಿ CUET UG ಫಲಿತಾಂಶಗಳನ್ನು ಜಾರಿಗೆ ತರಲು ನಿರ್ಧರಿಸಿದೆ.

CUET UG Result 2022: NTA releases Common University Entrance Test (CUET) UG Result

ಕನ್ನಡದಲ್ಲಿಯೂ ಪರೀಕ್ಷೆ: ಸಿಯುಇಟಿ ಈ ಬಾರಿ ಜುಲೈನಲ್ಲಿ ನಡೆಯುವ ಸಾಧ್ಯತೆ ಇದೆ. ಕನ್ನಡ ಸಹಿತ 13 ಭಾಷೆಗಳಲ್ಲಿ ಪ್ರವೇಶ ಪರೀಕ್ಷೆಯನ್ನು ಬರೆಯಬಹುದಾಗಿದೆ. ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಉರ್ದು, ಅಸ್ಸಾಮಿ, ಬಂಗಾಳಿ, ಪಂಜಾಬಿ, ಒಡಿಯಾ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು ಎಂದು ಸ್ಪಷ್ಟಪಡಿಸಲಾಗಿದೆ.

ಏನಿದು ಸಿಯುಇಟಿ? ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಈ ಸಾಮಾನ್ಯ ಪ್ರವೇಶ ಪರೀಕ್ಷೆಯ ಉದ್ದೇಶ. ಹಾಗಂತ ಇದು ಹೊಸದಾಗಿ ತಂದಿದ್ದೇನೂ ಅಲ್ಲ. ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಅಂದರೆ 2010ರಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಸಿಇಟಿ) ಜಾರಿ ಮಾಡಲಾಗಿತ್ತು. ಆದರೆ, ಕಳೆದ ವರ್ಷದವರೆಗೂ ಕೇವಲ 14 ವಿಶ್ವವಿದ್ಯಾಲಯಗಳು ಮಾತ್ರ ಇದನ್ನು ಅನುಸರಿಸುತ್ತಿದ್ದವು. ಹೀಗಾಗಿ ಇದು ವಿಫಲವಾಗಿತ್ತು. ದೇಶದ 45 ವಿಶ್ವವಿದ್ಯಾಲಯಗಳು ಇನ್ನು ಮುಂದೆ ಇದನ್ನು ಕಡ್ಡಾಯವಾಗಿ ಅನುಸರಿಸರಿಸಲಿವೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಎಟಿ) ಈ ಪರೀಕ್ಷೆಯನ್ನು ನಡೆಸಲಿದೆ.

English summary
National Testing Agency, NTA has declared the Common University Entrance Test, CUET result 2022 today. NTA CUET UG result is now available at cuet.samarth.ac.in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X