ತ್ರೇತಾಯುಗದ ರಾಮಲಕ್ಷ್ಮಣರ ವಿರುದ್ಧ ದೌರ್ಜನ್ಯದ ಕೇಸ್!

Posted By:
Subscribe to Oneindia Kannada

ಪಟ್ನಾ, ಫೆಬ್ರವರಿ 01 : ತನ್ನ ಗಂಡ ಮಹಾನ್ ಮರ್ಯಾದಾ ಪುರುಷೋತ್ತಮ ಎಂದು ಆರಾಧಿಸುತ್ತಿದ್ದರೂ, ತುಂಬ ಗರ್ಭಿಣಿಯಾಗಿದ್ದ ಆಕೆಯನ್ನು ಯಾರದೋ ಮಾತು ಕೇಳಿ ಕಾಡಿಗೆ ಬಿಟ್ಟುಬಂದ ಗಂಡನ ವಿರುದ್ಧ, ಮತ್ತು ಗಂಡನಿಗೆ ಸಹಾಯ ಮಾಡಿದ ಆತನ ತಮ್ಮನ ವಿರುದ್ಧ ಕೋರ್ಟಿನಲ್ಲಿ ಕೇಸು ದಾಖಲಾಗಿದೆ.

ಈ ಕಥೆ ಎಲ್ಲೋ ಕೇಳಿದಹಾಗಿದೆಯಲ್ಲಾ? ಯಸ್, ಇದು ರಾಮಾಯಣದ ಕಥೆಯೇ. ತುಂಬು ಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ಅಗಸನ ಮಾತು ಕೇಳಿ, ತಮ್ಮ ಲಕ್ಷ್ಮಣನ ಸಹಾಯದಿಂದ ಮರ್ಯಾದಾ ಪುರುಷೋತ್ತಮ ರಾಮ ಕಾಡಿಗೆ ಬಿಟ್ಟು ಬಂದ. ಇದೆಲ್ಲಾ ಆಗಿ ಅದೆಷ್ಟು ಸಂವತ್ಸರಗಳು ಕಳೆದುಹೋಗಿವೆಯೋ? [ರಾಮ ಮಹಾನ್ ಕುಡುಕ ಎಂದಿದ್ದ ಯೋಗೇಶ್ ಮಾಸ್ಟರ್]

ತ್ರೇತಾಯುಗದ ರಾಮ, ಲಕ್ಷ್ಮಣರ ವಿರುದ್ಧ ಈ ಕಲಿಯುಗದಲ್ಲಿ ಭೂಪನೊಬ್ಬ ಕೋರ್ಟಿನ ಮೊರೆ ಹೋಗಿದ್ದಾನೆ. ಬಿಹಾರದ ಸೀತಾಮಾರಿ ಜಿಲ್ಲೆಯ ವಕೀಲ ಠಾಕೂರ್ ಚಂದನ್ ಸಿಂಗ್ ಎಂಬುವವರು, ಅಗಸನ ಮಾತು ಕೇಳಿ ರಾಮ ತನ್ನ ಹೆಂಡತಿ ಸೀತೆಯನ್ನು ಕಾಡಿಗೆ ಅಟ್ಟಿ ಕ್ರೌರ್ಯವನ್ನು ಮೆರೆದಿದ್ದಾನೆ ಎಂದು ದೂರು ದಾಖಲಿಸಲಾಗಿದೆ.

ರಾಮ ಮಾತ್ರವಲ್ಲ, ರಾಮನ ಮಾತು ಕೇಳಿ ಸೀತೆಯನ್ನು ನಿರ್ದಾಕ್ಷಿಣ್ಯವಾಗಿ ಕಾಡಿಗೆ ಬಿಟ್ಟು ಬಂದ ತಮ್ಮ ಲಕ್ಷ್ಮಣನನ್ನೂ ವಕೀಲ ಮಹಾಶಯರು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇಷ್ಟು ಮಾತ್ರವಲ್ಲ, ವಸ್ತುಸ್ಥಿತಿಯ ಪರಿಶೀಲನೆ ಮಾಡದೆ ತನ್ನ ಅತ್ತಿಗೆಯನ್ನು ಕಾಡಿಗೆ ಬಿಟ್ಟುಬಂದು ಲಕ್ಷ್ಮಣ ಸೀತೆಗೆ ಅವಮಾನ ಮಾಡಿದ್ದಾನೆ ಎಂದು ದೂರಲಾಗಿದೆ.

ರಾಮನ ವಿರುದ್ಧ ಎದ್ದಿರುವ ವಿವಾದ ಇದು ಮೊದಲನೇಯದಲ್ಲ. ರಾಮಾಯಣ ಅಸ್ತಿತ್ವವನ್ನು ಪ್ರಶ್ನಿಸುವವರಿದ್ದಾರೆ. ರಾಮಸೇತುವನ್ನು ಧ್ವಂಸ ಮಾಡಲು ಹುನ್ನಾರ ನಡೆದಿದೆ. ನಮ್ಮ ಕರ್ನಾಟಕದವರೇ ಆದ ಕೆಎಸ್ ಭಗವಾನ್ ಮತ್ತು ಲೇಖಕ ಯೋಗೇಶ್ ಮಾಸ್ಟರ್ ರಾಮನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವೇನೇನು ಮುಂದೆ ಓದಿರಿ. [ಶ್ರೀರಾಮ ಸ್ತ್ರೀಲೋಲನಂತೆ, ಮದ್ಯ ಸೇವಿಸುತ್ತಿದ್ದನಂತೆ!]

ಶ್ರೀರಾಮನ ಕುರಿತು ಕೆಎಸ್ ಭಗವಾನ್ ಉವಾಚ

ಶ್ರೀರಾಮನ ಕುರಿತು ಕೆಎಸ್ ಭಗವಾನ್ ಉವಾಚ

ಹಿಂದೂಗಳಲ್ಲಿ ಶ್ರೀರಾಮಚಂದ್ರ ಎಂದರೆ ಪಿತೃವಾಕ್ಯ ಪರಿಪಾಲಕ, ಏಕಪತ್ನೀವ್ರತಸ್ಥ ಎನ್ನುವ ನಂಬಿಕೆಯಿದೆ. ಆದರೆ ಅದೆಲ್ಲಾ ಸುಳ್ಳು. ರಾಮ ಸ್ತ್ರೀಲೋಲ, ಕುಡುಕನಾಗಿದ್ದ. ಆತ ದೇವರಲ್ಲ ಮನುಷ್ಯ ಎಂದು ಕೆಎಸ್ ಭಗವಾನ್, ದಾವಣಗೆರೆಯಲ್ಲಿ ಭಾನುವಾರ (ಮಾ 30) ನಡೆದ ಕಾರ್ಯಕ್ರಮದಲ್ಲಿ ವಿವಾದವೆಬ್ಬಿಸಿದ್ದರು.

ಯೋಗೇಶ್ ಮಾಸ್ಟರ್ ಎಬ್ಬಿಸಿದ ಬಿರುಗಾಳಿ

ಯೋಗೇಶ್ ಮಾಸ್ಟರ್ ಎಬ್ಬಿಸಿದ ಬಿರುಗಾಳಿ

ಶ್ರೀರಾಮಚಂದ್ರ ಕುಡಿತದ ದಾಸ್ಯಕ್ಕೆ ಒಳಗಾಗಿದ್ದ, ಜೊತೆಗೆ ಮಹಾನ್ ಕ್ರೂರಿಯಾಗಿದ್ದ. ಈತನ ಕಾಟ ತಾಳಲಾರದೇ ಸೀತಾದೇವಿ ಮತ್ತು ಸಹೋದರ ಲಕ್ಷಣ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು ಎಂದು ಯೋಗೇಶ್ ಮಾಸ್ಟರ್ ಇತ್ತೀಚೆಗೆ ಬಿರುಗಾಳಿ ಎಬ್ಬಿಸಿದ್ದಾರೆ.

ರಾಮ ಯಾರು? ಯಾವ ಕಾಲೇಜಿನಲ್ಲಿ ಓದಿದ್ದ?

ರಾಮ ಯಾರು? ಯಾವ ಕಾಲೇಜಿನಲ್ಲಿ ಓದಿದ್ದ?

ರಾಮ ಯಾರು? ಅವನು ಯಾವ ಕಾಲೇಜಿನಲ್ಲಿ ಓದಿದ್ದ? ಇಷ್ಟಕ್ಕೂ ರಾಮ ಒಬ್ಬ ಕುಡುಕನಾಗಿದ್ದ.. ಎಂದಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ರಾಮಾಯಣದ ಅಸ್ತಿತ್ವವನ್ನು ಪ್ರಶ್ನಿಸಿದ್ದಾರೆ.

ಅಯೋಧ್ಯೆ ರಾಮಜನ್ಮಭೂಮಿ ವಿವಾದ

ಅಯೋಧ್ಯೆ ರಾಮಜನ್ಮಭೂಮಿ ವಿವಾದ

ರಾಮಯ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿ ದಶಕಗಳೇ ಸಂದಿವೆ. ಅದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ಹಿಂದೂಗಳ ಆಶಯ. ಇಷ್ಟುವರ್ಷ ತಣ್ಣಗಾಗಿದ್ದ ವಿವಾದ ಈಗ ಮತ್ತೆ ಜೀವತಳೆಯುತ್ತಿದೆ.

ರಾಮ, ಲಕ್ಷ್ಮಣರ ವಿರುದ್ಧ ಸಾಕ್ಷಿ ಹೇಳಲಿದ್ದಾರೆ?

ರಾಮ, ಲಕ್ಷ್ಮಣರ ವಿರುದ್ಧ ಸಾಕ್ಷಿ ಹೇಳಲಿದ್ದಾರೆ?

ಈ ಕೇಸು ಸೋಮವಾರ ವಿಚಾರಣೆ ಬರಲಿದೆ. ಅರ್ಜಿಯನ್ನು ಸ್ವೀಕರಿಸುವುದೋ, ವಜಾ ಮಾಡುವುದೋ ಎಂಬ ಕುರಿತು ಕೋರ್ಟ್ ತೀರ್ಮಾನ ತಳೆಯಲಿದೆ. ಒಂದು ವೇಳೆ ಅರ್ಜಿ ಸ್ವೀಕೃತವಾದರೆ, ವಿಚಾರಣೆಗೆ ಯಾರನ್ನು ಕರೆಸುವುದು? ಯಾರು ಬಂದು ರಾಮಾಯಣದ ರಾಮ, ಲಕ್ಷ್ಮಣರ ವಿರುದ್ಧ ಸಾಕ್ಷಿ ಹೇಳಲಿದ್ದಾರೆ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An advocate in Bihar's Sitamarhi district has filed a case against Lord Ram and his brother Laxman for renouncing his wife Sita in Ramayana. In the case, petitioner Thakur Chandan Singh has accused Lord Ram of renouncing Sita on the accusations levelled by a laundryman.
Please Wait while comments are loading...