ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕ್ ಗಡಿಯಲ್ಲಿ ಮುಂದುವರಿದ ಗುಂಡಿನ ಚಕಮಕಿ

ಮಾರ್ಚ್ 13ರ ಸಂಜೆಯಿಂದಲೇ ಆರಂಭವಾಗಿರುವ ಗನ್ ಫೈರ್. ಕಳೆದ ಮೂರು ದಿನಗಳಲ್ಲಿ ಪಾಕಿಸ್ತಾನ ಕಡೆಯಿಂದ ಹೀಗೆ ಅಪ್ರಚೋದಿಕ ಗುಂಡಿನ ದಾಳಿಯಾಗುತ್ತಿರುವುದು ಇದು ಎರಡನೇ ಬಾರಿ.

|
Google Oneindia Kannada News

ಪೂಂಚ್, ಮಾರ್ಚ್ 13: ಜಮ್ಮುವಿನಲ್ಲಿರುವ ಗಡಿ ನಿಯಂತ್ರಣ ರೇಖೆಗೆ ಹತ್ತಿರದಲ್ಲಿರುವ ಪೂಂಚ್ ಹಾಗೂ ರಾವಲ್ಕೋಟೆ ಪ್ರಾಂತ್ಯಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಗುಂಡಿನ ಚಕಮಕಿ ಮುಂದುವರಿದಿದ್ದು ಈ ಪ್ರಾಂತ್ಯಗಳಲ್ಲಿನ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಮಾರ್ಚ್ 13ರ ಸಂಜೆ ವೇಳೆಗೆ ಜಮ್ಮುವಿನಲ್ಲಿರುವ ಗಡಿ ನಿಯಂತ್ರಣ ರೇಖೆ ಹಾಗೂ ಕಾಶ್ಮೀರದ ಪೂಂಚ್ ನಲ್ಲಿ ಗುಂಡಿನ ಚಕಮಕಿ ಆರಂಭವಾಗಿತ್ತು.

Cross-LoC bus service suspended as India-Pak firing continues in Poonch

ಪಾಕಿಸ್ತಾನ ಕಡೆಯಿಂದಲೇ ಮೊದಲು ಕದನ ಉಲ್ಲಂಘನೆಯಾಗಿದ್ದು, ಭಾರತೀಯ ಸೇನೆಯ ಕಡೆಗೆ 82 ಮಿ.ಮೀ. ಸೆಲ್ ದಾಳಿಯನ್ನು ಪಾಕ್ ಸೇನೆ ನಡೆಸಿತು. ಇದು ಕಳೆದ ಮೂರು ದಿನಗಳಲ್ಲಿ ಪಾಕಿಸ್ತಾನ ಕಡೆಯಿಂದ ಆದ ಎರಡನೇ ಅಪ್ರಚೋದಿತ ಗುಂಡಿನ ದಾಳಿ. ಪಾಕಿಸ್ತಾನದ ಈ ಗುಂಡಿನ ದಾಳಿಗೆ ಭಾರತವೂ ಪ್ರತ್ಯುತ್ತರ ನೀಡುತ್ತಿದೆ.

ಸೇನಾ ನೆಲೆಗಳ ಕಡೆಗೆ ಶೆಲ್ ದಾಳಿ ನಡೆಸಿದ ನಂತರ, ಗಡಿ ಭಾಗದಲ್ಲಿರುವ ಭಾರತದ ನಾಲ್ಕು ಹಳ್ಳಿಗಳ ಮೇಲೆ ಪಾಕಿಸ್ತಾನ ಸೈನ್ಯವು ದಾಳಿ ನಡೆಸಿತು.

English summary
Cross-LoC Poonch Rawlakote bus service was on Monday suspended as a precautionary measure in view of fierce exchange of fire and mortar shells between the armies of India and Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X