ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಪಕ್ಷ ಸೇರಿದ ನವಜ್ಯೋತ್ ಸಿಂಗ್ ಸಿಧು

ಮಾಜಿ ಕ್ರಿಕೆಟರ್, ಕಾಮೆಂಟೆಟರ್, ಮಾಜಿ ಸಂಸದ ನವಜ್ಯೋತ್ ಸಿಂಗ್ ಸಿಧು ಅವರು ಕಾಂಗ್ರೆಸ್ ಪಕ್ಷವನ್ನು ಜನವರಿ 15ರಂದು ಅಧಿಕೃತವಾಗಿ ಸೇರಿದ್ದಾರೆ.

By Mahesh
|
Google Oneindia Kannada News

ನವದೆಹಲಿ, ಜನವರಿ 15: ಮಾಜಿ ಕ್ರಿಕೆಟರ್, ಕಾಮೆಂಟೆಟರ್, ಮಾಜಿ ಸಂಸದ ನವಜ್ಯೋತ್ ಸಿಂಗ್ ಸಿಧು ಅವರು ಕಾಂಗ್ರೆಸ್ ಪಕ್ಷವನ್ನು ಜನವರಿ 15ರಂದು ಅಧಿಕೃತವಾಗಿ ಸೇರಿದ್ದಾರೆ. ಪಂಜಾಬ್ ಕಾಂಗ್ರೆಸ್ ಘಟಕದ ಮುಖ್ಯಸ್ಥ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಿಧು ಸೇರ್ಪಡೆಯನ್ನು ಖಚಿತಪಡಿಸಿದ್ದಾರೆ.

ಸಿಧು ಅವರು ಸೆಪ್ಟೆಂಬರ್ 08 ರಂದು ಹೊಸ ರಾಜಕೀಯ ಪಕ್ಷ ಅವಾಜ್ ಇ ಪಂಜಾಬ್ ಗೆ ನಾಂದಿ ಹಾಡಿದ್ದರು. ಮಾಜಿ ಹಾಕಿ ಕ್ಯಾಪ್ಟನ್ ಪರ್ಗತ್ ಸಿಂಗ್ ಅವರು ಸಿಧು ಬೆನ್ನಿಗೆ ನಿಂತಿದ್ದರು. ಆದರೆ, ಈಗ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

Rahul and Sidhu

ಇತ್ತೀಚೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆ ಸಿಧು ಅವರು ಸಮಾಲೋಚನೆ ನಡೆಸಿದ್ದರು. ಇದಾದ ಬಳಿಕ ಕಾಂಗ್ರೆಸ್ ಸೇರಲು ನಿರ್ಧರಿಸಿದರು. ಅಮೃತ್ ಸರ್ ಪೂರ್ವ ಕ್ಷೇತ್ರದ ಮೇಲೆ ಸಿಧು ಕಣ್ಣಿಟ್ಟಿದ್ದಾರೆ.

ನವಜ್ಯೋತ್ ಸಿಂಗ್ ಸಿಧು ಅವರ ಪತ್ನಿ ನವಜ್ಯೋತ್ ಕೌರ್ ಹಾಗೂ ಮಾಜಿ ಒಲಿಂಪಿಯನ್ ಪರ್ಗತ್ ಸಿಂಗ್ ಅವರು ಕಾಂಗ್ರೆಸ್ ಪಕ್ಷವನ್ನು ನವೆಂಬರ್ 28ರಂದು ಅಧಿಕೃತವಾಗಿ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Cricketer-turned-politician Navjot Singh Sidhu formally joined the Congress at the party's headquarters in New Delhi today(January 15). He quit BJP in Septeber 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X