ಜೋಶಿಮಠ ಮುಳುಗಡೆ ಭೀತಿ ಬೆನ್ನಲೇ ಯುಪಿಯ ಅಲಿಗಢದ ಮನೆಗಳಲ್ಲಿ ಬಿರುಕುಗಳು

ಲಕ್ನೋ, ಜ.10: ಉತ್ತರಾಖಂಡ್‌ನ ಜೋಶಿಮಠ ಪ್ರದೇಶದಲ್ಲಿ ಭೂಮಿ ಕುಸಿಯುವ ಭೀತಿ ಆವರಿಸಿಕೊಂಡಿದೆ. ಇದರ ನಡುವೆಯೇ, ಉತ್ತರ ಪ್ರದೇಶದಲ್ಲಿಯೂ ಇಂತಹ ಆತಂಕ ಮನೆ ಮಾಡಿದೆ.

ಉತ್ತರ ಪ್ರದೇಶದ ಅಲಿಘರ್‌ನ ಕನ್ವರಿಗಂಜ್ ಪ್ರದೇಶದಲ್ಲಿ ಕೆಲವು ಮನೆಗಳಲ್ಲಿ ಹಠಾತ್ ಬಿರುಕುಗಳು ಉಂಟಾಗಿದ್ದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

"ಕಳೆದ ಹಲವು ದಿನಗಳಿಂದ ನಮ್ಮ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದರಿಂದ ಭಯಭೀತರಾಗಿದ್ದೇವೆ. ಹೀಗಾಗಿ ನಾವು ನಗರಸಭೆ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದೇವೆ. ಆದರೆ, ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಬರೀ ಭರವಸೆ ನೀಡುತ್ತಿದ್ದಾರೆ. ನಮಗೆಲ್ಲಾ ಮನೆಗಳು ಕುಸಿದು ಬೀಳುವ ಆತಂಕವಿದೆ" ಎಂದು ಸ್ಥಳೀಯರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

Cracks have Appear in few Houses in UPs Aligarh

ಇನ್ನು ಸ್ಥಳೀಯರ ಆರೋಪವೆಂದರೇ, ಸರ್ಕಾರದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಪೈಪ್‌ಲೈನ್ ಹಾಕಲಾಗಿದ್ದು, ಈಗ ಅದು ಸೋರಿಕೆಯಾಗುತ್ತಿದೆ . ಇದರಿಮದ ನಗರದಲ್ಲಿ ಬಿರುಕುಗಳು ಉಂಟಾಗಲು ಕಾರಣವಾಗಿದೆ ಎಂದಿದ್ದಾರೆ.

"ಈ ಬಿರುಕುಗಳು ಕಾಣಿಸಿಕೊಂಡು 3 ರಿಂದ 4 ದಿನಗಳಾಗಿವೆ. ನಾವು ಈ ಬಗ್ಗೆ ಇಲಾಖೆಗೆ ತಿಳಿಸಿದ್ದೇವೆ, ಆದರೆ ಇದುವರೆಗೆ ಯಾವುದೇ ನೆರವು ನೀಡಲಾಗಿಲ್ಲ. ನಾವು ಭಯಭೀತರಾಗಿ ಬದುಕುತ್ತಿದ್ದೇವೆ" ಎಂದು ಸ್ಥಳೀಯರಾದ ಅಫ್ಶಾ ಮಶ್ರೂರ್ ತಿಳಿಸಿದ್ದಾರೆ.

ಇತ್ತ, ಈ ಬಗ್ಗೆ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ರಾಕೇಶ್ ಕುಮಾರ್ ಯಾದವ್, ಸಮಸ್ಯೆಯನ್ನು ತಿಳಿದುಕೊಂಡು ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

"ಕನ್ವರಿಗಂಜ್ ಪ್ರದೇಶದಲ್ಲಿ ಕೆಲವು ಮನೆಗಳಲ್ಲಿ ಬಿರುಕುಗಳು ಕಂಡುಬಂದಿವೆ ಎಂಬ ಮಾಹಿತಿ ನಮಗೆ ಬಂದಿದೆ. ಈ ವಿಷಯ ಇನ್ನೂ ಸಂಪೂರ್ಣ ನಮ್ಮ ಗಮನಕ್ಕೆ ಬಂದಿಲ್ಲ, ನಾವು ನಮ್ಮ ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸುತ್ತೇವೆ. ಈ ಬಗ್ಗೆ ನಗರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ರಾಕೇಶ್ ಕುಮಾರ್ ಯಾದವ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+