ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CoWin Update: ಕೊರೊನಾವೈರಸ್ ಲಸಿಕೆ ಪಡೆದವರಿಗೆ ಆನ್‌ಲೈನ್ ಪ್ರಮಾಣಪತ್ರ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳುವವರು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ. CoWin ಅಪ್ಲಿಕೇಶನ್ ಮೂಲಕ ಕೊವಿಡ್-19 ಲಸಿಕೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನವೀಕರಿಸಲಾಗಿದೆ.

ಸಾಮಾನ್ಯವಾಗಿ ವ್ಯಕ್ತಿಯು ಕೊವಿಡ್-19 ಲಸಿಕೆ ಪಡೆದುಕೊಂಡಿದ್ದಾರೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಗ್ರಾಹಕರ ಬಗ್ಗೆ ತಿಳಿಯಿರಿ( Know Your Customer's) ಅಥವಾ ವ್ಯಕ್ತಿಯ ಲಸಿಕೆ ಸ್ಥಿತಿ (Client's Vaccination Status) ಬಗ್ಗೆ ತಿಳಿಯುವ ವಿಧಾನವನ್ನು ಮತ್ತಷ್ಟು ಸರಳಗೊಳಿಸಲಾಗಿದೆ.

ಲಸಿಕೆಗೆ ಹೆಸರು ನೋಂದಾಯಿಸುವ CoWin ಹ್ಯಾಕ್ ಆಗಿದೆಯೇ?ಲಸಿಕೆಗೆ ಹೆಸರು ನೋಂದಾಯಿಸುವ CoWin ಹ್ಯಾಕ್ ಆಗಿದೆಯೇ?

ಭಾರತದಲ್ಲಿ 2021ರ ಜನವರಿ 16ರಂದು ಮೊದಲ ಬಾರಿಗೆ ಕೊವಿಡ್-19 ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ. ಅಂದಿನಿಂದ ಈವರೆಗೂ 72 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಣೆ ಮಾಡಲಾಗಿದೆ.

ಲಸಿಕೆ ಪ್ರಮಾಣಪತ್ರ ಪಡೆದುಕೊಳ್ಳುವುದು ಸುಲಭ

ಲಸಿಕೆ ಪ್ರಮಾಣಪತ್ರ ಪಡೆದುಕೊಳ್ಳುವುದು ಸುಲಭ

ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡಿರುವ ಎಲ್ಲ ಸಾರ್ವಜನಿಕರಿಗೆ ಸಾಕ್ಷ್ಯವನ್ನು ಒದಗಿಸಲು ಕೋವಿನ್ ಈಗಾಗಲೇ ಡಿಜಿಟಲ್ ಪ್ರಮಾಣೀಕೃತ ಪತ್ರಗಳನ್ನು ವಿತರಿಸುತ್ತಿದೆ. ಈ ಪ್ರಮಾಣಪತ್ರವನ್ನು ಡಿಜಿಟಲ್ ಸಾಧನ (ಸ್ಮಾರ್ಟ್ ಫೋನ್, ಟಾಬ್ಲೆಟ್, ಲ್ಯಾಪ್ ಟಾಪ್ ಇತ್ಯಾದಿ) ಗಳಲ್ಲಿ ರಕ್ಷಣೆ (ಸೇವ್ ) ಮಾಡಿಟ್ಟುಕೊಳ್ಳಬಹುದು ಅಥವಾ ಡಿಜಿ ಲಾಕರ್ ನಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು, ಆ ಮೂಲಕ ಲಸಿಕಾ ಕಾರ್ಯಕ್ರಮದ ಸಾಕ್ಷ್ಯ ಅಗತ್ಯ ಬಿದ್ದಾಗ ಅದನ್ನು ಡಿಜಿಟಲ್ ರೂಪದಲ್ಲಿ ಪಡೆದುಕೊಳ್ಳಬಹುದು.

ಅಂತೆಯೇ ಅಗತ್ಯ ಬೀಳುವ ಮಾಲ್, ಕಚೇರಿ ಸಂಕೀರ್ಣಗಳು, ಸಾರ್ವಜನಿಕ ಕಾರ್ಯಕ್ರಮಗಳು ಇತ್ಯಾದಿ ಕಡೆಗಳಲ್ಲಿ ಡಿಜಿಟಲ್ ರೂಪದಲ್ಲಿ ಮತ್ತು ಭೌತಿಕ ವಿಧಾನದಲ್ಲಿ ಕೊವಿಡ್-19 ಲಸಿಕೆ ಪ್ರಮಾಣಪತ್ರ ಪ್ರದರ್ಶಿಸಬಹುದು.

ಲಸಿಕೆ ಪ್ರಮಾಣಪತ್ರವನ್ನು ಎಲ್ಲಿ ಒದಗಿಸುವುದು ಅಗತ್ಯ?

ಲಸಿಕೆ ಪ್ರಮಾಣಪತ್ರವನ್ನು ಎಲ್ಲಿ ಒದಗಿಸುವುದು ಅಗತ್ಯ?

ಭಾರತದಲ್ಲಿ ಬಹುಪಾಲು ಸಂಸ್ಥೆಗಳು ಮತ್ತು ಪ್ರದೇಶಗಳಲ್ಲಿ ಕೊವಿಡ್-19 ಲಸಿಕೆ ಪ್ರಮಾಣಪತ್ರವನ್ನು ಒದಗಿಸುವ ಅಗತ್ಯ ಇಲ್ಲದಿರಬಹುದು. ಆದರೆ ಅವು ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಬೇಕಾಗಿರುತ್ತದೆ.

ಅಂತಹ ಕೆಲವು ಸಂಭಾವ್ಯ ಬಳಕೆ ಈ ಕೆಳಗಿನಂತಿರಬಹುದು.

* ಒಂದು ಸಂಸ್ಥೆ/ ಉದ್ಯೋಗದಾತ ತನ್ನ ಕಚೇರಿ, ಕಾರ್ಯಸ್ಥಳ ಇತ್ಯಾದಿಗಳನ್ನು ಪುನಾರಂಭಿಸಲು ತನ್ನ ಉದ್ಯೋಗಿಗಳ ಲಸಿಕೆ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಬಯಸಬಹುದು.

* ರೈಲುಗಳಲ್ಲಿ ಕಾಯ್ದಿರಿಸಿದ ತಮ್ಮ ಆಸನಗಳಿಗೆ ಬರುವ ಪ್ರಯಾಣಿಕರ ಲಸಿಕೆ ಸ್ಥಿತಿಗತಿಯನ್ನು ತಿಳಿಯಲು ರೈಲ್ವೆ ಬಯಸಬಹುದು.

* ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರ ಲಸಿಕೆ ಸ್ಥಿತಿಗತಿ ಅರಿಯಲು ಬಯಸಬಹುದು ಮತ್ತು ಅಥವಾ ವಿಮಾನ ನಿಲ್ದಾಣಗಳು ಕೇವಲ ಲಸಿಕೆ ಪಡೆದ ಪ್ರಯಾಣಿಕರಿಗೆ ಮಾತ್ರ ಹಾದು ಹೋಗುವ ಅವಕಾಶ ನೀಡಬಹುದು.

* ಹೋಟೆಲ್ ಗಳು ತಮ್ಮ ಹೋಟೆಲ್ ಒಳಗೆ ಬರುವ ಸಮಯದಲ್ಲಿ ಅಥವಾ ಆನ್ ಲೈನ್ ಮೂಲಕ ಕಾಯ್ದಿರಿಸುವ ಸಮಯದಲ್ಲಿ ಅವರ ಲಸಿಕೆ ಸ್ಥಿತಿಗತಿ ತಿಳಿಯಲು ಬಯಸಬಹುದು.

ಕೊವಿಡ್-19 ಲಸಿಕೆ ಬಗ್ಗೆ ತಿಳಿಸುವುದು ಅಗತ್ಯ

ಕೊವಿಡ್-19 ಲಸಿಕೆ ಬಗ್ಗೆ ತಿಳಿಸುವುದು ಅಗತ್ಯ

ಸಾಮಾಜಿಕ- ಆರ್ಥಿಕ ಚುಟವಟಿಕೆಗಳು ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿರುವಾಗ, ಪ್ರತಿಯೊಬ್ಬರ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ, ಉದ್ಯೋಗಿಗಳಾಗಿ, ಪ್ರಯಾಣಿಕರಾಗಿ, ನಿವಾಸಿಗಳಾಗಿ ಇತ್ಯಾದಿ ಎಲ್ಲರೂ ಯಾವುದೇ ಕಾರಣಕ್ಕೆ ಯಾವುದೇ ವಿಧದಲ್ಲಿ ತೊಡಗಿಕೊಂಡರೂ ವೈಯಕ್ತಿಕವಾಗಿ ಲಸಿಕೆ ಪಡೆದಿದ್ದೆವೆಯೇ ಇಲ್ಲವೇ ಎಂಬುದನ್ನು ಡಿಜಿಟಲ್ ಮೂಲಕ ತಿಳಿಸುವ ಅಗತ್ಯವಿದೆ. ಆದ್ದರಿಂದ, ಆಧಾರ್ ರೀತಿ ಕೋವಿನ್ ಮೂಲಕ ಲಸಿಕಾ ಕಾರ್ಯಕ್ರಮದ ಸ್ಥಿತಿಗತಿ ಪ್ರಮಾಣಿಕರಿಸುವ ಸೇವೆ ಅಗತ್ಯವಿದೆ. ಈ ರೀತಿಯ ಪ್ರಕರಣಗಳ ಬಗ್ಗೆ ಗಮನಹರಿಸಲು ಮತ್ತು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅಗತ್ಯಗಳಿಗೆ ನೆರವಾಗಲು, ಕೋವಿನ್ " ನಿಮ್ಮ ಗ್ರಾಹಕರು/ಕಕ್ಷಿದಾರರ ಲಸಿಕೆ ಸ್ಥಿತಿಗತಿ ತಿಳಿಯರಿ'' ಅಥವಾ ಕೆವೈಸಿ-ವಿಎಸ್ ಎಂಬ ಹೊಸ ಎಪಿಐ ಅನ್ನು ಅಭಿವೃದ್ಧಿಪಡಿಸಿದೆ.

CoWin ಅಪ್ಲಿಕೇಷನ್ ಮೂಲಕ ಲಸಿಕೆ ಸ್ಥಿತಿ ಬಗ್ಗೆ ತಿಳಿಯುವುದು

CoWin ಅಪ್ಲಿಕೇಷನ್ ಮೂಲಕ ಲಸಿಕೆ ಸ್ಥಿತಿ ಬಗ್ಗೆ ತಿಳಿಯುವುದು

ಈ ಎಪಿಐ ಬಳಕೆಗೆ ಸಾರ್ವಜನಿಕರು ಆತ/ಆಕೆಯ ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಬೇಕಾಗುತ್ತದೆ. ಆದ್ದರಿಂದ ಅವರು ಒಂದು ಒಟಿಪಿ ಪಡೆಯುತ್ತಾರೆ ಅದನ್ನು ನಮೂದಿಸಬೇಕು. ಅದಕ್ಕೆ ಪ್ರತಿಯಾಗಿ ಕೋವಿನ್, ಪರಿಶೀಲಿಸುವ ಸಂಸ್ಥೆಗೆ ವ್ಯಕ್ತಿಯ ಲಸಿಕೆಯ ಸ್ಥಿತಿಗತಿಯ ವಿವರವನ್ನು ಒದಗಿಸುತ್ತದೆ. ಅದು ಈ ಕೆಳಗಿನಂತಿರಲಿದೆ.

0 - ವ್ಯಕ್ತಿ ಲಸಿಕೆ ಹಾಕಿಸಿಕೊಂಡಿಲ್ಲ

1 - ವ್ಯಕ್ತಿ ಭಾಗಶಃ ಲಸಿಕೆ ಪಡೆದಿದ್ದಾರೆ.

2 - ವ್ಯಕ್ತಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ.

ಈ ಪ್ರತಿಕ್ರಿಯೆ ಡಿಜಿಟಲ್ ಸಹಿ ಹೊಂದಿರುತ್ತದೆ ಮತ್ತು ಅದನ್ನು ತಕ್ಷಣವೇ ಪರಿಶೀಲಿಸುವ ಸಂಸ್ಥೆಯ ಜೊತೆ ಹಂಚಿಕೊಳ್ಳಬಹುದು. ನಿಜ ಜೀವನದ ಉದಾಹರಣೆ ತೆಗೆದುಕೊಳ್ಳುವುದಾದರೆ, ರೈಲ್ವೆ ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಟಿಕೆಟ್ ಖರೀದಿಗೆ ವ್ಯಕ್ತಿ ಅಗತ್ಯ ವಿವರಗಳನ್ನು ಕಡ್ಡಾಯವಾಗಿ ಒದಗಿಸಲೇಬೇಕಾಗಿರುತ್ತದೆ. ಅಗತ್ಯಬಿದ್ದರೆ ವ್ಯಕ್ತಿಯ ಸಮ್ಮತಿಯೊಂದಿಗೆ ಅದೇ ವಹಿವಾಟಿನಲ್ಲಿ ಸಂಸ್ಥೆ ಲಸಿಕೆ ನೀಡಿಕೆಯ ಸ್ಥಿತಿಗತಿಯನ್ನು ಪಡೆದುಕೊಳ್ಳಬಹುದು.

KYC-VS ಅಂತಹ ಬಳಕೆಯ ಎಲ್ಲ ಸಂದರ್ಭಗಳು ಮತ್ತು ಹೆಚ್ಚಿನ ಕೆಲಸವನ್ನು ಸುಲಭಗೊಳಿಸುತ್ತದೆ. ಇದು ಸಮ್ಮತಿ ಆಧರಿತ ಮತ್ತು ಗೋಪ್ಯತೆ ಸಂರಕ್ಷಣೆ ಎರಡೂ ಅಂಶಗಳನ್ನು ಹೊಂದಿದೆ. ಕೋವಿನ್ ಟೀಂ ಎಪಿಐನ ವೆಬ್ ಪುಟವನ್ನು ಸಿದ್ಧಪಡಿಸಿದೆ. ಅದು ಯಾವುದೇ ವ್ಯವಸ್ಥೆಯೊಂದಿಗೆ ಸಂಯೋಜಿಸಬಹುದಾಗಿದೆ. ಇದರಿಂದಾಗಿ ಅತ್ಯಲ್ಪ ಸಮಯದಲ್ಲಿ ಯಾವುದೇ ವ್ಯವಸ್ಥೆ ಜೊತೆ ಸುಲಭವಾಗಿ ಸಂಯೋಜಿಸಲು ಅವಕಾಶವಿದೆ. ಅಲ್ಲದೆ, ಇಲ್ಲಿ ಸೂಚಿಸಲಾದ ಬಳಕೆಯ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ಸೇವಾ ಪೂರೈಕೆದಾರರು, ಖಾಸಗಿ ಅಥವಾ ಸಾರ್ವಜನಿಕರು, ಮನವಿ ಮಾಡಿದ ಸೇವೆಯನ್ನು ನೀಡಲು ವ್ಯಕ್ತಿಯ ಲಸಿಕೆ ಪಡೆದಿರುವಿಕೆಯ ಸ್ಥಿತಿಗತಿ ಪರಿಶೀಲಿಸುವುದು ಅಗತ್ಯವೆನಿಸಿದರೆ ಈ ವಿಧಾನವನ್ನು ಬಳಸಿಕೊಳ್ಳಬಹುದು.

ದೇಶದಲ್ಲಿ ನಾಲ್ಕು ಹಂತಗಳ ಲಸಿಕೆ ವಿತರಣೆ

ದೇಶದಲ್ಲಿ ನಾಲ್ಕು ಹಂತಗಳ ಲಸಿಕೆ ವಿತರಣೆ

ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿತ್ತು.

ಕೊರೊನಾವೈರಸ್ ಲಸಿಕೆ ವಿತರಣೆ ಪ್ರಮಾಣದ ಬಗ್ಗೆ ತಿಳಿಯಿರಿ

ಕೊರೊನಾವೈರಸ್ ಲಸಿಕೆ ವಿತರಣೆ ಪ್ರಮಾಣದ ಬಗ್ಗೆ ತಿಳಿಯಿರಿ

2021ರ ಸೆಪ್ಟೆಂಬರ್ 10ರ ಅಂಕಿ-ಅಂಶಗಳ ಪ್ರಕಾರ, 71,94,73,325 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕಳುಹಿಸಲಾಗಿರುವ ಲಸಿಕೆಯ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.

* ಪೂರೈಕೆಯಾದ ಲಸಿಕೆ ಪ್ರಮಾಣ - 71,94,73,325

* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 7,00,000

* ಕೊವಿಡ್-19 ಲಸಿಕೆಯ ಲಭ್ಯತೆ - 5,72,74,025

English summary
Covid-19 Vaccination: CoWIN launches new API: KYC-VS: Know Your Customer’s or Client’s Vaccination Status.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X