ಭಾರತದ ನೆಲ ನಾನು ಸ್ಪರ್ಶಿಸಿದರಷ್ಟೇ ಕೊರೊನಾ ಮಹಾಮಾರಿ ಅಂತ್ಯ
ದೇಶಬಿಟ್ಟು ಪರಾರಿಯಾಗಿರುವ ವಿವಾದೀತ ದೇವಮಾನವ ಸ್ವಾಮಿ ನಿತ್ಯಾನಂದ ಈಕ್ವೆಡಾರ್‌ನಲ್ಲಿ ಖಾಸಗಿ ಭೂಮಿಯನ್ನೇ ದೇಶವನ್ನಾಗಿ ಪರಿವರ್ತಿಸಿಕೊಂಡು ಅದಕ್ಕೆ ತಮ್ಮದೇ ಪ್ರಧಾನಿ ಮತ್ತು ಮಂತ್ರಿಮಂಡಲವನ್ನು ರಚಿಸಿಕೊಂಡಿರುವುದು ಗೊತ್ತಿರುವ ವಿಚಾರ.
Recommended Video
ಇದಲ್ಲದೇ, ಆ ದೇಶಕ್ಕೆ 'ಕೈಲಾಸ' ಎಂಬ ಹೆಸರು ಇಟ್ಟಿದ್ದು, ಅದನ್ನು 'ಮಹಾನ್ ಹಿಂದೂ ರಾಷ್ಟ್ರ' ಎಂದೂ ಕರೆದುಕೊಂಡಿದ್ದೂ ಆಗಿದೆ. ಹಿಂದೂಯಿಸಂನಲ್ಲಿನ ಪುನರ್ಜನ್ಮದಲ್ಲಿ ತಾನೇ ಪರಮಶಿವನ ಅವತಾರ ಎಂದು ನಿತ್ಯಾನಂದ ಹೇಳಿಕೊಂಡಿದ್ದರು.
ಆದರೆ, ನಮ್ಮ ದೇಶದಲ್ಲಿ ಈತನಿಗೆ ಆಶ್ರಯ ಕೊಟ್ಟಿಲ್ಲ ಎಂದು ಈಕ್ವೆಡಾರ್ ಹೇಳಿತ್ತು. ಈಕ್ವೆಡಾರ್ ಬಿಟ್ಟು ಹೈಟಿಗೆ ನಿತ್ಯಾನಂದ ತೆರಳಿದ್ದ ಎಂದು ಈಕ್ವೆಡಾರ್ ರಾಯಭಾರ ಕಚೇರಿ ಹೇಳಿಕೆ ನೀಡುವ ಮೂಲಕ ಸ್ಪಷ್ಟನೆಯನ್ನು ನೀಡಿತ್ತು.
ಸದಾ ಒಂದಲ್ಲಾ ಒಂದು ವಿವಾದಕಾರಿ ವಿಡಿಯೋ ಮೂಲಕ ಪ್ರಚಲಿತದಲ್ಲಿರುವ ನಿತ್ಯಾನಂದ, ಎರಡು ದಿನಗಳ ಹಿಂದೆ ಹೊಸ ವಿಡಿಯೋ ಸಂದೇಶವೊಂದರಲ್ಲಿ, ತಾನು ಭಾರತಕ್ಕೆ ಬಂದರೆ ಮಾತ್ರ ಕೊರೊನಾ ಅಂತ್ಯವಾಗುವುದು ಎಂದು ಹೇಳಿರುವುದು ದಾಖಲಾಗಿದೆ.

ಕೊರೊನಾ ಬರದಂತೆ ತಡೆಯಲು 28 ದಿನಗಳ ಪಚ್ಚೈ ಪತ್ತಿನಿ ಎಂಬ ಮಹಾ ವೃತ
ಕೊರೊನಾ ಮೊದಲನೇ ಅಲೆಯ ವೇಳೆ, ಮಾಧ್ಯಮಗಳಿಗೆ ಈ ಮೇಲ್ ಮೂಲಕ ಪತ್ರಿಕಾ ಪ್ರಕಟಣೆ ನೀಡಿದ್ದ ನಿತ್ಯಾನಂದ ಸ್ವಾಮಿ, ಕೊರೊನಾ ಹೊಡೆದೊಡಿಸಲು, ಕೊರೊನಾ ಬರದಂತೆ ತಡೆಯಲು 28 ದಿನಗಳ ಪಚ್ಚೈ ಪತ್ತಿನಿ ಎಂಬ ಮಹಾ ವೃತ ಆರಂಭಿಸಿರುವುದಾಗಿ ಹೇಳಿದ್ದರು. 28 ದಿನ ಘೋರ ಉಪವಾಸ ಕೈಗೊಳ್ಳುವುದು ಈ ಪಚ್ಚೈ ಪತ್ತಿನಿ ವೃತದ ಸಂಕ್ಷಿಪ್ತ ರೂಪ. ಇದಕ್ಕೆ ಕೊರೊನಾಕ್ಕಿಂತಲೂ ಬಲಶಾಲಿಯಾದ ರೋಗ ಹೋಗಲಾಡಿಸುವ ಶಕ್ತಿ ಇದೆ ಎಂದು ನಿತ್ಯಾನಂದ ಸ್ವಾಮಿ ಹೇಳಿಕೊಂಡಿದ್ದರು.

ಕೊರೊನಾ ಎರಡನೇ ಅಲೆಯ ಪ್ರಭಾವ ಕಮ್ಮಿಯಾಗುತ್ತಿರುವ ಈ ಹೊತ್ತಿನಲ್ಲಿ
ಕೊರೊನಾ ಎರಡನೇ ಅಲೆಯ ಪ್ರಭಾವ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿರುವ ಈ ಹೊತ್ತಿನಲ್ಲಿ ನಿತ್ಯಾನಂದ ಹೊಸ ವಿಡಿಯೋ ಸುದ್ದಿ ಮಾಡುತ್ತಿದೆ. ತಾನು ಭಾರತದ ನೆಲವನ್ನು ಸ್ಪರ್ಶಿಸಿದಾಗ ಮಾತ್ರ ಕೊರೊನಾ ಮಹಾಮಾರಿ ಅಂತ್ಯಗೊಳ್ಳುವುದು ಎಂದು ಸ್ವಾಮಿ ನಿತ್ಯಾನಂದ ವಿಡಿಯೋ ಒಂದರಲ್ಲಿ ಹೇಳಿರುವುದು ದಾಖಲಾಗಿದೆ.

ಭಾರತೀಯರಿಗೆ ಕೈಲಾಶ ಪ್ರವೇಶಕ್ಕೆ ವೀಸಾ ನೀಡುವುದಿಲ್ಲ
ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತೀಯರಿಗೆ ಕೈಲಾಶ ಪ್ರವೇಶಕ್ಕೆ ವೀಸಾ ನೀಡುವುದಿಲ್ಲ ಎಂದು ಸ್ವಾಮಿ ನಿತ್ಯಾನಂದ ನಿರ್ಬಂಧ ವಿಧಿಸಿದ್ದರು. ಭಾರತ ಮಾತ್ರವಲ್ಲದೇ ಬ್ರೆಜಿಲ್, ಯುರೋಪಿಯನ್ ಯೂನಿಯನ್ ಮತ್ತು ಮಲೇಷ್ಯಾ ದೇಶದ ಭಕ್ತರಿಗೂ ಕೂಡ ಪ್ರವೇಶ ನಿರಾಕರಿಸಿದ್ದರು. ಕೋವಿಡ್ ಹೆಚ್ಚಳದ ಹಿನ್ನಲೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ನಿತ್ಯಾನಂದ ತಿಳಿಸಿದ್ದರು.

56 ದೇಶಗಳನ್ನು ಹೊಂದಿದ್ದ ನಮಗೆ (ಹಿಂದೂ) ಈಗ ಒಂದೂ ಉಳಿದಿಲ್ಲ
56 ದೇಶಗಳನ್ನು ಹೊಂದಿದ್ದ ನಮಗೆ (ಹಿಂದೂ) ಈಗ ಒಂದೂ ಉಳಿದಿಲ್ಲ. ನಾನು ಎಲ್ಲ ಶೋಷಿತ ಹಿಂದೂಗಳ ಧ್ವನಿಯಾಗಿದ್ದೇನೆ. ನಾನು ಹಿಂದೂ ದೇಶವೊಂದನ್ನು ಸ್ಥಾಪಿಸಿ ಪುನರುಜ್ಜೀವಗೊಳಿಸುತ್ತೇನೆ. ಇದು ವೇದದ ತತ್ವಗಳೊಂದಿಗೆ ನಿರ್ಮಾಣವಾಗಲಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications