ಜುಲೈನಲ್ಲಿ ಕೋವಿಡ್ 2ನೇ ಅಲೆ ಅಂತ್ಯ, 6 ತಿಂಗಳ ಬಳಿಕ 3ನೇ ಅಲೆ ಶುರು: ಕೇಂದ್ರ

ನವದೆಹಲಿ, ಮೇ 19: ಜುಲೈ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಅಂತ್ಯಗೊಳ್ಳಲಿದ್ದು, ಅದಾದ 6 ತಿಂಗಳಲ್ಲಿ ಕೊರೊನಾ ಮೂರನೇ ಅಲೆ ಶುರುವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Recommended Video

      ಒಟ್ಟು ಸೊಂಕೀತರ ಸಂಖ್ಯೆ ಎಷ್ಟು ಗೊತ್ತಾ? | Oneindia Kannada

      ಕೇಂದ್ರ ಸರ್ಕಾರದ ಮೂರು ಮಂದಿ ತಜ್ಞರ ಪ್ಯಾನೆಲ್‌ನಲ್ಲಿ ಈ ಕುರಿತು ಅಭಿಪ್ರಾಯ ಹೊರಬಿದ್ದಿದೆ, ಮೇ ಅಂತ್ಯದೊಳಗೆ 1.5 ಲಕ್ಷ ಕೊರೊನಾ ಪ್ರಕರಣಗಳು ನಿತ್ಯ ದಾಖಲಾಗಲಿದೆ.

      ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಜಾರ್ಖಂಡ್, ರಾಜಸ್ಥಾನ,ಕೇರಳ, ಸಿಕ್ಕಿಂ, ಉತ್ತರಾಖಂಡ್, ಗುಜರಾತ್, ಹರ್ಯಾಣ, ದೆಹಲಿ, ಗೋವಾದಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗುತ್ತಿವೆ.
      ತಮಿಳುನಾಡಿನಲ್ಲಿ ಮೇ 29 ರಿಂದ 31 ಸಮಯದಲ್ಲಿ ಕೊರೊನಾ ಪ್ರಕರಣಗಳು ಉತ್ತುಂಗಕ್ಕೇರಲಿದೆ, ಪುದುಚೇರಿಯಲ್ಲಿ ಮೇ 19-20ರಂದು ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಲಿವೆ.

      Covid Second Wave To End In July, Third Wave After 6 Months: Govt Panel

      ಭಾರತದಲ್ಲಿ 2,67,334 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,19,86,363 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 2,83,248 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 32,26,719 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

      ಕಳೆದ ಮೇ 1ರಿಂದ ಈವರೆಗೂ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನ 64,60,624 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ಭಾರತದಲ್ಲಿ ಈವರೆಗೂ 96,73,302 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 66,58,820 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ.

      1,45,65,255 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 82,29,693 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 5,80,37,874 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 93,49,575 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 5,48,13,626 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 1,79,77,749 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+