ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ, ಆಗಸ್ಟ್ ಅಲ್ಲ ಭಾರತದಲ್ಲಿ ನವೆಂಬರ್‌ನಲ್ಲಿ ಕೊರೊನಾ ಸೋಂಕು ತಾರಕಕ್ಕೆ!

|
Google Oneindia Kannada News

ನವದೆಹಲಿ, ಜೂನ್ 15: ಭಾರತದಲ್ಲಿ ಜುಲೈ, ಆಗಸ್ಟ್ ಅಲ್ಲ ಬದಲಾಗಿ ನವೆಂಬರ್‌ನಲ್ಲಿ ಕೊರೊನಾ ಸೋಂಕು ತಾರಕಕ್ಕೇರಲಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರದ ಭಾರತೀಯ ವೈದ್ಯ ಸಂಶೋಧನಾ ಮಂಡಳಿ ಕೊರೊನಾ ಕುರಿತು ಅಧ್ಯಯನಕ್ಕೆ ಸಂಶೋಧಕರ ತಂಡವೊಂದನ್ನು ರಚನೆ ಮಾಡಿತ್ತು.

ಅದು ನೀಡಿರುವ ಮಾಹಿತಿ ಪ್ರಕಾರ, ಕೊರೊನಾ ವೈರಸ್ ನಿಯಂತ್ರಣ ಸಲುವಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಲಾಕ್‌ಡೌನ್ ಹಾಗೂ ಆರೋಗ್ಯ ವ್ಯವಸ್ಥೆ ಬಲಪಡಿಸುವ ಕ್ರಮಗಳಿಂದಾಗಿ ಕೊರೊನಾ ತನ್ನ ಗರಿಷ್ಠ ಮಟ್ಟಕ್ಕೆ ತಲುಪುವುದು ವಿಳಂಬವಾಗಿದೆ.

ಆದರೆ ಆ ಸನ್ನಿವೇಶ ನವೆಂಬರ್ ಮಧ್ಯಭಾಗದ ವೇಳೆಗೆ ಬರಲಿದೆ. ಆಗ ಐಸೋಲೇಷನ್ ಮತ್ತು ಐಸಿಯು ಬೆಡ್‌ಗಳು ಹಾಗೂ ವೆಂಟಿಲೇಟರ್‌ಗಳ ಕೊರತೆ ತೀವ್ರವಾಗಿ ಬಾಧಿಸುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆ ನೀಡಿದೆ.

ಭಾರತದಲ್ಲಿ 3.30 ಲಕ್ಷ ಮಂದಿಗೆ ಕೊರೊನಾವೈರಸ್ ಅಂಟಿದರೂ ಡೋಂಟ್ ವರಿ!ಭಾರತದಲ್ಲಿ 3.30 ಲಕ್ಷ ಮಂದಿಗೆ ಕೊರೊನಾವೈರಸ್ ಅಂಟಿದರೂ ಡೋಂಟ್ ವರಿ!

ನವೆಂಬರ್ ಮಧ್ಯ ಭಾಗದ ವೇಳೆಗೆ ದೇಶದಲ್ಲಿ ಕೊರೊನಾ ವೈರಸ್ ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ. ದೇಶದಲ್ಲಿ ಈಗಾಗಲೇ ನಿತ್ಯ ಸರಾಸರಿ 10 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ವೈರಸ್ ಹಾವಳಿ ಹೆಚ್ಚಾಗಲಿದೆ ಎಂಬ ಎಚ್ಚರಿಕೆ ಸಂದೇಶ ರವಾನೆಯಾಗಿದೆ.

ಕೊರೊನಾ ವೈರಸ್ ತುತ್ತತುದಿಗೆ

ಕೊರೊನಾ ವೈರಸ್ ತುತ್ತತುದಿಗೆ

8 ವಾರಗಳ ಕೊರೊನಾ ಲಾಕ್‌ಡೌನ್‌ನಿಂದಾಗಿ ವೈರಸ್ ತುತ್ತತುದಿಗೆ ಹೋಗುವುದು 34 ರಿಂದ 76 ದಿನಗಳಷ್ಟು ಮುಂದೆ ಹೋಗಿದೆ.ಅಲ್ಲದೆ ಲಾಕ್‌ಡೌನ್‌ನಿಂದ ಸೋಂಕಿತರ ಸಂಖ್ಯೆ ಶೇ.69 ರಿಂದ ಶೇ.97 ರಷ್ಟು ಕಡಿಮೆಯಾಗಿದೆ. ಜೊತೆಗೆ ಆರೋಗ್ಯ ಸಂಪನ್ಮೂಲ ಹಾಗೂ ಮೂಲಸೌಕರ್ಯ ಗಳಿಸಿಕೊಳ್ಳಲು ಸಮಯಾವಕಾಶ ನೀಡಿದೆ ಎಂದು ವರದಿಯಲ್ಲಿ ಇದೆ.

ವರದಿಯಲ್ಲಿರುವುದೇನು?

ವರದಿಯಲ್ಲಿರುವುದೇನು?

-ನವೆಂಬರ್ ಮಧ್ಯಭಾಗದಲ್ಲಿ ದೇಶದಲ್ಲಿ ಸೋಂಕಿತರ ಪ್ರಮಾಣ ಗರಿಷ್ಠ ಮಟ್ಟಕ್ಕೆ ತಲುಪಲಿದೆ.
-8 ವಾರಗಳ ಲಾಕ್‌ಡೌನ್‌ನಿಂದಾಗಿ ಸೋಂಕು ಹೆಚ್ಚಳ 34 ರಿಂದ 76 ದಿನ ಮುಂದಕ್ಕೆ
-ಕೊರೊನಾ ಸೋಂಕಿತರ ಸಂಖ್ಯೆಯೂ ಶೇ.69 ರಿಂದ 97 ರಷ್ಟು ನಿಯಂತ್ರಣ
-ಆರೋಗ್ಯ ಸಂಪನ್ಮೂಲ, ಮೂಲ ಸೌಕರ್ಯ ಸಿದ್ಧಪಡಿಸಲು ಕಾಲಾವಕಾಶ
-ಈಗಿರುವ ಚಿಕಿತ್ಸಾ ವ್ಯವಸ್ಥೆ ನವೆಂಬರ್ ವರೆಗೆ ಇರುವ ಬೇಡಿಕೆಗಳಿಗೆ ಸಾಕಾಗುತ್ತದೆ.

ರಾಜ್ಯದಲ್ಲಿ ಕೊರೊನಾ ವೈರಸ್‌ ಬಗ್ಗೆ ಅನಗತ್ಯ ಆತಂಕ ಬೇಡ: ಕಾರಣ ಏನು ಗೊತ್ತಾ?ರಾಜ್ಯದಲ್ಲಿ ಕೊರೊನಾ ವೈರಸ್‌ ಬಗ್ಗೆ ಅನಗತ್ಯ ಆತಂಕ ಬೇಡ: ಕಾರಣ ಏನು ಗೊತ್ತಾ?

ಸಾರ್ವಜನಿಕರ ಆರೋಗ್ಯ ಕ್ರಮ ಪರಿಣಾಮಕಾರಿ

ಸಾರ್ವಜನಿಕರ ಆರೋಗ್ಯ ಕ್ರಮ ಪರಿಣಾಮಕಾರಿ

ಲಾಕ್‌ಡೌನ್ ವೇಳೆ ತೆಗೆದುಕೊಳ್ಳಲಾಗಿರುವ ಸಾರ್ವಜನಿಕ ಆರೋಗ್ಯ ಕ್ರಮಗಳು ಶೇ.60ರಷ್ಟು ಪರಿಣಾಮಕಾರಿಯಾಗಿದ್ದರೂ, ನವೆಂಬರ್ ಮೊದಲ ಭಾಗದವರೆಗೆ ಕೊರೊನಾ ಸೋಂಕಿನ ಬೇಡಿಕೆಯನ್ನು ನೀಗಿಸಬಹುದಾಗಿದೆ. ಬಳಿಕ 5.4 ತಿಂಗಳ ಕಾಲ ಐಸೋಲೇಷನ್ ಬೆಡ್, 4.6 ತಿಂಗಳ ಕಾಲ ಐಸಿಯು ಬೆಡ್ ಹಾಗೂ 3.9 ತಿಂಗಳುಗಳ ಕಾಲ ವೆಂಟಿಲೇಟರ್ ಸಮಸ್ಯೆ ಕಾಡಲಿದೆ.

ಆರೋಗ್ಯ ವ್ಯವಸ್ಥೆ ಮತ್ತು ಜಿಡಿಪಿ

ಆರೋಗ್ಯ ವ್ಯವಸ್ಥೆ ಮತ್ತು ಜಿಡಿಪಿ

ಕೊರೊನಾದಿಂದಾಗಿ ಆರೋಗ್ಯ ವ್ಯವಸ್ಥೆ ಮೇಲಿನ ಒಟ್ಟಾರೆ ಆರ್ಥಿಕ ವೆಚ್ಚ ಜಿಡಿಪಿಯ ಶೇ.6.2ರಷ್ಟಿರಲಿದೆ ಎಂದು ತಿಳಿಸಿದೆ. ದೇಶದ ಜಿಡಿಪಿ 200 ಲಕ್ಷ ಕೋಟಿ ರೂ. ಇದ್ದು ಅದರಲ್ಲಿ ಶೇ.6.2ರಷ್ಟು ಅಂದರೆ 12 ಲಕ್ಷ ಕೋಟಿ ರೂ. ಆಗುತ್ತದೆ.

English summary
The peak stage of COVID-19 pandemic in India has been delayed by the eight-week lockdown along with strengthened public health measures and it may now arrive around mid-November during which there could be a paucity of isolation and ICU beds, and ventilators, according to a study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X