ದಕ್ಷಿಣ ಭಾರತಕ್ಕಿಂತ ಉತ್ತರದಲ್ಲಿ 2 ಪಟ್ಟು ವೇಗದಲ್ಲಿ ಕೋವಿಡ್ ಇಳಿಕೆ- ಸಮೀಕ್ಷೆಯಿಂದ ಬಹಿರಂಗ
ನವದೆಹಲಿ, ಜೂ.07: ಕೊರೊನಾ ಎರಡನೇ ಅಲೆ ದೇಶದ ಎಲ್ಲಾ ರಾಜ್ಯಗಳಲ್ಲಿ ಇಳಿಕೆ ಕಾಣುತ್ತಿದ್ದು ಈ ಪ್ರಕರಣಗಳ ಇಳಿಕೆ ವಿಚಾರದಲ್ಲಿ ಕುತೂಹಲಕಾರಿ ಅಂಶವು ಹೊರಹೊಮ್ಮಿದೆ. ಉತ್ತರ ಭಾರತದಲ್ಲಿ ದಕ್ಷಿಣ ಭಾರತಕ್ಕಿಂತ ಎರಡು ಪಟ್ಟು ಹೆಚ್ಚಿಗೆ ವೇಗದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆ ಕಂಡಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ದೇಶದಾದ್ಯಂತ ಎರಡನೇ ಕೊರೊನಾ ಅಲೆಯ ಸಂದರ್ಭದಲ್ಲಿ ಕೊರೊನಾ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರೊಂದಿಗೆ ಆಕ್ಸಿಜನ್ ಕೊರತೆಯೂ ಹಲವಾರು ಮಂದಿಯ ಸಾವಿಗೆ ಕಾರಣವಾಗಿದೆ. ಈ ನಡುವೆ ಲಸಿಕೆ ಕೊರತೆಯೂ ಕೂಡಾ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಲಸಿಕೆ ಉತ್ಪಾದನೆಯನ್ನು ಹೆಚ್ಚಳ ಮಾಡುವ ಪ್ರಯತ್ನಗಳು ಕೂಡಾ ನಡೆಯುತ್ತಿದೆ.
ಮಹಾರಾಷ್ಟ್ರದಲ್ಲಿ ಇದೆಂಥಾ ದುಸ್ಥಿತಿ; ಕೊರೊನಾ ರೋಗಿಗಳಿಗೆ ಕುರ್ಚಿಯಲ್ಲೇ ಚಿಕಿತ್ಸೆ!
ಈ ಎಲ್ಲಾ ಬೆಳವಣಿಗೆಯ ನಂತರ ದೇಶದಲ್ಲಿ ಈ ಎರಡನೇ ಕೊರೊನಾ ಅಲೆಯ ಸಂದರ್ಭದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿರುವುದು ಆಶಾದಾಯಕ ವಿಚಾರವಾಗಿದೆ. ಇನ್ನು ಈ ಕೊರೊನಾ ಇಳಿಕೆಗೆ ಸಂಬಂಧಿಸಿದ ಸಮೀಕ್ಷೆಯೊಂದರ ಪ್ರಕಾರ ದಕ್ಷಿಣ ಭಾರತಕ್ಕಿಂತ ಹೆಚ್ಚಾಗಿ ಉತ್ತರ ಭಾರತದಲ್ಲಿ ಕೊರೊನಾ ಪ್ರಕರಣಗಳು ಇಳಿಕೆ ಅಧಿಕವಾಗಿದೆ ಎಂದು ತಿಳಿಸಿದೆ.

ಉತ್ತರ ಭಾರತದಲ್ಲಿ ಕೊರೊನಾ ಪ್ರಕರಣಗಳ ಕುಸಿತ
ಕೊರೊನಾ ಪ್ರಕರಣಗಳ ಇಳಿಕೆಯ ವಿಚಾರದಲ್ಲಿ ಉತ್ತರ-ದಕ್ಷಿಣ ಎಂದು ವಿಭಜನೆ ಇದೆ. ಹರಿಯಾಣದಲ್ಲಿ ಏಳು ದಿನಗಳ ಕೊರೊನಾ ಪ್ರಕರಣಗಳ ಸರಾಸರಿ ದೈನಂದಿನ ಕುಸಿತವು 8.9 ಪ್ರತಿಶತದಷ್ಟು ಇದೆ. ರಾಜಸ್ಥಾನದಲ್ಲಿ ಶೇ.8.5, ದೆಹಲಿಯಲ್ಲಿ ಶೇ. 8.2, ಬಿಹಾರದಲ್ಲಿ ಶೇ. 8.1, ಉತ್ತರ ಪ್ರದೇಶದಲ್ಲಿ ಶೇ. 7.8 ಹಾಗೂ ಉತ್ತರಾಖಂಡದಲ್ಲಿ ಶೇ. 7.6 ಕುಸಿತ ಕಂಡು ಬಂದಿದೆ.

ದಕ್ಷಿಣ ಭಾರತದಲ್ಲಿ ಕೊರೊನಾ ಪ್ರಕರಣಗಳ ಕುಸಿತ
ಮಹಾರಾಷ್ಟ್ರ ಮತ್ತು ದಕ್ಷಿಣದಾದ್ಯಂತ ಕುಸಿತವೂ ಕಡಿಮೆ ಪ್ರಮಾಣದಲ್ಲಿದೆ. ತಮಿಳುನಾಡಿನಲ್ಲಿ ಶೇ. 2.7, ಆಂಧ್ರಪ್ರದೇಶದಲ್ಲಿ ಶೇ. 4.2 ರವರೆಗೆ ಕೊರೊನಾ ಪ್ರಕರಣಗಳು ಇಳಿಕೆ ಕಂಡಿದೆ. ಈ ಇಳಿಕೆಯನ್ನು ಗಮನಿಸಿದಾಗ ಉತ್ತರ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ದಕ್ಷಿಣ ಮತ್ತು ಮಹಾರಾಷ್ಟ್ರದಲ್ಲಿ ಕಂಡುಬರುವ ಕೊರೊನಾ ಕುಸಿತದ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚು ಪ್ರಕರಣಗಳು ಕುಸಿಯುತ್ತಿವೆ.
ಲಸಿಕೆ ಪಡೆದಾಗಿದೆ, ಕೊರೊನಾ ಸೋಂಕಿನ ಲಕ್ಷಣವಿದೆ ಏನು ಮಾಡಬೇಕು?

ಈ ಬಗ್ಗೆ ವಿಜ್ಞಾನಿ ಗಗನ್‌ದೀಪ್ ಹೇಳಿದ್ದಿಷ್ಟು
"ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿರುವುದು ಉತ್ತಮ ವಿಚಾರ" ಎಂದು ಹೇಳಿರುವ ವಿಜ್ಞಾನಿ ಗಗನ್‌ದೀಪ್ ಕಾಂಗ್, ಉತ್ತರ-ದಕ್ಷಿಣ ಪ್ರಕರಣ ಇಳಿಕೆಯ ಬಗ್ಗೆ ಪ್ರತಿಕ್ರಿಯಿಸಿ, "ನಿಸ್ಸಂಶಯವಾಗಿ, ದಕ್ಷಿಣದಂತೆಯೇ ಉತ್ತರದಲ್ಲೂ ಉತ್ತಮ ಆರೋಗ್ಯ ವ್ಯವಸ್ಥೆ ಹೊಂದಿರುವ ರಾಜ್ಯಗಳು ಕೊರೊನಾ ಸಮರ್ಪಕವಾಗಿ ನಿರ್ವಹಿಸುವ ನಿರೀಕ್ಷೆಯಿದೆ. ವೈರಸ್‌ನ ವಿಭಿನ್ನ ರೂಪಾಂತರಗಳು ವಿವಿಧ ಪ್ರದೇಶಗಳಲ್ಲಿ ಸಾಧ್ಯತೆಯಿದೆ" ಎಂದು ಹೇಳಿದ್ದಾರೆ.
ಬರೊಬ್ಬರಿ 216 ದಿನಗಳ ಕಾಲ ಹೆಚ್ಐವಿ ಸೋಂಕಿತೆಯ ದೇಹದಲ್ಲಿತ್ತು ಕೊರೊನಾ ವೈರಸ್!

ಮಹಾರಾಷ್ಟ್ರ, ಉತ್ತರ ಪ್ರದೇಶದ ಹೋಲಿಕೆ
ಕೊರೊನಾ ಪ್ರಕರಣಗಳ ವಿಚಾರದಲ್ಲಿನ ವ್ಯತ್ಯಾಸದ ಬಗ್ಗೆ ಮಹಾರಾಷ್ಟ್ರ, ಉತ್ತರ ಪ್ರದೇಶದ ನಡುವಿನ ಹೋಲಿಕೆಯ ಮೂಲಕ ಅರ್ಥ ಮಾಡಿಕೊಳ್ಳಬಹುದಾಗಿದೆ. ಎರಡನೇ ಕೊರೊನಾ ಅಲೆಯ ಆರಂಭದಲ್ಲಿ ಏಪ್ರಿಲ್ 24 ರಂದು ಮಹಾರಾಷ್ಟ್ರದಲ್ಲಿ 65,447 ಪ್ರಕರಣಗಳು (ಏಳು ದಿನಗಳ ಸರಾಸರಿ) ಏರಿಕೆಯಾಗಿದೆ. ಅದೇ ಸಂದರ್ಭದಲ್ಲಿ ಉತ್ತರಪ್ರದೇಶದಲ್ಲಿ ಏಪ್ರಿಲ್ 27 ರ ವೇಳೆಗೆ 35,010 ಕೊರೊನಾ ಪ್ರಕರಣಗಳು ದಾಖಲಾಗಿದೆ. ಜೂನ್ 3 ರಂದು ಮಹಾರಾಷ್ಟ್ರವು ಸರಾಸರಿ ಕೇವಲ 17,000 ಪ್ರಕರಣಗಳನ್ನು ವರದಿಯಾಗಿದೆ. ಅದೇ ಸಂದರ್ಭದಲ್ಲಿ ಉತ್ತರ ಪ್ರದೇಶಲ್ಲಿ ಕೊರೊನಾ ಪ್ರಕರಣಗಳು 1,742 ಕ್ಕೆ ಇಳಿಕೆ ಕಂಡಿದೆ.
(ಒನ್‌ಇಂಡಿಯಾ ಸುದ್ದಿ)