• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳಿಗೆ ಬರುತ್ತೆ ಕೇಂದ್ರ ತಂಡ

|

ನವದೆಎಹಲಿ, ಸೆಪ್ಟೆಂಬರ್ 08: ನಿತ್ಯ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳಿಗೆ ಕೇಂದ್ರ ತಂಡ ಭೇಟಿ ನೀಡುತ್ತಿದೆ.

ಕಂಟೈನ್ಮೆಂಟ್ ಪ್ರದೇಶ, ನಿಗಾ, ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಕೂಡ ಪರೀಕ್ಷೆ ಮಾಡಲಿದೆ.ಆಗಸ್ಟ್ 31ರ ಬಳಿಕ ಒಂದೇ ವಾರದಲ್ಲಿ 6 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಕೋವ್ಯಾಕ್ಸ್ ಲಸಿಕೆ: ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೈಜೋಡಿಸಲಿದೆ ಭಾರತ

ಭಾರತದಲ್ಲಿ ಭಾನುವಾರ 90,802 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಕಳೆದ ವಾರದಿಂದ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೇಂದ್ರ ಸರ್ಕಾರದ ಅಧಿಕಾರಿಗಳು ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ.

ಶುಕ್ರವಾರ ಪುಣೆ, ನಾಗ್ಪುರ, ಕೊಲ್ಹಾಪುರ, ಸಾಂಗ್ಲಿ, ನಾಸಿಕ್, ಅಹಮದ್‌ನಗರ, ರಾಯ್‌ಗಢ, ಸೋಲಾಪುರ್, ಕರ್ನಾಟಕದ ಮೈಸೂರು, ದಾವಣಗೆರೆ, ಬಳ್ಳಾರಿ, ಕೊಪ್ಪಳ, ಆಂಧ್ರದ ಚಿತ್ತೂರು, ಪ್ರಕಾಸಂ ಜಿಲ್ಲೆಗಳ ಕುರಿತು ಚರ್ಚೆ ನಡೆಸಲಾಗಿದೆ.

ಜಿಲ್ಲಾ ಸಮೀಕ್ಷೆಯನ್ನು 200 ರಿಂದ 800 ಮಂದಿ ಆಶಾ ಕಾರ್ಯಕರ್ತೆಯರು ಭಾಗಿಯಾಗಲಿದ್ದಾರೆ. ಆಶಾ ಕಾರ್ಯಕರ್ತೆಯರು ಕಂಟೈನ್ಮೆಂಟ್ ಜೋನ್ ಒಳಗೆ ಪ್ರವೇಶಿಸುವಾಗ ಅವರು ಏನನ್ನು ಬಯಸುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಹಾಗೆಯೇ ಅವರಿಗೆ ತರಬೇತಿಯನ್ನು ಕೂಡ ನೀಡಿಲ್ಲ. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಅಗತ್ಯವಿದೆ.

English summary
The Centre has received detailed feedback from officers at the district level, identifying loopholes in the implementation of containment, surveillance, and clinical management strategies for Covid-19 in several states. These lapses, sources said, were among the key reasons for the massive spike in cases in recent weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X