ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊವ್ಯಾಕ್ಸಿನ್ ಕೊರತೆ ಸೃಷ್ಟಿ ಹಿಂದಿನ ಅಸಲಿ ಕಾರಣವೇನು!

|
Google Oneindia Kannada News

ನವದೆಹಲಿ, ಆಗಸ್ಟ್ 3: ಭಾರತದಲ್ಲಿ ಕೊರೊನಾವೈರಸ್ ಹರಡುವಿಕೆ ಕಡಿವಾಣ ಮತ್ತು ಸುರಕ್ಷತೆಗಾಗಿ ಸಮರೋಪಾದಿಯಲ್ಲಿ ಲಸಿಕೆ ವಿತರಣೆ ಅಭಿಯಾನ ನಡೆಸಲಾಗುತ್ತಿದೆ. 2021ರ ಡಿಸೆಂಬರ್ ಅಂತ್ಯದ ವೇಳೆಗೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿಗದಿತ ಗುರಿ ತಲುಪುವುದಕ್ಕಾಗಿ ಲಸಿಕೆ ಉತ್ಪಾದನೆ ವೇಗವನ್ನು ಹೆಚ್ಚಿಸುವುದಕ್ಕೆ ಕಂಪನಿಗಳಿಗೆ ಸೂಚನೆ ನೀಡಿದೆ. ಅದಾಗ್ಯೂ, ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯಲ್ಲಿ ತೀವ್ರ ವಿಳಂಬವಾಗುತ್ತಿದೆ.

WHOನಿಂದ ಪೂರ್ವ ಅರ್ಹತೆ ಪಡೆದ ಭಾರತ್ ಬಯೋಟೆಕ್‌ನ 2 ಲಸಿಕೆWHOನಿಂದ ಪೂರ್ವ ಅರ್ಹತೆ ಪಡೆದ ಭಾರತ್ ಬಯೋಟೆಕ್‌ನ 2 ಲಸಿಕೆ

ಭಾರತ್ ಬಯೋಟೆಕ್ ಕಂಪನಿಯ ಹೊಸದಾಗಿ ಸ್ಥಾಪಿಸಿದ ಬೆಂಗಳೂರಿನ ಬೃಹತ್ ಘಟಕದಲ್ಲಿ ಉತ್ಪಾದಿಸಲಾದ ಮೊದಲ ಬ್ಯಾಚ್ ಲಸಿಕೆಯ ಗುಣಮಟ್ಟವು ಉತ್ತಮವಾಗಿಲ್ಲ ಎಂದು ಕೇಂದ್ರ ಸರ್ಕಾರದ ಕೊವಿಡ್-19 ಕಾರ್ಯಪಡೆಯ ಸದಸ್ಯ ಎನ್ ಕೆ ಅರೋರಾ ತಿಳಿಸಿದ್ದಾರೆ.

Covaxin Vaccine Shortage Because of Quality Issues: Government Vaccine Panel Chief NK Arora

ಎನ್ ಡಿ ಟಿವಿಗೆನೀಡಿರುವ ಸಂದರ್ಶನದಲ್ಲಿ ಅವರು, ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಪ್ರಮಾಣ ತಗ್ಗುವುದಕ್ಕೆ ಕಾರಣವೇನು ಎಂಬುದನ್ನು ತೆರೆದಿಟ್ಟಿದ್ದಾರೆ.

ಕೇಂದ್ರ ಸರ್ಕಾರದ ಲಸಿಕೆ ಸಂಗ್ರಹಕ್ಕೆ ಹಿನ್ನಡೆ

ಕೇಂದ್ರ ಸರ್ಕಾರದ ಲಸಿಕೆ ಸಂಗ್ರಹಕ್ಕೆ ಹಿನ್ನಡೆ

ಭಾರತದಲ್ಲಿ ಅತಿಹೆಚ್ಚು ಬಳಕೆ ಆಗುತ್ತಿರುವ ಎರಡು ಕೊರೊನಾವೈರಸ್ ಲಸಿಕೆಗಳನ್ನು ಅತಿಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಿ ಸಂಗ್ರಹಿಸುವ ಗುರಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಕಿಕೊಂಡಿದೆ. ಆದರೆ ಕೊವ್ಯಾಕ್ಸಿನ್ ಲಸಿಕೆಯ ಘಟಕವೊಂದರಲ್ಲಿ ಉತ್ಪಾದಿಸಲಾದ ಲಸಿಕೆಯ ಗುಣಮಟ್ಟ ದೋಷದಿಂದಾಗಿ ತೀವ್ರ ಹಿನ್ನಡೆ ಉಂಟಾಗಿದೆ. "ರಾಕೆಟ್ ವೇಗದಲ್ಲಿ ಲಸಿಕೆ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ. ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವುದಕ್ಕಾಗಿ ಬೆಂಗಳೂರಿನಲ್ಲಿ ಹೊಸ ಘಟಕವನ್ನು ಆರಂಭಿಸಲಾಗಿತ್ತು. ಹೆಚ್ಚುವರಿಯಾಗಿ ಮೂರು ಖಾಸಗಿ ಕಂಪನಿಗಳ ಸಹಭಾಗಿತ್ವದೊಂದಿಗೆ ಕೆಲಸ ಶುರು ಮಾಡಲಾಗಿದೆ. ಅಂತಿಮವಾಗಿ ಭಾರತ್ ಬಯೋಟೆಕ್ ಕಂಪನಿಯಿಂದ ನಾವು 10 ರಿಂದ 12 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ನಿರೀಕ್ಷಿಸುತ್ತೇವೆ," ಎಂದು ಡಾ. ಎನ್ ಕೆ ಅರೋರಾ ತಿಳಿಸಿದ್ದಾರೆ.

ಮುಂದಿನ ಆರು ವಾರಗಳಲ್ಲಿ ಕೊವ್ಯಾಕ್ಸಿನ್ ಉತ್ಪಾದನೆ ಏರಿಕೆ

ಮುಂದಿನ ಆರು ವಾರಗಳಲ್ಲಿ ಕೊವ್ಯಾಕ್ಸಿನ್ ಉತ್ಪಾದನೆ ಏರಿಕೆ

"ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಘಟಕವೂ ಕೂಡ ಅತಿಹೆಚ್ಚು ಲಸಿಕೆ ಉತ್ಪಾದಿಸುವ ಘಟಕಗಳಲ್ಲಿ ಒಂದಾಗಿದೆ. ಆದರೆ ಇತ್ತೀಚಿಗೆ ಕಳುಹಿಸಿರುವ ಎರಡು ಬ್ಯಾಚ್ ಲಸಿಕೆಗಳಲ್ಲಿ ಉತ್ತಮ ಗುಣಮಟ್ಟವನ್ನು ನೀಡಲು ಸಾಧ್ಯವಾಗಿಲ್ಲ, ಅವುಗಳ ಗುಣಮಟ್ಟವು ಉತ್ತಮವಾಗಿರಲಿಲ್ಲ. ಇದರ ಬೆನ್ನಲ್ಲೇ ಒದಗಿಸಿದ 3 ಮತ್ತು 4ನೇ ಬ್ಯಾಚ್ ಲಸಿಕೆಯ ಗುಣಮಟ್ಟ ಸರಿಯಾಗಿದೆ. ಮುಂದಿನ ನಾಲ್ಕರಿಂದ ಆರು ವಾರಗಳಲ್ಲಿ ಭಾರತ್ ಬಯೋಟೆಕ್ ಕಂಪನಿಯಲ್ಲಿ ಲಸಿಕೆ ಉತ್ಪಾದನೆ ವೇಗ ಮತ್ತಷ್ಟು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ," ಎಂದು ಎನ್ ಕೆ ಅರೋರಾ ಹೇಳಿದ್ದಾರೆ. ಇತ್ತೀಚಿಗೆ ಉತ್ಪಾದನೆ ಆರಂಭಿಸಿರುವ ಬೆಂಗಳೂರು ಘಟಕದ ಎರಡು ಮತ್ತು ಮೂರನೇ ಬ್ಯಾಚ್ ಉತ್ತಮ ಗುಣಮಟ್ಟದ ಭರವಸೆಯನ್ನು ನೀಡಿದ್ದು, ಮುಂದಿನ ಕೆಲವು ವಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸಲಾಗುವುದು ಎಂದು ವಿವರಣೆ ನೀಡಿದ್ದಾರೆ.

ಭಾರತದಲ್ಲಿ ಪ್ರತಿನಿತ್ಯ 1 ಕೋಟಿ ಮಂದಿಗೆ ಲಸಿಕೆ ವಿತರಣೆ

ಭಾರತದಲ್ಲಿ ಪ್ರತಿನಿತ್ಯ 1 ಕೋಟಿ ಮಂದಿಗೆ ಲಸಿಕೆ ವಿತರಣೆ

ದೇಶದಲ್ಲಿ ಅಕ್ಟೋಬರ್ ವೇಳೆಗೆ ಕೊರೊನಾವೈರಸ್ ಮೂರನೇ ಅಲೆಯು ಆರಂಭವಾಗಲಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಸರ್ಕಾರ ಹಾಕಿಕೊಂಡಿರುವ ಗುರಿ ತಲುಪಬೇಕಾಗಿದ್ದಲ್ಲಿ ಪ್ರತಿ ತಿಂಗಳು 30 ಕೋಟಿ ಡೋಸ್ ಲಸಿಕೆ ಅಗತ್ಯವಿದೆ. ಅಂದರೆ ಪ್ರತಿದಿನ 1 ಕೋಟಿ ಫಲಾನುಭವಿಗಳಿಗೆ ಲಸಿಕೆ ವಿತರಿಸಬೇಕಾಗುತ್ತದೆ. ಆದ್ದರಿಂದ ಒಂದು ದಿನದಲ್ಲಿ 1 ಅಥವಾ 2 ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ಭಾರತ್ ಬಯೋಟೆಕ್ ಈ ಪ್ರಮಾಣವನ್ನು 10 ಕೋಟಿ ಡೋಸ್ ಗೆ ಹೆಚ್ಚಿಸಬೇಕಿದೆ. ಈ ಮಟ್ಟದ ಉತ್ಪಾದನೆ ಮಾಡುವುದಕ್ಕೆ ಕಂಪನಿಗೆ ಸಾಧ್ಯವಾಗುತ್ತದೆ. ಮುಂದಿನ ಕೆಲವೇ ಕೆಲವು ವಾರಗಳಲ್ಲಿ ಕಂಪನಿಯ ಕಡೆಯಿಂದ ಅಷ್ಟು ಲಸಿಕೆ ಉತ್ಪಾದನೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ, ಎಂದು ಎನ್ ಕೆ ಅರೋರಾ ಸ್ಪಷ್ಟಪಡಿಸಿದ್ದಾರೆ.

ಡೆಲ್ಟಾ ಪ್ಲಸ್ ರೋಗಾಣುವಿನ ವಿರುದ್ಧ ಕೊವ್ಯಾಕ್ಸಿನ್ ಪ್ರಭಾವ

ಡೆಲ್ಟಾ ಪ್ಲಸ್ ರೋಗಾಣುವಿನ ವಿರುದ್ಧ ಕೊವ್ಯಾಕ್ಸಿನ್ ಪ್ರಭಾವ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಭೀತಿ ಹೆಚ್ಚಿಸಿರುವ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ವಿರುದ್ಧ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯು ಪರಿಣಾಮಕಾರಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧ್ಯಯನದಲ್ಲಿ ತಿಳಿಸಿದೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಸೂಕ್ಷ್ಮಾಣು ಪ್ರಯೋಗಾಲಯ ಸಂಸ್ಥೆಯ ಸಹಭಾಗಿತ್ವದಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಸಂಶೋಧಿಸಿ ಉತ್ಪಾದಿಸಲಾಗುತ್ತಿದೆ. ಈ ಕೊವ್ಯಾಕ್ಸಿನ್ ಲಸಿಕೆಯು ಕೊರೊನಾವೈರಸ್ ಸೋಂಕಿನ ವಿರುದ್ಧ ಶೇ.77.80ರಷ್ಟು ಪರಿಣಾಮಕಾರಿಯಾಗಿದ್ದು, ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಶೇ.65.20ರಷ್ಟು ರಕ್ಷಣೆಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆಯು ತಿಳಿಸಿದೆ.

ಕೊರೊನಾವೈರಸ್ ಲಸಿಕೆ ಪೂರೈಕೆ ಮತ್ತು ಲಭ್ಯತೆ

ಕೊರೊನಾವೈರಸ್ ಲಸಿಕೆ ಪೂರೈಕೆ ಮತ್ತು ಲಭ್ಯತೆ

ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 199 ದಿನಗಳೇ ಕಳೆದಿದ್ದು, ಈವರೆಗೂ 47.78 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಸೋಮವಾರ ರಾತ್ರಿ 7 ಗಂಟೆ ವೇಳೆಗೆ 53,67,190 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 47,78,00,587 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

2021ರ ಆಗಸ್ಟ್ 02ರ ಅಂಕಿ-ಅಂಶಗಳ ಪ್ರಕಾರ, 49,64,98,050 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.
ಕೊರೊನಾವೈರಸ್ ಲಸಿಕೆ ಪೂರೈಕೆ ಮತ್ತು ಲಭ್ಯತೆ ಪಟ್ಟಿ:
* ಪೂರೈಕೆಯಾದ ಲಸಿಕೆ ಪ್ರಮಾಣ - 49,64,98,050
* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 9,84,610
* ಕೊವಿಡ್-19 ಲಸಿಕೆಯ ಲಭ್ಯತೆ - 3,14,34,654

English summary
Covaxin Vaccine Shortage Because of Quality Issues: Government Vaccine Panel Chief NK Arora
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X