• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾದಿಂದ ಸುರಕ್ಷತೆ ಜೊತೆ ಆರೋಗ್ಯಕ್ಕೆ ಭದ್ರತೆ: ಭಾರತ್ ಬಯೋಟೆಕ್ ನೀತಿ

|

ನವದೆಹಲಿ, ಜನವರಿ.16: ದೇಶಾದ್ಯಂತ ಕೊರೊನಾವೈರಸ್ ಲಸಿಕೆ ವಿತರಣೆ ನಡೆಸಲಾಗುತ್ತಿದೆ. ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳನ್ನು ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿಗೆ ನೀಡುವುದರ ಮೂಲಕ ಲಸಿಕೆ ವಿತರಣೆ ಅಭಿಯಾನ ಆರಂಭಿಸಲಾಗಿದೆ.

   ಮಂಡ್ಯ: 8 ಲಸಿಕ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ವಿತರಣೆ, ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ | Oneindia Kannada

   ಕೊವ್ಯಾಕ್ಸಿನ್ ಲಸಿಕೆ ಸ್ವೀಕರಿಸಿದ ನಂತರದಲ್ಲಿ ಲಸಿಕೆ ಪಡೆದವರ ಆರೋಗ್ಯದಲ್ಲಿ ಏರುಪೇರಾದರೆ ಯಾರು ಹೊಣೆ ಎಂಬ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಈಗಾಗಲೇ ಭಾರತ್ ಬಯೋಟೆಕ್ ಸಂಸ್ಥೆಯು 55 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆ ನೀಡುವುದಕ್ಕೆ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ 16.5 ಲಕ್ಷ ಕೊವ್ಯಾಕ್ಸಿನ್ ಲಸಿಕೆಯನ್ನು ಉಚಿತವಾಗಿ ನೀಡುವುದಕ್ಕೆ ಸಂಸ್ಥೆ ಒಪ್ಪಿಕೊಂಡಿದೆ.

   ಕೊವಿಡ್-19 ಲಸಿಕೆ ಬೇಕೇ; ಈ ದಾಖಲೆಗಳೊಂದಿಗೆ ನಿಯಮ ಅನುಸರಿಸಿ!ಕೊವಿಡ್-19 ಲಸಿಕೆ ಬೇಕೇ; ಈ ದಾಖಲೆಗಳೊಂದಿಗೆ ನಿಯಮ ಅನುಸರಿಸಿ!

   ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸಿರುವ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳುವ ಪ್ರತಿಯೊಬ್ಬರಿಂದಲೂ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತಿದೆ. ಕೊವ್ಯಾಕ್ಸಿನ್ ಲಸಿಕೆ ಪಡೆದ ನಂತರದಲ್ಲಿ ಅಂಥವರ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಅವರಿಗೆ ಪರಿಹಾರ ಮತ್ತು ಚಿಕಿತ್ಸೆ ವೆಚ್ಚವನ್ನು ಸಂಪೂರ್ಣವಾಗಿ ಸಂಸ್ಥೆಯು ಭರಿಸಲಿದೆ.

   ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಆರೋಗ್ಯದ ಭದ್ರತೆ

   ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಆರೋಗ್ಯದ ಭದ್ರತೆ

   ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಆರೋಗ್ಯ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಒಪ್ಪಿಗೆ ಪತ್ರವನ್ನು ಸಿದ್ಧಪಡಿಸಲಾಗಿದೆ. ಲಸಿಕೆ ಪಡೆದವರ ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ಅವರಿಗೆ ಸರ್ಕಾರ ನಿಗದಿಪಡಿಸಿರುವ ಅಧಿಕೃತ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಲಾಗುತ್ತದೆ. ಒಂದು ವೇಳೆ ಕೊವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಗಂಭೀರ ಪ್ರಮಾಣದ ಅಡ್ಡ ಪರಿಣಾಮಗಳು ಕಂಡು ಬಂದಲ್ಲಿ ಅವರಿಗೆ ಭಾರತ್ ಬಯೋಟೆಡ್ ಸಂಸ್ಥೆಯಿಂದ ಪರಿಹಾರವನ್ನು ನೀಡಲಾಗುವುದು ಎಂದು ಒಪ್ಪಿಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

   ಕೊವಿಡ್-19 ಲಸಿಕೆ ವಿತರಣೆಯಲ್ಲಿ ಎರಡು ಹಂತ

   ಕೊವಿಡ್-19 ಲಸಿಕೆ ವಿತರಣೆಯಲ್ಲಿ ಎರಡು ಹಂತ

   ಕೊರೊನಾವೈರಸ್ ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಒಬ್ಬರಿಗೆ ಎರಡು ಡೋಸ್ ಲಸಿಕೆ ನೀಡಲಾಗುತ್ತದೆ. 28 ದಿನಗಳಲ್ಲಿ ಎರಡು ಬಾರಿ ಲಸಿಕೆ ನೀಡುವ ಪ್ರಕ್ರಿಯೆ ನಡೆಸಲಾಗುತ್ತದೆ. ಮೊದಲ ಲಸಿಕೆಯ ಡೋಸ್ ನೀಡಿದ ಎರಡು ವಾರಗಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುವ ಪ್ರಮಾಣವನ್ನು ನೋಡಿಕೊಂಡು ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ.

   ಲಸಿಕೆ ಸ್ವೀಕರಿಸುವುದರಿಂದ ಅಡ್ಡ ಪರಿಣಾಗಳಿವೆಯೇ?

   ಲಸಿಕೆ ಸ್ವೀಕರಿಸುವುದರಿಂದ ಅಡ್ಡ ಪರಿಣಾಗಳಿವೆಯೇ?

   ಕೊವಿಡ್-19 ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಆದರೆ ಲಸಿಕೆ ನೀಡಿದ ವೇಳೆಯಲ್ಲಿ ಜ್ವರ, ನೋವು ಸೇರಿದಂತೆ ಇತ್ಯಾದಿ ಸಣ್ಣ ಪ್ರಮಾಣದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಯಾವುದೇ ಲಸಿಕೆ ಪಡೆದಾಗಲೂ ಕೂಡಾ ಇಂಥ ಪರಿಣಾಮಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಒಬ್ಬ ವ್ಯಕ್ತಿಯು ಕೊರೊನಾವೈರಸ್ ರೋಗದ ವಿರುದ್ಧ ಲಸಿಕೆ ಪಡೆದಾಗ, ಅವರಿಗೆ ಸೋಂಕಿನ ಅಪಾಯವೂ ಕಡಿಮೆಯಾಗುತ್ತದೆ. ಆದ್ದರಿಂದ ಅವರಿಂದ ವೈರಸ್ ಅಥವಾ ಬ್ಯಾಕ್ಟೀರಿಯಾ ಇತರರಿಗೆ ಹರಡುವ ಅಪಾಯವು ತೀರಾ ವಿರಳವಾಗಿರುತ್ತದೆ.

   ಕೊರೊನಾ ಲಸಿಕೆ ಪಡೆದವರಿಗೆ ಆರೋಗ್ಯ ವಿಮೆ ಸೌಲಭ್ಯ

   ಕೊರೊನಾ ಲಸಿಕೆ ಪಡೆದವರಿಗೆ ಆರೋಗ್ಯ ವಿಮೆ ಸೌಲಭ್ಯ

   ನಿರ್ದಿಷ್ಟ ಆರೋಗ್ಯ ವಿಮಾ ಪಾಲಿಸಿಗಳು ಮಾತ್ರ ಕೊವಿಡ್ -19 ಲಸಿಕೆಗಳ ವೆಚ್ಚವನ್ನು ಭರಿಸುತ್ತವೆ. ನಿಯಮಿತ ಆರೋಗ್ಯ ವಿಮಾ ಕಂಪನಿಗಳು ಸಾಮಾನ್ಯವಾಗಿ ಆಸ್ಪತ್ರೆಗೆ ದಾಖಲು ಮಾಡಲು ನೀಡಿದ ಪೂರ್ವ ಪ್ರವೇಶ ಮತ್ತು ನಂತರದ ಬಿಡುಗಡೆಯಾದ ನಂತರದ ವೆಚ್ಚವನ್ನು ಒಳಗೊಂಡಿರುತ್ತದೆ. ಒಬ್ಬ ವ್ಯಕ್ತಿಯಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡರೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರೆ ಮತ್ತು ಲಸಿಕೆ ನೀಡಿದರೆ, ಲಸಿಕೆ ವೆಚ್ಚವು ಎಲ್ಲಾ ಆರೋಗ್ಯ ವಿಮಾ ಪಾಲಿಸಿಗಳಲ್ಲಿ ಒಳಗೊಂಡಿರುತ್ತವೆ. ಆದಾಗ್ಯೂ, ಕೊವಿಡ್ ಲಸಿಕೆ ಪಡೆಯಲು ಬಯಸುವ ಎಲ್ಲರೂ ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯವಿರುವುದಿಲ್ಲ. ಅಂತವರಿಗೆ, ಹೊರ ರೋಗಿಗಳ ವಿಭಾಗದಲ್ಲಿ ಲಸಿಕೆ ನೀಡಲಿದ್ದು, ಅದರ ವೆಚ್ಚವನ್ನು ವಿಮಾ ಪಾಲಿಸಿಯಲ್ಲಿ ಭರಿಸಲಾಗುತ್ತದೆ.

   English summary
   Covaxin Recipients Have To Sign Consent Form For Get Compensation If Adverse Events Proved.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X