ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಆರ್ಥಿಕ ನೀತಿಯಾಗಿರುವ ಕಾರಣ ನ್ಯಾಯಾಲಯ ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ’: ನೋಟು ರದ್ದತಿ ಕುರಿತು ಸುಪ್ರೀಂ

|
Google Oneindia Kannada News

ನೋಟು ಅಮಾನ್ಯೀಕರಣದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಮಂಗಳವಾರ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಇದು ಆರ್ಥಿಕ ನೀತಿಯಾಗಿರುವುದರಿಂದ ಕೈಕಟ್ಟಿ ಕೂರುವಂತಿಲ್ಲ ಎಂದು ಹೇಳಿದೆ. ಆರ್ಥಿಕ ನೀತಿಗಳಿಗೆ ಸಂಬಂಧಿಸಿದ ವಿಚಾರಗಳ ಪರಾಮರ್ಶೆಯಲ್ಲಿ ನ್ಯಾಯಾಂಗದ ವ್ಯಾಪ್ತಿ ಸೀಮಿತವಾಗಿದ್ದರೂ, ನ್ಯಾಯಾಲಯವು ಕೈಕಟ್ಟಿ ಕೂರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾತ್ರವಲ್ಲದೆ ಸರ್ಕಾರ ಈ ತೀರ್ಮಾನವನ್ನು ಯಾವ ಬಗೆಯಲ್ಲಿ ಕೈಗೊಂಡಿತ್ತು ಎಂಬುದನ್ನು ಯಾವುದೇ ಸಂದರ್ಭದಲ್ಲಿ ತಾನು ಪರಿಶೀಲಿಸಬಹುದು ಎಂದು ಹೇಳಿದೆ.

2016ರ ನೋಟು ರದ್ದತಿ ತೀರ್ಮಾನ ಪ್ರಶ್ನಿಸಿ ಸಲ್ಲಿಕೆಯಾದ 58 ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ನೇತೃತ್ವದ ಪೀಠವು ನಡೆಸುತ್ತಿದೆ. 2016ರ ನೋಟು ರದ್ದತಿಗೆ ಶಿಫಾರಸು ಮಾಡಿದ ಆರ್‌ಬಿಐ ಮಂಡಳಿಯ ಸದಸ್ಯರ ಕೋರಂ ಬಗ್ಗೆ ವಿವರಗಳನ್ನು ತಿಳಿಯಲು ಸುಪ್ರೀಂ ಕೋರ್ಟ್ ಬಯಸಿದೆ.

 Court cannot sit idly by because it is economic policy: Supreme Court on demonetisation

ಆರ್‌ಬಿಐ ಪರ ವಾದ ಮಂಡಿಸಿದ ಹಿರಿಯ ವಕೀಲ ಜೈದೀಪ್ ಗುಪ್ತಾ ಅವರು ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್, ಬಿಆರ್ ಗವಾಯಿ, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರ ಐವರು ನ್ಯಾಯಮೂರ್ತಿಗಳ ಮುಂದೆ ನೋಟು ರದ್ದತಿ ನೀತಿಯ ಉದ್ದೇಶ ಕಪ್ಪುಹಣ ಮತ್ತು ನಕಲಿ ಕರೆನ್ಸಿಗಳನ್ನು ತಡೆಯುವುದಾಗಿತ್ತು. ಇದರಿಂದ ಒಂದೇ ಬ್ಯಾಂಕ್ ನಷ್ಟ ಅನುಭವಿಸಿದೆ ಎಂದು ವಾದ ಮಂಡಿಸಿದರು.

English summary
Supreme Court hearing 58 petitions challenging the 2016 demonetisation decision, has said that the 'Court cannot sit idly by because it is economic policy'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X