ಬಸ್ ನಿಲ್ದಾಣದಲ್ಲೇ ಯುವಕ-ಯುವತಿ ರೊಮ್ಯಾನ್ಸ್: ವಿಡಿಯೋ ವೈರಲ್
ಕೆಲ ಯುವಕ-ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಮುತ್ತ ಯಾರಿದ್ದಾರೆ ಅಂತಲೂ ನೋಡದೇ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋಗಳು ಬೆಳಕಿಗೆ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಲಿವೆ. ಅದರಲ್ಲೂ ಮೆಟ್ರೋ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಕೆಲ ಪ್ರೇಮಿಗಳು ಅಸಭ್ಯವಾಗಿ ವರ್ತಿಸಿ ಸಹ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
ಮೆಟ್ರೋ ನಿಲ್ದಾಣಗಳಲ್ಲೇ ಕೆಲ ಪ್ರೇಮಿಗಳು ಮೈಮರೆತು ತಬ್ಬಿಕೊಂಡು ಚುಂಬಿಸುತ್ತಾ ಅಸಭ್ಯವಾಗಿ ವರ್ತಿಸಿ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಸಾರ್ವಜನಿಕ ಸ್ಥಳ ಅಂತಲೂ ನೋಡದೇ ಅಲ್ಲೇ ಮೈಮರೆತು ಇಂತಹ ಅಸಭ್ಯ ವರ್ತನೆಗಳನ್ನು ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅಂತಹದ್ದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಸ್ ನಿಲ್ದಾಣದಲ್ಲೇ ಯುವಕ-ಯುವತಿ ಮೈಮರೆತು ಒಬ್ಬರ ಮೇಲೆ ಒಬ್ಬರು ಕೈಹಾಕಿ ಚುಂಬಿಸುವ ಮೂಲಕ ಅಸಭ್ಯ ವರ್ತನೆ ತೋರಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಆದರೆ ಇದು ಯಾವ ಊರು/ಜಿಲ್ಲೆ/ತಲ್ಲೂಕಿನಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಬೇಕಿದೆ. ಅದೇನೇ ಇರ್ಲಿ ಹೀಗೆ ಯಾರೋ ಕೆಲವರು ಮಾಡುವ ಇಂತಹ ಕೆಲಸಗಳು ಇನ್ನುಳಿದರ ಮೇಲೂ ಅನುಮಾನ ಪಡುವಂತಹ ಸ್ಥಿತಿಗೆ ತಂದಿಟ್ಟಿವೆ.
आजकल लोग कितने पागल हो चुके है खुले आम बस स्टैंड पर ही... 🤦♀️🤦♀️
— दिव्या कुमारी (@divyakumaari) September 18, 2025
मोदी जी इन लोगों के लिए oyo सस्ता क्यों नहीं कर देते🤦♀️
pic.twitter.com/GuuURzA9lu
ಬೈಕ್‌ನಲ್ಲೇ ಪ್ರೇಮಿಗಳ ರೊಮ್ಯಾನ್ಸ್: ಈ ಹಿಂದೆಯಷ್ಟೇ ಹುಡುಗ-ಹುಡುಗಿ ನಡುರಸ್ತೆಯಲ್ಲೇ ಚಾಲನೆಯಲ್ಲಿರುವ ಬೈಕ್ ಮೇಲೆ ತಬ್ಬಿಕೊಂಡು ಚುಂಬಿಸುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ಕೆಂಡಕಾರಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಕೆಲ ಪ್ರೇಮಿಗಳು ಹುಚ್ಚಾಟ ಮೆರೆದು ಜನರಿಗೆ ತೊಂದರೆ ಮಾಡಿರುವ ಘಟನೆಗಳು ನಡೆದಿದ್ದು, ಅಂತಹವರಿಗೆ ಪೊಲೀಸರು ಬಿಸಿ ಮುಟ್ಟಿಸುವ ಕೆಲಸವನ್ನು ಮಾಡುತ್ತಲಿದ್ದಾರೆ.
ಆದರೂ ಇಂತಹ ಘಟನೆಗಳು ಕಡಿಮೆ ಆಗುತ್ತಿಲ್ಲ. ಪ್ರೇಮಿಗಳಿಬ್ಬರು ಬೈಕ್ ಮೇಲೆ ಕುಳಿತು ತಬ್ಬಿಕೊಂಡು ಹುಚ್ಚಾಟ ಮೆರೆದು ಇತರ ವಾಹನ ಸವಾರರಿಗೆ ಕಿರಿಕಿರಿ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಉತ್ತರ ಪ್ರದೇಶದಲ್ಲಿ ಪ್ರೇಮಿಗಳಿಬ್ಬರು ಚಾಲನೆಯಲ್ಲಿರುವ ಬೈಕ್ ಮೇಲೆಯೇ ಚುಂಬಿಸುತ್ತಾ, ತಬ್ಬಿಕೊಂಡು ಹೋಗುತ್ತಿರುವ ಘಟನೆ ನಡೆದಿದ್ದು, ಅಲ್ಲಿನ ಪೊಲೀಸರು ಅವರಿಗೆ ಭಾರೀ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಿದ್ದಾರೆ.
ಉತ್ತರ ಪ್ರದೇಶದ ನೋಯ್ದಾದಲ್ಲಿ ಯುವತಿಯೊಬ್ಬಳು ಚಲಿಸುತ್ತಿರುವ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಯುವಕನನ್ನು ತಬ್ಬಿಕೊಂಡು ಮುದ್ದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರೇಮಿಗಳ ಈ ಹುಚ್ಚಾಟದಿಂದ ವಾಹನ ಸವಾರರಿಗೆ ಮುಜುಗರ ಹಾಗೂ ತೊಂದರೆ ಆಗಿದೆ. ಸಾರ್ವಜನಿಕವಾಗಿ ಈ ರೀತಿ ವರ್ತಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹಲವರು ನೋಯ್ದಾ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ ನೋಯ್ದಾ ಸಂಚಾರಿ ಪೊಲೀಸರು, ಕಾನೂನಿನ ಪ್ರಕಾರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಬಂಧಪಟ್ಟ ವಾಹನಕ್ಕೆ 53,500 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಅವರು ತಮ್ಮ ಟ್ವಿಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ನಿಮಗೆ ಮಾನ ಮರ್ಯಾದೆ ಇಲ್ವಾ? ಬೇರೆ ಜಾಗನೇ ಸಿಗಲಿಲ್ವಾ? ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆ ಮಾಡಿಕೊಂಡೇ ನೀವು ಚುಂಬನ ಮಾಡಬೇಕಾ? ಎಂದು ನೆಟ್ಟಿಗರು ಪ್ರಶ್ನಿಸುವ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ, ಇಂತಹವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಪೊಲೀಸರು ಕೂಡ ಮಾಡುತ್ತಲಿದ್ದಾರೆ.











Click it and Unblock the Notifications