ರಾಹುಲ್ ಪಟ್ಟಾಭಿಷೇಕಕ್ಕೆ ದಿನಗಣನೆ: ಯಾರು, ಏನಂದರು?

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 04: ಯಾರು ಎಷ್ಟೇ ಟೀಕೆ ಮಾಡಿದರೂ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗುವುದನ್ನು ತಪ್ಪಿಸುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ದಿಟವಾಗಿದೆ. ಡಿಸೆಂಬರ್ 4 ರಂದು ಅಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ, ಪಕ್ಷದಲ್ಲೇ ಇರುವ ವಿರೋಧಿಗಳ ಎದುರು ಸೆಡ್ಡುಹೊಡೆದು ನಿಂತಿದ್ದಾರೆ!

ಮಹಾತ್ಮಾ ಗಾಂಧಿ ಅಲಂಕರಿಸಿದ ಸ್ಥಾನಕ್ಕೆ ರಾಹುಲ್ ಗಾಂಧಿ

ಕಾಂಗ್ರೆಸ್ ನಲ್ಲಿ ಸಾಕಷ್ಟು ಹಿರಿಯರಿದ್ದರೂ, ರಾಜಕೀಯ ಪರಿಣಿತರು, ಮುತ್ಸದ್ದಿಗಳು, ಅನುಭವಿಗಳಿದ್ದರೂ ಈ ಸ್ಥಾನವನ್ನು ರಾಹುಲ್ ಗಾಂಧಿಯವರಿಗೆ ನೀಡಿದ್ದರ ಹಿಂದೆ ಕೇವಲ, 'ಯುವಕರಿಗೆ ಅವಕಾಶ ನೀಡುವ' ಉದ್ದೇಶವಷ್ಟೇ ಇದೆಯಾ? ಅಥವಾ ಇದು ಕುಟುಂಬ ರಾಜಕಾರಣದ ಭಾಗವಾ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರವಿಲ್ಲ!

ಎಐಸಿಸಿ ಅಧ್ಯಕ್ಷೀಯ ಚುನಾವಣೆ: ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

ಏಕೆಂದರೆ ಈಗಾಗಲೇ ರಾಹುಲ್ ನಾಯಕತ್ವವನ್ನು ಕಾಂಗ್ರೆಸ್ ನ ಘಾಟನುಘಟಿ ನಾಯಕರೇ ಒಪ್ಪಿಕೊಂಡಿದ್ದಾರೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂತಾಗಿ ಎಲ್ಲ ನಾಯಕರೂ ರಾಹುಲ್ ನಾಯಕತ್ವಕ್ಕೆ ಒಕ್ಕೊರಲ ಸಮ್ಮತಿ ನೀಡಿದ್ದಾರೆ.

ಮೋದಿಗೆ ದಿನಕ್ಕೊಂದು ಪ್ರಶ್ನೆ : ರಾಹುಲ್ ಕೇಳಿದ 4 ಪ್ರಶ್ನೆಗಳು!

ಅತ್ತ ಕಡೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುತ್ತಿದ್ದಂತೆಯೇ, ಕಾಂಗ್ರೆಸ್ ನಾಯಕರೆಲ್ಲ #IndiaWithRahulGandhi ಎಂಬ ಹ್ಯಾಶ್ ಟ್ಯಾಗ್ ನಲ್ಲಿ ರಾಹುಲ್ ಅವರನ್ನು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ.

ನಿಮ್ಮ ನೇತೃತ್ವದಲ್ಲಿ ಪಕ್ಷ ಹೊಸ ಹುರುಪು ಪಡೆಯಲಿದೆ

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು. ನಿಮ್ಮ ನೇತೃತ್ವದಲ್ಲಿ ಪಕ್ಷ ಹೊಸ ಹುರುಪನ್ನು ಪಡೆದು, ಉನ್ನತಿಯತ್ತ ತೆರಳಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ರಾಹುಲ್ ಬಿಟ್ಟರೆ ಕಾಂಗ್ರೆಸ್ ಮುನ್ನಡೆಸುವ ತಾಕತ್ತು ಯಾರಿಗಿದೆ?

ಭಾರತದ ಅಭಿವೃದ್ಧಿಗೆ ಅವರ ನಾಯಕತ್ವ ಅತ್ಯಗತ್ಯ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿಯವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಭಾರತದ ಅಭಿವೃದ್ಧಿಗೆ ಮತ್ತು ಭಾರತ ಜಾತ್ಯಾತೀತ, ಪ್ರಗತಿಪರ, ಉದಾರ ರಾಷ್ಟ್ರವಾಗಲು ಅವರ ನಾಯಕತ್ವ ಭಾರತಕ್ಕೆ ಅತ್ಯಗತ್ಯ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗಿದ್ದು ನನ್ನ ಅದೃಷ್ಟ

ಶ್ರೀಮಂತ ಮತ್ತು ಹೆಮ್ಮೆಯ ಇತಿಹಾಸ ಹೊಂದಿರುವ ಕಾಂಗ್ರೆಸ್ ನ ಹೊಸ ಅಧ್ಯಾಯಕ್ಕೆ ನಾನೂ ಸಾಕ್ಷಿಯಾಗಿದ್ದುದು ನನ್ನ ಅದೃಷ್ಟ. ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಉಪಸ್ಥಿತಳಿರುವ ಅವಕಾಶ ಸಿಕ್ಕಿದ್ದು ನನಗೆ ಹೃದಯಸ್ಪರ್ಶಿ ಕ್ಷಣ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಟ್ವೀಟ್ ಮಾಡಿದ್ದಾರೆ.

ಪರಿವರ್ತನಕಾರ ರಾಹುಲ್ ಗಾಂಧಿ

ರಾಹುಲ್ ಗಾಂಧಿಯವರು ಕಾಂಗ್ರೆಸ್ ನಲ್ಲಿ ಹಲವು ಪರಿವರ್ತನೆಗಳನ್ನು ತಂದಿದ್ದಾರೆ. ಅವರಿಲ್ಲದೆ ನನ್ನಂಥ ಮಧ್ಯಮ ವರ್ಗದ ಮತ್ತು ರಾಜಕಿಯ ಹಿನ್ನೆಲೆಯೇ ಇಲ್ಲದ ಸಾಮಾನ್ಯವ್ಯಕ್ತಿಯೊಬ್ಬರು ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮದ ರಾಷ್ಟ್ರೀಯ ಸಂಯೋಜಕರಾಗಲು ಸಾಧ್ಯವೇ ಇರಲಿಲ್ಲ. ಪಕ್ಷದ ಅಧ್ಯಕ್ಷರಾಗುತ್ತಿರುವ ಅವರಿಗೆ ಅಭಿನಂದನೆಗಳು ಎಂದು ಹಸಿಬಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಮಹಾನ್ ಪರಂಪರೆ ಉಳಿಸಲಿ

ರಾಹುಲ್ ಗಾಂಧಿ ಕಾಂಗ್ರೆಸ್ ಗೆ ಅತ್ಯಂತ ಆಪ್ತಸಖರಿದ್ದ ಹಾಗೆ. ಅವರು ಕಾಂಗ್ರೆಸ್ ನ ಮಹಾನ್ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿದ್ದಾರೆ.

ಗಾಂಧಿಯಲ್ಲದವರು ನಾಮಪತ್ರ ಸಲ್ಲಿಸುವಂತಿಲ್ಲವೇ?!

ಕಾಂಗ್ರೆಸ್ ನ ಅಧ್ಯಕ್ಷ ಹುದ್ದೆ ಎಂಬುದು ಅಷ್ಟೇಲ್ಲ ನೀರಸ ಕೆಲಸವೇ? ಏಕೆಂದರೆ ಆ ಕೆಲಸಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸುವ ಆಸಕ್ತಿಯನ್ನೇ ತೋರುತ್ತಿಲ್ಲವಲ್ಲ! ಅಥವಾ ಈ ಹುದ್ದೆಗೆ 'ಗಾಂಧಿ'ಯಲ್ಲದವರು ನಾಮಪತ್ರ ಸಲ್ಲಿಸುವಂತಿಲ್ಲವೇ ಎಂದು ಅಮಿತ್ ಮಾಳವೀಯ ಎಂಬುವವರು ಟ್ವೀಟ್ ಮಾಡಿದ್ದಾರೆ.

ಅಭಿನಂದನೆಗಳು

ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು. ಅವರ ಸಮರ್ಥ ನಾಯಕತ್ವ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಉನ್ನತಿಗೆ ಕೊಂಡೊಯ್ಯಲಿ ಎಂದು ಕರ್ನಾಟಕ ಇಂಧನ ಸಚಿವ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಮಹಾತ್ಮಾ ಗಾಂಧಿ, ಕಸ್ತೂರ್ ಬಾ ಸ್ಫೂರ್ತಿ

ನಮ್ಮ ಐತಿಹಾಸಿಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಮುನ್ನಡೆಸಲು ನಿಮಗೆ ಮಹಾತ್ಮಾ ಗಾಂಧಿ ಮತ್ತು ಕಸ್ತೂರ್ ಬಾ ಅವರು ನಿರಂತರ ಸ್ಫೂರ್ತಿಯಾಗಲಿ ಎಂದು ರಾಜ್ಯಸಭಾ ಸಂಸದ ರಾಜೀವ್ ಗೌಡ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AICC vice president Rahul Gandhi has filed nomination for president post of Congress today(Dec 4th). Many leaders including chief minister of Karnataka Siddaramaiah congratulate Rahul Gandhi, and whish him best.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ