ಬಿಜೆಪಿ VS ಕಾಂಗ್ರೆಸ್: 5 ರಾಜ್ಯದಲ್ಲಿ ಜಯ ಯಾರಿಗೆ? ಸೋಲು ಯಾರಿಗೆ?
ಪಂಚರಾಜ್ಯ ಚುನಾವಣೆ ಫೈಟ್ ಈಗ ಕ್ಲೈಮ್ಯಾಕ್ಸ್ ತಲುಪಿದ್ದು ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಚುನಾವಣೆ ಬಿಸಿ ಇಳಿಯಲಿದೆ. ಆದರೆ ಇದೇ ಸಮಯದಲ್ಲಿ ಈ 5 ರಾಜ್ಯಗಳಲ್ಲಿ ಗೆಲುವು ಯಾರಿಗೆ? ಅನ್ನೋ ಪ್ರಶ್ನೆ ಇದೀಗ ಉದ್ಭವಿಸಿದೆ. ಹಾಗಾದರೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಸೇರಿದಂತೆ ಮಿಜೋರಾಂ ರಾಜ್ಯದಲ್ಲಿ ಯಾವ ಪಕ್ಷ ಗೆಲ್ಲಬಹುದು? ಬಿಜೆಪಿ ಅಥವಾ ಕಾಂಗ್ರೆಸ್?
ಅಖಾಡ ಸಜ್ಜಾಗಿದೆ.. 5 ರಾಜ್ಯಗಳ ವಿಧಾನಸಭೆ ಚುನಾವಣೆ ಗೆಲ್ಲಲು ಮುಹೂರ್ತ ಫಿಕ್ಸ್ ಆಗಿದೆ. ಹೀಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿ ಕೂಡ ಜೋರಾಗಿದೆ. ಅದರಲ್ಲೂ ಇದು ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಅಂತಲೂ ಕರೆಯಲಾಗಿತ್ತು. ಹೀಗಾಗಿ ಪಂಚ ರಾಜ್ಯ ಅಂದರೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆ ಚುನಾವಣೆ ಕುತೂಹಲ ಕೆರಳಿಸಿತ್ತು. ಇನ್ನೆನು ಭಾನುವಾರ ಅಂದರೆ ಡಿಸೆಂಬರ್ 3ಕ್ಕೆ 5 ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಈ ಸಮಯದಲ್ಲೇ ಯಾರು ಗೆಲ್ಲಬಹುದು? ಎಂಬ ಲೆಕ್ಕಾಚಾರ ಜೋರಾಗಿದೆ.

ಕಾಂಗ್ರೆಸ್ ಗೆಲ್ಲುತ್ತಾ? ಬಿಜೆಪಿ ಗೆಲ್ಲುತ್ತಾ?
ಬಿಜೆಪಿ VS ಕಾಂಗ್ರೆಸ್ ನಡುವೆ ಈ ಬಾರಿಯ 5 ರಾಜ್ಯಗಳ ಚುನಾವಣೆ ಜಿದ್ದಾಜಿದ್ದಿಗೆ ವೇದಿಕೆ ಒದಗಿಸಿತ್ತು. ಇದೆ ಕಾರಣಕ್ಕೆ ಗೆದ್ದೇ ಗೆಲ್ಲಬೇಕು ಅಂತ ಒಂದ್ಕಡೆ ಬಿಜೆಪಿ & ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದ ದೆಹಲಿಯ ನಾಯಕರು ತೊಡೆ ತಟ್ಟಿದ್ದರು. ಐದೂ ರಾಜ್ಯದಲ್ಲೂ ಎರಡು ಪಕ್ಷದ ಕೇಂದ್ರದ ನಾಯಕರು ಭರ್ಜರಿ ಕ್ಯಾಂಪೇನ್ ನಡೆಸಿದ್ದರು. ಬಿಜೆಪಿ ಕಡೆ ಈ ಬಾರಿಯ ಚುನಾವಣೆಯಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ, ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ & ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭರ್ಜರಿ ಪ್ರಚಾರ ನಡೆಸಿದ್ದರು.
ಕಾಂಗ್ರೆಸ್ ಕಡೆಯೂ ಭರ್ಜರಿ ಹೋರಾಟ
ಇನ್ನು ಕಾಂಗ್ರೆಸ್ ಪಕ್ಷದ ಪರವಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ & ಬೇರೆ ಬೇರೆ ರಾಜ್ಯಗಳ ಸಿಎಂಗಳು ಬಂದು ಪ್ರಚಾರ ನಡೆಸಿದ್ದರು. ಹೀಗಾಗಿ ಪಂಚರಾಜ್ಯಗಳ ಚುನಾವಣೆ ಭಾರಿ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಹೀಗೆ, ಕಳೆದ ಕೆಲವು ತಿಂಗಳಿಂದಲೂ ಈ ರಾಜ್ಯಗಳು ರಂಗೇರಿದ್ದವು. ಈಗ ಚುನಾವಣೆ ಬಹುತೇಕ ಮುಕ್ತಾಯ ಆಗುತ್ತಿದ್ದು ರಿಸಲ್ಟ್ ಹೊರಬೀಳಲು ಕೌಂಟ್‌ಡೌನ್ ಶುರುವಾಗಿದೆ. ಹಾಗಾದ್ರೆ ಈ ರಾಜ್ಯಗಳಲ್ಲಿ ಎಷ್ಟು ರಾಜ್ಯದ ಗೆಲುವು ಬಿಜೆಪಿಗೆ ಸಿಗುತ್ತೆ? ಕಾಂಗ್ರೆಸ್ ಎಷ್ಟು ರಾಜ್ಯಗಳಲ್ಲಿ ಗೆಲ್ಲುತ್ತೆ?

ಚುನಾವಣಾ ಪೂರ್ವ ಸಮೀಕ್ಷೆ ಹೇಳಿದ್ದೇನು?
ಅಂದಹಾಗೆ ಈಗಾಗಲೇ ನಡೆದಿರುವ, ಚುನಾವಣೆಗೆ ಮೊದಲು ಹೊರ ಬಿದ್ದಿದ್ದ ಸಮೀಕ್ಷೆಗಳ ಪ್ರಕಾರ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮುನ್ಸೂಚನೆ ಸಿಕ್ಕಿದೆಯಂತೆ. ಆದರೆ ರಾಜಸ್ಥಾನ ರಾಜ್ಯದಲ್ಲಿ ಈಗ ಅಧಿಕಾರದಲ್ಲಿ ಇರುವ, ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು ಬಿಜೆಪಿ ರಾಜಸ್ಥಾನ ರಾಜ್ಯದಲ್ಲಿ ಮತ್ತೆ ಸರ್ಕಾರನ ರಚನೆ ಮಾಡಲಿದೆ ಎನ್ನುತ್ತಿವೆ ಸಮೀಕ್ಷೆಗಳು. ಇನ್ನೊಂದು ಕಡೆ ಮಿಜೋರಾಂ ರಾಜ್ಯದಲ್ಲಿ, ಮತ್ತೊಮ್ಮೆ ಚಿತ್ರಾನ್ನ ಬಹುತೇಕ ಗ್ಯಾರಂಟಿ ಎನ್ನಲಾಗುತ್ತಿದೆ.
ನಕ್ಸಲರ ನಾಡಲ್ಲಿ ಯಾರಿಗೆ ಜಯ?
ಹೀಗೆ ಪಂಚರಾಜ್ಯ ಚುನಾವಣೆಯ ಪೈಕಿ ಉಳಿದ 4 ರಾಜ್ಯಗಳ ಚುನಾವಣೆ ಅಷ್ಟೊಂದು ಗಮನ ಸೆಳೆಯುತ್ತಿಲ್ಲ ಎನ್ನಬಹುದು. ಆದ್ರೆ ಛತ್ತೀಸ್‌ಗಢ ಇಡೀ ದೇಶದ ಗಮನ ಸೆಳೆದಿತ್ತು. ಇದಕ್ಕೆಲ್ಲಾ ಕಾರಣ ಛತ್ತೀಸ್‌ಗಢ ರಾಜ್ಯದಲ್ಲಿ ಈಗಿನ ಸ್ಥಿತಿ. ಪದೇ ಪದೆ ನಕ್ಸಲ್ ದಾಳಿಗೆ ತುತ್ತಾಗಿ ಸುದ್ದಿಯಲ್ಲಿ ಇರುವ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಲು ಎಲ್ಲಾ ರೀತಿ ತಂತ್ರ ರೂಪಿಸಿತ್ತು. ಆದ್ರೆ ಮತ್ತೊಂದ್ಕಡೆ ಛತ್ತೀಸ್‌ಗಢದ ಅಖಾಡದಲ್ಲಿ ಅಧಿಕಾರ ಉಳಿಸಿಕೊಳ್ಳಲು ರಣತಂತ್ರ ರೂಪಿಸಿದ್ದ ಕಾಂಗ್ರೆಸ್ ನಾಯಕರು ಸಿಕ್ಕಾಪಟ್ಟೆ ಪ್ರಚಾರ ಮಾಡಿದ್ರು. ಇನ್ನೇನು ಈ ರಾಜ್ಯಗಳ ಎಲೆಕ್ಷನ್ ರಿಸಲ್ಟ್ ಡಿಸೆಂಬರ್ 3 ಕ್ಕೆ ಹೊರಬೀಳಲಿದ್ದು ಅದೇ ದಿನ ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ, ಛತ್ತೀಸ್‌ಗಢ ಹಾಗೂ ಮಿಜೋರಾಂ ರಾಜ್ಯಗಳ ಭವಿಷ್ಯ ನಿರ್ಧಾರವಾಗಲಿದೆ.












Click it and Unblock the Notifications