ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸೋಂಕಿನ ವಿರುದ್ಧ ಲಸಿಕೆಗಳು ಸಂಜೀವಿನಿಯಂತೆ ಕಾರ್ಯ ನಿರ್ವಹಿಸಲಿವೆ"

|
Google Oneindia Kannada News

ನವದೆಹಲಿ, ಜನವರಿ 16: ಕೊರೊನಾ ಲಸಿಕಾ ಅಭಿಯಾನ ಭಾರತದಾದ್ಯಂತ ಶನಿವಾರ ಆರಂಭಗೊಂಡಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿಯಾನಕ್ಕೆ ಚಾಲನೆ ನೀಡಿದರು.

ದೇಶದೆಲ್ಲೆಡೆ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ದೆಹಲಿಯ ಏಮ್ಸ್ ನಲ್ಲಿನ ಸ್ವಚ್ಛತಾ ಸಿಬ್ಬಂದಿಗೆ ಮೊದಲ ಕೊರೊನಾ ಲಸಿಕೆ ನೀಡಿ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, "ಈ ಲಸಿಕೆ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಸಂಜೀವಿನಿ ಆಗಲಿದೆ" ಎಂದು ಭರವಸೆ ನೀಡಿದ್ದಾರೆ.

ಐತಿಹಾಸಿಕ ಕೊರೊನಾ ಲಸಿಕಾ ಅಭಿಯಾನಕ್ಕೆ ಮೋದಿ ಚಾಲನೆಐತಿಹಾಸಿಕ ಕೊರೊನಾ ಲಸಿಕಾ ಅಭಿಯಾನಕ್ಕೆ ಮೋದಿ ಚಾಲನೆ

"ಭಾರತದ ಮಟ್ಟಿಗೆ ಇಂದು ಐತಿಹಾಸಿಕ ದಿನ. ನನಗೆ ತುಂಬಾ ಸಂತಸ ಹಾಗೂ ತೃಪ್ತಿ ತಂದ ಕಾರ್ಯವಿದು. ನರೇಂದ್ರ ಮೋದಿ ನಾಯಕತ್ವದಲ್ಲಿ ಕಳೆದ ಒಂದು ವರ್ಷದಿಂದಲೂ ಕೊರೊನಾ ಸೋಂಕಿನ ವಿರುದ್ಧ ನಾವೆಲ್ಲ ಹೋರಾಡುತ್ತಿದ್ದೇವೆ. ವೈದ್ಯರು, ತಜ್ಞರು ಹಾಗೂ ವಿಜ್ಞಾನಿಗಳ ಸಹಕಾರದೊಂದಿಗೆ ಇಂದು ನಮ್ಮ ಮುಂದೆ ಕೊರೊನಾ ಲಸಿಕೆ ಇದೆ. ಈ ಭಾರತೀಯ ಲಸಿಕೆ ಸಂಜೀವಿನಿಯಾಗಲಿದೆ" ಎಂದು ಸಂತಸ ವಕ್ತಪಡಿಸಿದ್ದಾರೆ.

Recommended Video

ಕೋವಿಶೀಲ್ಡ್ ಲಸಿಕೆ ಪಡೆದ ಸೇರಮ್‌ ಇನ್ಸ್‌ಟಿಟ್ಯೂಟ್‌ CEO ಅದರ್‌ Poonawala | Oneindia Kannada
Coronavirus Vaccines Will Work As Sanjeevini Said Union Health Minister

"ಕೊರೊನಾ ಸೋಂಕಿನ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡಿದ ಎಲ್ಲರಿಗೂ ಶುಭಾಶಯ ತಿಳಿಸುತ್ತೇನೆ. ವಿಜ್ಞಾನಿಗಳು, ವೈದ್ಯರು ತಮ್ಮ ಹೃದಯ ಹಾಗೂ ಆತ್ಮವನ್ನು ಸಮರ್ಪಿಸಿ ಈ ಲಸಿಕೆ ಅಭಿವೃದ್ಧಿಗೆ ಸಹಕರಿಸಿದ್ದಾರೆ" ಎಂದು ಧನ್ಯವಾದ ಸಮರ್ಪಿಸಿದರು.

ವಿಶ್ವದಲ್ಲೇ ಬೃಹತ್ ಲಸಿಕಾ ಕಾರ್ಯಕ್ರಮಕ್ಕೆ ಭಾರತದಲ್ಲಿ ಶನಿವಾರ ಚಾಲನೆ ನೀಡಲಾಗಿದೆ. ಸೆರಂ ಇನ್ ಸ್ಟಿಟ್ಯೂಟ್/ಆಸ್ಟ್ರಾಜೆನೆಕಾದ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ.

English summary
Union health minister Harsh Vardhan said that the vaccines will work as a 'sanjeevani' in the fight against coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X