ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಹಾಗೂ ಬಾವಲಿಗಳ ರೂಪಾಂತರಕ್ಕೂ ಏನಿದು ನಂಟು?

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊವಿಡ್ 19 ರೋಗದ ಕುರಿತು ಮಹತ್ವದ ವರದಿಯೊಂದನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನೀಡಿದೆ.

ಕೊರೊನಾ ವೈರಸ್ ಬಾವಲಿಗಳ ರೂಪಾಂತರದ ಸಮಯದಲ್ಲಿ ಕಂಡುಬರುವ ವೈರಸ್ ಆಗಿದ್ದು ಇದು ಸಾಮಾನ್ಯವಾಗಿ ಸಾವಿರ ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ, ಹಾಗೂ ಮನುಷ್ಯನಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದೆ.

ಚಿಕಿತ್ಸೆ ನೀಡಿದ ವೈದ್ಯರಿಗೇ ಅಂಟಿಕೊಂಡ ಕೊರೊನಾ ವೈರಸ್ ಚಿಕಿತ್ಸೆ ನೀಡಿದ ವೈದ್ಯರಿಗೇ ಅಂಟಿಕೊಂಡ ಕೊರೊನಾ ವೈರಸ್

ಜಾಗತಿಕ ಸಾಂಕ್ರಾಮಿಕ ರೋಗ ಎಂದೇ ಕರೆಸಿಕೊಳ್ಳುತ್ತಿರುವ ಕೊವಿಡ್ 19 ರೋಗಕ್ಕೆ ಬಾವಲಿಗಳಲ್ಲಿ ಕಂಡು ಬರುವ ರೂಪಾಂತರವೇ ಕಾರಣ ಎಂದು ಚೀನಾದ ಸಂಶೋಧನಾ ಅಧ್ಯಯನವೊಂದು ತೋರಿಸಿದೆ ಎಂದು ದೇಶದ ಉನ್ನತ ವೈದ್ಯಕೀಯ ಸಂಸ್ಥೆ ಮಾಹಿತಿ ನೀಡಿದೆ.

ಕೊರೊನಾ ವೈರಸ್ ಬಾವಲಿಗಳಿಂದ, ಪ್ಯಾಂಗೊಲಿನ್ ಅದರಿಂದ ಮನುಷ್ಯರಿಗೆ ಹರಡುತ್ತದೆ ಎಂದು ಕೆಲವು ಅಧ್ಯಯನ ಹೇಳಿದೆ. ಆದರೆ ಭಾರತದಲ್ಲಿ ಅಂತಹ ಯಾವುದೇ ಉದಾಹರಣೆಗಳಿಲ್ಲ.

ನಿಪಾಹ್ ವೈರಸ್ ಬಂದಾಗ ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುವಾಗ ಇಂತಹ ಕೆಲವು ಮಾಹಿತಿ ಲಭ್ಯವಾಗಿತ್ತು.

ಕೊರೊನಾ ಮಹಾಮಾರಿ: ದೇಶದಲ್ಲಿ 12 ಸಾವಿರ ತಲುಪಿದ ಸೋಂಕಿತರ ಸಂಖ್ಯೆ ಕೊರೊನಾ ಮಹಾಮಾರಿ: ದೇಶದಲ್ಲಿ 12 ಸಾವಿರ ತಲುಪಿದ ಸೋಂಕಿತರ ಸಂಖ್ಯೆ

ಎರಡು ರೀತಿಯ ಬಾವಲಿಗಳ ಬಗ್ಗೆ ನಾವು ಅಧ್ಯಯನ ನಡೆಸಿದ್ದೇವೆ ಆದರೆ ಇದ್ಯಾವುದೂ ಕೊರೊನಾ ವೈರಸ್ ಹರಡುವ ಬಾವಲಿಗಳಲ್ಲ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಬಾವಲಿಗಳಿಂದ ನೇರವಾಗಿಯೂ ಮನುಷ್ಯನಿಗೆ ಸೋಂಕು

ಬಾವಲಿಗಳಿಂದ ನೇರವಾಗಿಯೂ ಮನುಷ್ಯನಿಗೆ ಸೋಂಕು

ಬಾವಲಿಗಳಿಂದ ನೇರವಾಗಿಯೂ ಮನುಷ್ಯನಿಗೆ ಸೋಂಕು ಹರಡಿರಬಹುದು ಅಥವಾ
ಬಾವಲಿಗಳಿಂದ ಪ್ಯಾಂಗೊಲಿನ್ ಬಳಿಕ ಮನುಷ್ಯನಿಗೆ ಹರಡಿರಬಹುದು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೇಳಿದೆ.

ಚೀನಾ ಅಧ್ಯಯನ ಏನು ಹೇಳುತ್ತೆ?

ಚೀನಾ ಅಧ್ಯಯನ ಏನು ಹೇಳುತ್ತೆ?

ಚೀನಾ ಅಧ್ಯಯನದ ಪ್ರಕಾರ ಪತ್ತೆಯಾಗಿರುವ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೊರೊನಾವೈರಸ್ ಬಾವಲಿಗಳಲ್ಲಿಯೇ ರೂಪಾಂತರಗೊಂಡಿದೆ. ಆದರೆ ಕೊರೊನಾ ವೈರಸ್ ಬಾವಲಿಗಳಿಂದ ಮನುಷ್ಯನಿಗೆ ನೇರವಾಗಿ ಹರಡುವುದು ಒಂದು ಸಾವಿರ ವರ್ಷಗಳಿಗೊಮ್ಮೆ ಮಾತ್ರ ಎಂದು ಡಾ. ಗಂಗಾಖೇದ್ಕರ್ ತಿಳಿಸಿದ್ದಾರೆ.

ಪ್ಯಾಂಗೋಲಿನ್ ಮಾರಾಟ ಮಾಡಿತ್ತಾ ವುಹಾನ್

ಪ್ಯಾಂಗೋಲಿನ್ ಮಾರಾಟ ಮಾಡಿತ್ತಾ ವುಹಾನ್

ಬಾವಲಿಗಳಿಂದ ಪ್ಯಾಂಗೊಲಿನ್ ಹಾಗೂ ಅದರಿಂದ ಮನುಷ್ಯನಿಗೆ ಕೊರೊನಾ ವೈರಸ್ ಹರಡಿದೆ ಎಂದು ಕೆಲ ಅಧ್ಯಯನಗಳು ಹೇಳಿದ್ದು, ಚೀನಾ ಮಾತ್ರ ಇದನ್ನು ತಳ್ಳಿ ಹಾಕಿದೆ. ಚೀನಾದ ವುಹಾನ್‌ನಲ್ಲಿ ಪ್ಯಾಂಗೊಲಿನ್ ಪ್ರಾಣಿಗಳನ್ನು ಮಾರಾಟ ಮಾಡುತ್ತಿದ್ದರು. ಅಲ್ಲಿಂದಲೇ ಈ ವೈರಸ್ ಉತ್ಪತ್ತಿಯಾಗಿತ್ತು ಎಂದು ಕೆಲವು ಅಧ್ಯಯನ ವರದಿ ಹೇಳಿದೆ.

ವಿಶ್ವದ 20 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು

ವಿಶ್ವದ 20 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು

ವಿಶ್ವದಾದ್ಯಂತ 20 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಭಾರತದಲ್ಲಿ 12380 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. 414 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ ಬಾವಲಿಗಳಿಂದ ಮನುಷ್ಯನಿಗೆ ಹರಡಿರುವ ಯಾವುದೇ ಉದಾಹರಣೆಗಳೂ ಇಲ್ಲ ಎಂದು ಐಸಿಎಂಆರ್ ತಿಳಿಸಿದೆ.

English summary
The event of coronavirus transmitting from bats to humans happens once in a thousand years. When some virus changes species, that is a rare event," Dr Gangakhedkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X