• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊವಿಡ್-19 ತ್ಯಾಜ್ಯ: ಭಾರತದಲ್ಲಿ "ಉರಿಯುವ ಬೆಂಕಿಗೆ ತುಪ್ಪ"!?

|
Google Oneindia Kannada News

ನವದೆಹಲಿ, ಜೂನ್ 13: ನೊವೆಲ್ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ನಡುವೆ ಜೈವಿಕ ವೈದ್ಯಕೀಯ ತ್ಯಾಜ್ಯ(ಬಯೋಮೆಡಿಕಲ್ ವೇಸ್ಟ್) ಉತ್ಪತ್ತಿಯ ನಿರ್ವಹಣೆಯೇ ದೊಡ್ಡ ಸವಾಲಾಗಿ ಕಾಡುತ್ತಿದೆ. ಮಹಾಮಾರಿ ನಿಯಂತ್ರಣಕ್ಕೆ ಒದ್ದಾಡುತ್ತಿರುವ ದೇಶದಲ್ಲಿ ಈ ಜೈವಿಕ ವೈದ್ಯಕೀಯ ತ್ಯಾಜ್ಯವು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತಿದೆ.

ದೇಶದಲ್ಲಿ ಕೊವಿಡ್-19 ಸಂಬಂಧಿತ ಜೈವಿಕ ತ್ಯಾಜ್ಯ ಉತ್ಪಾದನೆಯಲ್ಲಿ ಶೇ.50ರಷ್ಟು ಏರಿಕೆಯಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಉತ್ಪತ್ತಿ ಆಗಿರುವ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಮಾಡುವುದೇ ಕೆಲವು ರಾಜ್ಯಗಳಿಗೆ ತಲೆನೋವಾಗಿದೆ.

ಸರ್ಕಾರದ ಮಾರ್ಗಸೂಚಿ: ಕೊರೊನಾ ರೋಗಿಗಳು ಈ ಔಷಧಿಗಳನ್ನು ತೆಗೆದುಕೊಳ್ಳುವಂತಿಲ್ಲಸರ್ಕಾರದ ಮಾರ್ಗಸೂಚಿ: ಕೊರೊನಾ ರೋಗಿಗಳು ಈ ಔಷಧಿಗಳನ್ನು ತೆಗೆದುಕೊಳ್ಳುವಂತಿಲ್ಲ

ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪಾದನೆ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಅಂಕಿ-ಅಂಶಗಳನ್ನು ನೀಡಿದೆ. ಕಳದ 2021ರ ಮೇ ತಿಂಗಳಿನಲ್ಲಿ ಒಂದು ದಿನಕ್ಕೆ 203 ಟನ್ ಕೊವಿಡ್-19 ಸಂಬಂಧಿತ ಬಯೋಮೆಡಿಕಲ್ ವೇಸ್ಟ್ ಉತ್ಪಾದನೆ ಆಗಿರುವುದು ಗೊತ್ತಾಗಿದೆ.

ಶೇ.50ರಷ್ಟು ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಸುವ ರಾಜ್ಯಗಳು

ಶೇ.50ರಷ್ಟು ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಸುವ ರಾಜ್ಯಗಳು

ಭಾರತದಲ್ಲಿ ಉತ್ಪತ್ತಿ ಆಗುವ ಸಾಮಾನ್ಯ ತ್ಯಾಜ್ಯದ ಶೇ.33ರಷ್ಟು ಕೊರೊನಾವೈರಸ್ ಜೈವಿಕ ವೈದ್ಯಕೀಯ ತ್ಯಾಜ್ಯವೇ ಪತ್ತೆಯಾಗಿದೆ. ದೇಶದಲ್ಲಿ ಉತ್ಪತ್ತಿ ಆಗುವ ಕೊವಿಡ್-19 ಜೈವಿಕ ವೈದ್ಯಕೀಯ ತ್ಯಾಜ್ಯದ ಪೈಕಿ ಶೇ.50ರಷ್ಟು ತ್ಯಾಜ್ಯವು ಐದು ರಾಜ್ಯಗಳಲ್ಲೇ ಉತ್ಪಾದನೆ ಆಗುತ್ತದೆ. ಕೇರಳ, ಗುಜರಾತ್, ಮಹಾರಾಷ್ಟ್ರ, ದೆಹಲಿ ಮತ್ತು ಕರ್ನಾಟಕದಲ್ಲಿ ಅತಿಹೆಚ್ಚು ತ್ಯಾಜ್ಯ ಉತ್ಪಾದನೆ ಆಗುತ್ತಿದೆ.

ಕೊವಿಡ್ ಮೊದಲ ಅಲೆಯಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿ ಆಗಿದ್ದೆಷ್ಟು?

ಕೊವಿಡ್ ಮೊದಲ ಅಲೆಯಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿ ಆಗಿದ್ದೆಷ್ಟು?

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೊದಲ ಅಲೆಯಲ್ಲೂ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿ ಪ್ರಮಾಣ ಹೆಚ್ಚಾಗಿದೆ. ಕೊವಿಡ್-19 ಸೋಂಕು ಹರಡುವಿಕೆ ವೇಗ ಹೆಚ್ಚಾಗಿದ್ದ 2020ರ ಮೇ 10ರಂದು ಒಂದೇ ದಿನ 250 ಟನ್ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿ ಆಗಿತ್ತು. 2020ರ ಮೊದಲ ಅಲೆಯಲ್ಲಿ ಪ್ರತಿನಿತ್ಯ 180 ರಿಂದ 220 ಟನ್ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿ ಆಗುತ್ತಿತ್ತು ಎಂದು ತಿಳಿದು ಬಂದಿದೆ.

2ನೇ ಕೊವಿಡ್-19 ಅಲೆಯಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ

2ನೇ ಕೊವಿಡ್-19 ಅಲೆಯಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ

ಭಾರತದಲ್ಲಿ 2021ರ ಫೆಬ್ರವರಿ ತಿಂಗಳ ಹೊತ್ತಿಗೆ ಕೊರೊನಾವೈರಸ್ ಎರಡನೇ ಅಲೆ ಶುರುವಾಗಿತ್ತು. ಮೇ ತಿಂಗಳ ವೇಳೆಗೆ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿತ್ತು. ಫೆಬ್ರವರಿಯಲ್ಲಿ ದಿನಕ್ಕೆ 53ಟನ್ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾದರೆ, ಮೇ ತಿಂಗಳಿನಲ್ಲಿ ಈ ಪ್ರಮಾಣವು ದಿನಕ್ಕೆ 203 ಟನ್ ವರೆಗೂ ಏರಿಕೆಯಾಗಿತ್ತು.

  Biharನ ಬ್ಯಾಂಕ್ ಒಂದರಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ | Bank Robbery | Oneindia Kannada
  ಭಾರತದಲ್ಲಿ ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿ

  ಭಾರತದಲ್ಲಿ ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿ

  ದೇಶದಲ್ಲಿ ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿ ಪ್ರಮಾಣದಲ್ಲಿ ಈ ಹಿಂದೆಯೂ ಗಣನೀಯ ಏರಿಕೆ ಕಂಡು ಬಂದಿತ್ತು. 2017ರಲ್ಲಿ ದಿನಕ್ಕೆ 559 ಟನ್ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾದರೆ, 2019ರಲ್ಲಿ ಪ್ರತಿನಿತ್ಯ 619 ಟನ್ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿ ಆಗುತ್ತಿದೆ ಎಂಬ ಅಂಕಿ-ಅಂಶಗಳು ಸಿಕ್ಕಿದ್ದವು. ಭಾರತದಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿ ಪ್ರಮಾಣವು ಶೇ.88 ರಿಂದ ಶೇ.92.80ಕ್ಕೆ ಏರಿಕೆಯಾಗಿದೆ.

  English summary
  Coronavirus Second Wave: Those States Facing Biomedical waste Management Problem In India.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X