ಕೊರೊನಾ ಭೀತಿ: ದೇಶದಲ್ಲಿ ಓಲಾ ಕ್ಯಾಬ್ ಶೇರ್ ರೈಡ್ ಸೇವೆ ಸ್ಥಗಿತ

ಬೆಂಗಳೂರು, ಮಾರ್ಚ್ 21: ಓಲಾ ಕ್ಯಾಬ್ ಸಂಸ್ಥೆಯು ಶೇರ ರೈಡ್ ಸೇವೆಯನ್ನು ದೇಶಾದ್ಯಂತ ಸ್ಥಗಿತಗೊಳಿಸಿದೆ.

ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮೈಕ್ರೋ,ಮಿನಿ, ಪ್ರೈಮ್ ಹಾಗೂ ಆಟೋದಲ್ಲಿ ಶೇರಿಂಗ್ ಸೇವೆಯನ್ನು ಸ್ಥಗಿತಗೊಳಿಸಿದೆ.

ಓಲಾ ಶೇರ್ ಆಟೋ ಅಥವಾ ಕ್ಯಾಬ್‌ಗಳಲ್ಲಿ ಸಂಚರಿಸುವುದರಿಂದ ಸೋಮಕು ತಗುಲುವ ಸಂಖ್ಯೆ ಹೆಚ್ಚಾಗಲಿದೆ ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Ola Suspends Shared Rides

ವಿಶ್ವದಾದ್ಯಂತ ಇದುವರೆಗೆ ಕೊರೊನಾ ವೈರಸ್‌ನಿಂದ 10 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ.

ಓಲಾ ಶೇರ್ ಫೀಚರ್ ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಳಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಓಲಾ ಶೇರ್‌ನಿಂದ ಪ್ರಯಾಣಿಕರು ಕಡಿಮೆ ಖರ್ಚಿನಲ್ಲಿ ತಾವು ತಲುಪಬೇಕಾದ ಸ್ಥಳಕ್ಕೆ ಹೋಗುತ್ತಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಈ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ದೇಶದಲ್ಲಿ ಸಾಕಷ್ಟು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಭಾನುವಾರ ಜನತಾ ಕರ್ಫ್ಯೂ ಘೋಷಿಸಿದ್ದು, ಜನರನ್ನು ಮನೆಯಿಂದ ಹೊರಗೆ ಬಾರದಂತೆ ತಿಳಿಸಲಾಗಿದೆ. ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+