ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಎಫೆಕ್ಟ್: ಚಿಕನ್ ಮಾರುಕಟ್ಟೆ ತತ್ತರ

|
Google Oneindia Kannada News

ನವದೆಹಲಿ, ಫೆಬ್ರವರಿ 29: ಕೋಳಿ ಮಾಂಸದಿಂದ ಕೊರೊನಾ ವೈರಸ್ ಹರಡುತ್ತದೆ ಎಂಬ ಸುಳ್ಳು ವದಂತಿಯಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಕೋಳಿ ಮಾಂಸ ಹಾಗೂ ಉತ್ಪನ್ನಗಳ ಮಾರಾಟ ಶೇ 50ರಷ್ಟು ಕುಸಿದಿದೆ ಎಂದು ದೇಶದ ಮುಂಚೂಣಿ ಪೂರೈಕೆದಾರ ಗೋದ್ರೆಜ್ ಆಗ್ರೊವೆಟ್ ಲಿಮಿಟೆಡ್ ತಿಳಿಸಿದೆ.

ಕೊರೊನಾ ವೈರಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯವಾಗಿ ವಾಟ್ಸಾಪ್‌ನಲ್ಲಿ ತಪ್ಪುದಾರಿಗೆ ಎಳೆಯುವ ಅಭಿಪ್ರಾಯಗಳು ಹರಿದಾಡುತ್ತಿವೆ. ಚಿಕನ್ ಮೂಲಕ ಕೊರೊನಾ ವೈರಸ್ ಹರಡುತ್ತದೆ ಎಂಬ ಸುಳ್ಳು ಭಾವನೆಯನ್ನು ಜನರಲ್ಲಿ ಸೃಷ್ಟಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿಎಸ್ ಯಾದವ್ ತಿಳಿಸಿದ್ದಾರೆ.

ಕೋಳಿಯಿಂದ ಕೊರೊನಾ ವೈರಸ್: ಸುಳ್ಳು ಸುದ್ದಿ ಹರಡುವವರ ವಿರುದ್ಧ ದೂರುಕೋಳಿಯಿಂದ ಕೊರೊನಾ ವೈರಸ್: ಸುಳ್ಳು ಸುದ್ದಿ ಹರಡುವವರ ವಿರುದ್ಧ ದೂರು

ಕಳೆದ ನಾಲ್ಕು ವಾರಗಳ ಹಿಂದೆ 75 ಮಿಲಿಯನ್‌ನಷ್ಟಿದ್ದ ಕೋಳಿ ಮಾರಾಟ, ಈಗ ಸುಮಾರು 40 ಮಿಲಿಯನ್‌ಗೆ ಇಳಿದಿದೆ. ವೆಂಕೀಸ್ ಸೇರಿದಂತೆ ದೇಶದ ಇತರೆ ಪೌಲ್ಟ್ರಿ ಫಾರ್ಮ್‌ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿನ ವದಂತಿಯಿಂದ ತೀವ್ರ ನಷ್ಟ ಅನುಭವಿಸುತ್ತಿವೆ. ಈ ಸುಳ್ಳು ವದಂತಿಗಳಿಂದಾಗಿ ಕೋಳಿ, ಮಾಂಸ ಮತ್ತು ಮೊಟ್ಟೆಗಳ ಬೆಲೆ ಶೇ 70ರಷ್ಟು ಕುಸಿದಿದೆ.

ರೈತರಿಗೂ ಆರ್ಥಿಕ ಸಂಕಷ್ಟ

ರೈತರಿಗೂ ಆರ್ಥಿಕ ಸಂಕಷ್ಟ

ಬೆಲೆ ಕುಸಿತದಿಂದ ರೈತರಿಗೂ ಹೊಡೆತ ಬಿದ್ದಿದೆ. ಒಂದು ಕೋಳಿಗೆ ರೈತರಿಗೆ ಕೇವಲ 30-35 ರೂ. ಸಿಗುತ್ತಿದೆ. ಇದಕ್ಕೂ ಮೊದಲು 80-85 ರೂ.ದಷ್ಟು ಸಿಗುತ್ತಿತ್ತು. ಕೋಳಿಗೆ ಹಾಕುವ ಆಹಾರದ ಬೆಲೆ ಹೆಚ್ಚಿರುವುದರಿಂದ ರೈತರು ಉತ್ಪಾದನೆಯ ಪ್ರಮಾಣವನ್ನು ಕಡಿಮೆ ಮಾಡಲು ಆರಂಭಿಸಿದ್ದಾರೆ. ಜತೆಗೆ ಅದಕ್ಕೆ ವಿನಿಯೋಗಿಸುವ ಇತರೆ ವೆಚ್ಚಗಳನ್ನೂ ಕಡಿತಗೊಳಿಸಿದ್ದಾರೆ.

ಕಡಿಮೆಯಾಗದ ಆತಂಕ

ಕಡಿಮೆಯಾಗದ ಆತಂಕ

ಕೊರೊನಾ ವೈರಸ್ ಕೋಳಿಯಿಂದ ಹರಡುವುದಿಲ್ಲ ಎಂದು ಸರ್ಕಾರಗಳು ಸ್ಪಷ್ಟಪಡಿಸಿದ್ದರೂ ಜನರಲ್ಲಿನ ಆತಂಕ ಕಡಿಮೆಯಾಗಿಲ್ಲ. ಹೀಗಾಗಿ ಕಳೆದ ಒಂದು ತಿಂಗಳಿನಿಂದ ಕೋಳಿ, ಕೋಳಿ ಮಾಂಸ ಹಾಗೂ ಮೊಟ್ಟೆಗಳ ಮಾರಾಟದಲ್ಲಿ ಭಾರಿ ಇಳಿಕೆಯಾಗಿದೆ. ಕೊರೊನಾ ವೈರಸ್‌ಗೂ ಕೋಳಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಜನರಿಗೆ ನಿಧಾನವಾಗಿ ಅರ್ಥವಾಗಿ ಚಿಕನ್ ಬಳಕೆಯತ್ತ ಮರಳಿದರೂ ಕೋಳೀಗಳ ಉತ್ಪಾದನೆಯನ್ನು ದಿನ ಬೆಳಗಾಗುವುದರಲ್ಲಿ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಯಾದವ್ ಹೇಳಿದ್ದಾರೆ.

ಕೋಳಿ ಮಾಂಸದಿಂದ ಕೊರೊನಾ ವೈರಸ್? ರಾಜ್ಯ ಸರ್ಕಾರ ಸ್ಪಷ್ಟನೆಕೋಳಿ ಮಾಂಸದಿಂದ ಕೊರೊನಾ ವೈರಸ್? ರಾಜ್ಯ ಸರ್ಕಾರ ಸ್ಪಷ್ಟನೆ

ಚೀನಾದಲ್ಲಿ ಕೋಳಿ ಉದ್ಯಮ ತತ್ತರ

ಚೀನಾದಲ್ಲಿ ಕೋಳಿ ಉದ್ಯಮ ತತ್ತರ

ಚೀನಾದಲ್ಲಿ ಕೊರೊನಾ ವೈರಸ್ ಕಾರಣದಿಂದ ಮಾಂಸ ಮಾರುಕಟ್ಟೆಗೆ ಭಾರಿ ಹೊಡೆತ ಬಿದ್ದಿದೆ. ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಚೀನೀಯರು ಅದು ಹಂದಿಗಳಿಂದ ಹರಡುತ್ತಿರಬಹುದು ಎಂದು ಹಂದಿಗಳನ್ನು ಸಾಮೂಹಿಕವಾಗಿ ಕೊಂದಿದ್ದರು. ಬಳಿಕ ಕೋಳಿಗಳನ್ನೂ ಸಾಯಿಸಿದ್ದರು. ಇದರಿಂದ ಅಲ್ಲಿನ ಸಾವಿರಾರು ಕುಕ್ಕುಟ ಮಾಂಸ ಮಳಿಗೆಗಳು ಮುಚ್ಚಿಹೋಗಿವೆ. ಮಾಂಸದ ಕೊರತೆಯನ್ನು ನೀಗಿಸಲು ಅಮೆರಿಕ ಸೇರಿದಂತೆ ವಿವಿಧೆಡೆಗಳಿಂದ ಜೀವಂತ ಕೋಳಿಗಳನ್ನು ಹೆಚ್ಚು ಆಮದು ಮಾಡಿಕೊಳ್ಳಲು ಆರಂಭಿಸಿದೆ.

9.3 ಬಿಲಿಯನ್ ಕೋಳಿ ಉತ್ಪಾದನೆ

9.3 ಬಿಲಿಯನ್ ಕೋಳಿ ಉತ್ಪಾದನೆ

ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಪ್ರಾಣಿಗಳ ಆಹಾರವನ್ನು ಸಾಗಾಟ ಮಾಡುವುದಕ್ಕೆ ನಿರ್ಬಂಧ ವಿಧಿಸಿದ್ದರಿಂದ ಅಲ್ಲಿನ ರೈತರು ಕನಿಷ್ಠ 100 ಮಿಲಿಯನ್ ಕೋಳಿಗಳನ್ನು ಸಾಯಿಸಿದ್ದರು. ಚೀನಾ ವಾರ್ಷಿಕವಾಗಿ 9.3 ಬಿಲಿಯನ್ ಕೋಳಿ ಉತ್ಪಾದನೆ ಮಾಡುತ್ತಿದ್ದು, ಹತ್ಯೆ ಮಾಡಿರುವ ಕೋಳಿಗಳ ಪ್ರಮಾಣ ಶೇ 1ರಷ್ಟು ಮಾತ್ರ. ಕಳೆದ ವರ್ಷ ಚೀನಾದ ಪೌಲ್ಟ್ರಿ ಉತ್ಪಾದನೆ ಶೇ 12ರಷ್ಟು ಹೆಚ್ಚಾಗಿತ್ತು.

ಕೋಳಿ ಉದ್ಯಮಕ್ಕೆ ಬರೆ ಎಳೆದ ಕೊರೊನಾ: 10 ಕೋಟಿ ರೂ. ನಷ್ಟಕೋಳಿ ಉದ್ಯಮಕ್ಕೆ ಬರೆ ಎಳೆದ ಕೊರೊನಾ: 10 ಕೋಟಿ ರೂ. ನಷ್ಟ

English summary
Indian poultry saled slashed by almost 50% due to a false rumour that can be spread by chickens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X