ಭಾರತದಲ್ಲಿ ಮಾರಕ ಕೊರೊನಾ ವೈರಸ್ 3ನೇ ಹಂತವನ್ನೂ ಮೀರಿತಾ?

ನವದೆಹಲಿ, ಏಪ್ರಿಲ್.10: ಕೊರೊನಾ ವೈರಸ್ ಸೋಂಕು ಒಂದು ಮತ್ತು ಎರಡನೇ ಹಂತವನ್ನು ದಾಟಿದ್ದು ಮೂರನೇ ಹಂತವನ್ನೂ ಪ್ರವೇಶಿಸಿದೆ ಎಂಬ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಸುಳಿವು ನೀಡಿರುವ ಬೆನ್ನಲ್ಲೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಶುಕ್ರವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಕೊರೊನಾ ವೈರಸ್ ಮೂರನೇ ಹಂತವನ್ನು ಪ್ರವೇಶಿಸಿಲ್ಲ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಸಮುದಾಯದ ಹಂತಕ್ಕೆ ತಲುಪಿರುವ ಬಗ್ಗೆ ಪ್ರಜೆಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬದಲಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಲಾವ್ ಅಗರ್ವಾಲ್ ಸಲಹೆ ನೀಡಿದ್ದಾರೆ.

ಒಂದೇ ದಿನ 33 ಮಂದಿ ಸಾವು, 678 ಮಂದಿಗೆ ಕೊರೊನಾ ಸೋಂಕು

ಒಂದೇ ದಿನ 33 ಮಂದಿ ಸಾವು, 678 ಮಂದಿಗೆ ಕೊರೊನಾ ಸೋಂಕು

ಭಾರತದಲ್ಲಿ ಕೊರೊನಾ ವೈರಸ್ ನಿಂದ ಕಳೆದ 24 ಗಂಟೆಗಳಲ್ಲಿ 33 ಮಂದಿ ಪ್ರಾಣ ಬಿಟ್ಟಿದ್ದರೆ 678 ಮಂದಿಗೆ ಸೋಂಕು ತಗಲಿರುವ ಬಗ್ಗೆ ವರದಿಯಾಗಿದೆ. ದೇಶಾದ್ಯಂತ ಇದುವರೆಗೂ 6,412 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, 199 ಮಂದಿ ಮಾರಕ ರೋಗಕ್ಕೆ ಬಲಿಯಾಗಿದ್ದಾರೆ ಎಂದು ಲಾವ್ ಅಗರ್ವಾಲ್ ಮಾಹಿತಿ ನೀಡಿದರು.

ಸಮುದಾಯದ ಮಟ್ಟಕ್ಕೆ ತಲುಪಿಲ್ಲ ಕೊರೊನಾ ಸೋಂಕು

ಸಮುದಾಯದ ಮಟ್ಟಕ್ಕೆ ತಲುಪಿಲ್ಲ ಕೊರೊನಾ ಸೋಂಕು

ಭಾರತದಲ್ಲಿ ಕೊರೊನಾ ವೈರಸ್ ಸೋಂಕು 3ನೇ ಹಂತ ಅಂದರೆ ಸಮುದಾಯದ ಮಟ್ಟಕ್ಕೆ ಇನ್ನೂ ತಲುಪಿಲ್ಲ. ಉದಾಹರಣೆಗೆ ಗುರುವಾರ ದೇಶಾದ್ಯಂತ 16,002 ಜನರ ರಕ್ತ ಮತ್ತು ಗಂಟಲು ಮಾದರಿಯನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ಪೈಕಿ ಶೇ.0.2ರಷ್ಟು ಜನರಲ್ಲಿ ಮಾತ್ರ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.

ದೇಶದಲ್ಲಿ ಹೈಡ್ರೋಕ್ಸಿ ಕ್ಲೊರೊಕಿನ್ ಔಷಧಿ ಲಭ್ಯತೆ

ದೇಶದಲ್ಲಿ ಹೈಡ್ರೋಕ್ಸಿ ಕ್ಲೊರೊಕಿನ್ ಔಷಧಿ ಲಭ್ಯತೆ

ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಹೈಡ್ರೋಕ್ಸಿ ಕ್ಲೊರೊಕಿನ್ ಔಷಧಿ ಬಳಸಲು ವೈದ್ಯರು ಮುಂದಾಗಿದ್ದು ಈ ಔಷಧಿಗೆ ಬೇಡಿಕೆ ಹೆಚ್ಚಾಗಿದೆ. ಭಾರತದಲ್ಲಿ ಹೈಡ್ರೋಕ್ಸಿ ಕ್ಲೊರೊಕಿನ್ ಔಷಧಿಗೆ ಯಾವುದೇ ಕೊರತೆಯಿಲ್ಲ. ಒಂದು ಕೋಟಿಯ ಬದಲು ದೇಶದಲ್ಲಿ 3.28 ಕೋಟಿ ಹೈಡ್ರೋಕ್ಸಿ ಕ್ಲೊರೊಕಿನ್ ಔಷಧಿಯಿದೆ.

ದೇಶದ 67 ಖಾಸಗಿ, 147 ಸರ್ಕಾರಿ ಲ್ಯಾಬ್ ಗಳಲ್ಲಿ ಪರೀಕ್ಷೆ

ದೇಶದ 67 ಖಾಸಗಿ, 147 ಸರ್ಕಾರಿ ಲ್ಯಾಬ್ ಗಳಲ್ಲಿ ಪರೀಕ್ಷೆ

ಜನವರಿಯಲ್ಲಿ ಮೊದಲು ಕೊರೊನಾ ವೈರಸ್ ಸೋಂಕಿತರ ತಪಾಸಣೆಯನ್ನು ಮಾಡಲು ಆರಂಭಿಸಲಾಗಿದ್ದು, ಇಂದು ದೇಶದ 147 ಸರ್ಕಾರಿ ಹಾಗೂ 67 ಖಾಸಗಿ ಲ್ಯಾಬ್ ಗಳಲ್ಲಿ ತಪಾಸಣೆಯನ್ನು ನಡೆಸಲಾಗುತ್ತಿದೆ. ಏಪ್ರಿಲ್.09ರಂದು ಕೇಂದ್ರ ಸರ್ಕಾರ ನೀಡಿರುವ 15 ಸಾವಿರ ಕೋಟಿ ಅನುದಾನದಿಂದ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಹಾಯಕವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+