ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 8 ದಿನಗಳಲ್ಲೇ 5 ಲಕ್ಷ ಜನರಿಗೆ ಕೊವಿಡ್-19 ಪಾಸಿಟಿವ್!

|
Google Oneindia Kannada News

ನವದೆಹಲಿ, ಆಗಸ್ಟ್.23: ಭಾರತದಲ್ಲಿ ಪ್ರತಿನಿತ್ಯ ಸರಿಸುಮಾರು 70,000 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಬೆಳಕಿಗೆ ಬರುತ್ತಿದೆ. ದೇಶದಲ್ಲಿ ಈಗಾಗಲೇ ಕೊವಿಡ್-19 ಸೋಂಕಿತರ ಸಂಖ್ಯೆ 30 ಲಕ್ಷದ ಗಡಿ ದಾಟಿದೆ.

ಕಳೆದ ವಾರವಷ್ದೇ 25 ಲಕ್ಷವಿದ್ದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 8 ದಿನಗಳಲ್ಲೇ 30 ಲಕ್ಷದ ಗಡಿಗೆ ತಲುಪಿದೆ. ಈ ಹಿಂದೆಯೂ ಕೂಡಾ ಕೇವಲ ಎಂಟೇ ಎಂಟು ದಿನಗಳಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆಯು 20 ಲಕ್ಷದಿಂದ 25 ಲಕ್ಷಕ್ಕೆ ಏರಿಕೆಯಾಗಿತ್ತು.

ಭಾರತದಲ್ಲಿ 30 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರುಭಾರತದಲ್ಲಿ 30 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರು

ಭಾರತದಲ್ಲಿ 24 ಗಂಟೆಗಳಲ್ಲೇ ಕೊರೊನಾವೈರಸ್ ಸೋಂಕಿಗೆ 912 ಮಂದಿ ಪ್ರಾಣ ಬಿಟ್ಟಿದ್ದು, 69239 ಜನರಿಗೆ ಮಹಾಮಾರಿ ಅಂಟಿಕೊಂಡಿರುವುದು ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3044941ಕ್ಕೆ ಏರಿಕೆಯಾಗಿದ್ದು, ಈ ಪೈಕಿ 2280567 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ 707668 ಸಕ್ರಿಯ ಪ್ರಕರಣಗಳಿದ್ದು, ಮಹಾಮಾರಿಗೆ ದೇಶದಲ್ಲಿ 56706 ಜನರು ಪ್ರಾಣ ಬಿಟ್ಟಿದ್ದಾರೆ.

India: Coronavirus Numbers Journey From 25 To 30 Lakh Cases Has Takes Eight Days

ಭಾರತದಲ್ಲಿ 5 ಲಕ್ಷ ಪ್ರಕರಣಗಳಿಗೆ ಎಷ್ಟು ದಿನ?:

ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಆರಂಭದಲ್ಲಿ ಒಂದು ಹಂತದವರೆಗೂ ನಿಯಂತ್ರಣದಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು ಮಿತಿ ಮೀರುತ್ತಿದ್ದು, ಪ್ರತಿ 5 ಲಕ್ಷ ಮಂದಿಗೆ ಸೋಂಕು ತಗುಲುವುದಕ್ಕೆಷ್ಟು ದಿನಗಳು ಬೇಕಾಗುತ್ತದೆ ಎನ್ನುವುದರ ಪಟ್ಟಿ ಇಲ್ಲಿದೆ ನೋಡಿ.

ದೇಶದಲ್ಲಿ ಕೊವಿಡ್-19 ಏರಿಕೆ ಕ್ರಮದ ಪಟ್ಟಿ:

ಕೊವಿಡ್-19 ಪ್ರಕರಣಗಳ ಸಂಖ್ಯೆ ದಿನಾಂಕ ದಿನಗಳ ಸಂಖ್ಯೆ (ಹೆಡ್)

1 ಲಕ್ಷ ಮೇ.18 -

1 ರಿಂದ 5 ಲಕ್ಷ ಜೂನ್.26 39

5 ರಿಂದ 10 ಲಕ್ಷ ಜುಲೈ.16 20

10 ರಿಂದ 15 ಲಕ್ಷ ಜುಲೈ.28 12

15 ರಿಂದ 20 ಲಕ್ಷ ಆಗಸ್ಟ್.06 09

20 ರಿಂದ 25 ಲಕ್ಷ ಆಗಸ್ಟ್.14 08

25 ರಿಂದ 30 ಲಕ್ಷ ಆಗಸ್ಟ್.22 08

English summary
India: Coronavirus Numbers Journey From 25 To 30 Lakh Cases Has Takes Eight Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X