ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ರೋಗಿಯ ಶ್ವಾಸಕೋಶ ಮೊದಲಿನಂತಾಗಬಲ್ಲದು:ಎಷ್ಟು ದಿನ ಬೇಕು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 09: ಕೊರೊನಾ ಸೋಂಕು ರೋಗಿಯ ಶ್ವಾಸಕೋಶವನ್ನೇ ಮೊದಲು ಹಾನಿಗೊಳಿಸುತ್ತದೆ. ಕೊವಿಡ್ 19 ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಶ್ವಾಸಕೋಶದಲ್ಲಿ ಚರ್ಮ ಕಂಡು ಬಂದಿದ್ದು, ಅದು ವ್ಯಕ್ತಿಯ ಉಸಿರಾಟದ ಸಾಮರ್ಥ್ಯವನ್ನು ಸೀಮಿತಗೊಳಿಸಿಬಿಡುತ್ತದೆ ಎಂಬುದು ಸಾಬೀತಾಗಿದೆ.

Recommended Video

ವಿಶ್ವದ ಅತಿ ದೊಡ್ಡ Covid Centre ಮುಚ್ಚಲು ಅಸಲಿ ಕಾರಣವೇನು | Oneindia Kannada

ಇದೀಗ ಆಸ್ಟ್ರೇಲಿಯಾ ನಡೆಸಿದ ಅಧ್ಯಯನ ಒಂದರಿಂದ ಕೊವಿಡ್ 19 ರೋಗಿಗಳಿಗೆ ಸಕಾರಾತ್ಮಕ ಭರವಸೆಯನ್ನು ಮೂಡಿಸಿದೆ.ರೋಗಿಯ ಶ್ವಾಸಕೋಶವು ತಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಮರಳಿ ಪಡೆಯಬಹುದೇ ಎಂಬುದರ ಬಗ್ಗೆ ವೈದ್ಯರು ಚರ್ಚೆ ಶುರು ಮಾಡಿದ್ದಾರೆ.

ಪ್ಲಾಸ್ಮಾ ಚಿಕಿತ್ಸೆಯು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿ ಅಲ್ಲಪ್ಲಾಸ್ಮಾ ಚಿಕಿತ್ಸೆಯು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿ ಅಲ್ಲ

ಹೌದ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ರೋಗಿಯ ಅಧ್ಯಯನ ನಡೆಸಿದ್ದು, ರೋಗಿಗಳ ಶ್ವಾಸಕೋಶವು ಮೊದಲಿನಂತಾಗಲು ಅವಕಾಶವಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಮೂರು ತಿಂಗಳ ಸಮಯ ಬೇಕಾಗುತ್ತದೆ.

82 ಗಂಭೀರ ಪ್ರಕರಣಗಳ ಅಧ್ಯಯನ

82 ಗಂಭೀರ ಪ್ರಕರಣಗಳ ಅಧ್ಯಯನ

ಕೊವಿಡ್ 19 ಚೇತರಿಕೆ ಬಳಿಕ ಒಟ್ಟು 82 ಗಂಭೀರ ಪ್ರಕರಣಗಳ ಅಧ್ಯಯನ ಮಾಡಲಾಗಿದೆ. ಕೊವಿಡ್ 19 ರೋಗದಿಂದ ಅಷ್ಟೂ ಮಂದಿ ಗುಣಮುಖರಾಗಿದ್ದಾರೆ.ತೀವ್ರತರವಾದ ಪ್ರಕರಣಗಳನ್ನು ಅಧ್ಯಯನ ಮಾಡಿದ್ದಾರೆ.ಕೊವಿಡ್ 19ನಿಂದ ಬದುಕುಳಿದವರಲ್ಲಿ 6,12,24 ವಾರಗಳ ನಂತರ ಹೃದಯ, ಶ್ವಾಸಕೋಶಗಳ ಹಾನಿ ಕುರಿತು ಮೌಲ್ಯಮಾಪನ ಮಾಡಲಾಗಿದೆ. ಈ ಅಧ್ಯಯನವನ್ನು ಏಪ್ರಿಲ್ ಮತ್ತು ಜೂನ್ ನಡುವೆ ನಡೆಸಲಾಯಿತು. ಐಸಿಯು ಇನ್ನಿತರೆ ತೀವ್ರ ನಿಗಾದಲ್ಲಿರದ ರೋಗಿಗಳು ಬೇಗ ಗುಣಮುಖರಾಗುತ್ತಾರೆ. ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದವರ ಶ್ವಾಸಕೋಶವು ಕೂಡ ಉತ್ತಮಗೊಳ್ಳುತ್ತಿದೆ.

ಸಿಟಿ ಸ್ಕ್ಯಾನ್ ಹೋಲಿಕೆ

ಸಿಟಿ ಸ್ಕ್ಯಾನ್ ಹೋಲಿಕೆ

ಕೊವಿಡ್ 19 ನಿಂದ ಬದುಕುಳಿದವರ ಶ್ವಾಸಕೋಶದ ಸಿಟಿ ಸ್ಕ್ಯಾನ್‌ಗಳ ಹೋಲಿಕೆ, ಆರು ವಾರಗಳ ಕೊನೆಯಲ್ಲಿ ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾದ 12 ವಾರಗಳ ನಂತರ ತೆಗೆದುಕೊಳ್ಳಲಾಗಿದೆ.ಶ್ವಾಸಕೋಶದ ಹಾನಿ ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದು ತಿಳಿದುಬಂದಿದೆ.

ಶ್ವಾಸಕೋಶಗಳ ಹಾನಿ ಕಡಿಮೆಯಾಗಲಿದೆ

ಶ್ವಾಸಕೋಶಗಳ ಹಾನಿ ಕಡಿಮೆಯಾಗಲಿದೆ

ಆರು ವಾರಗಳಷ್ಟೊತ್ತಿಗೆ ಕೊವಿಡ್ 19 ರೋಗಿಗಳಲ್ಲಿ ಶೇ.88ರಷ್ಟು ಜನರಿಗೆ ಶ್ವಾಸಕೋಶದ ಮೇಲೆ ತೀವ್ರ ಹಾನಿಯಾಗಿತ್ತು.12 ವಾರದಷ್ಟೊತ್ತಿಗೆ ಶೇ.56ರಷ್ಟು ಮಂದಿಗೆ ಮಾತ್ರ ತೀವ್ರ ಹಾನಿಯಾಗಿದ್ದು ಗೋಚರಿಸುತ್ತಿತ್ತು.

ಶ್ವಾಸಕೋಶಗಳು ತನ್ನಿಂತಾನೆ ಸರಿಯಾಗುತ್ತವೆ

ಶ್ವಾಸಕೋಶಗಳು ತನ್ನಿಂತಾನೆ ಸರಿಯಾಗುತ್ತವೆ

ಕೊವಿಡ್ 19 ನಿಂದ ಚೇತರಿಸಿಕೊಂಡ ಬಳಿಕ ರೋಗಿಗಳ ಶ್ವಾಸಕೋಶವು ಹಾನಿಗೊಳಗಾಗಿದ್ದರೂ, ಉಸಿರಾಟದ ಕೋಣೆಗಳು ಕಾಲಾನಂತರದಲ್ಲಿ ತಮ್ಮನ್ನು ಸರಿಪಡಿಸುವ ಗಮನಾರ್ಹ ಸಾಮರ್ಥ್ಯವನ್ನು ತೋರಿಸಿವೆ. ಹಾಗೆಯೇ ಚಿಕಿತ್ಸೆ ಕೂಡ ಶ್ವಾಸಕೋಶವನ್ನು ವೇಗವಾಗಿ ಸರಿಪಡಿಸಲು ಸಹಕಾರಿಯಾಗಬಲ್ಲದು.

English summary
Damaged lungs are among the most serious impacts of Covid-19 on a patient. Scars have been found on the lungs of people who have recovered from Covid-19, thus limiting the person’s breathing capacity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X