• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್ ಸ್ಫೋಟ: ವಿಶ್ವ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಭಾರತ

|
Google Oneindia Kannada News

ನವದೆಹಲಿ, ಜೂನ್ 7: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಲಾಕ್‌ಡೌನ್ ಸಡಿಲಿಕೆ ಬಳಿಕವಂತೂ ಸೋಂಕಿತ ಪ್ರಕರಣಗಳು ಒಂದೇ ಬಾರಿಗೆ ಸ್ಫೋಟಗೊಳ್ಳುತ್ತಿವೆ.

ದೇಶದಲ್ಲಿ ಕೊರೊನಾ ಸೋಂಕಿನ ಬಳ್ಳಿ ವೇಗವಾಗಿ ಹಬ್ಬಲು ಶುರುವಾಗಿದೆ. ಲಾಕ್‍ಡೌನ್ ನಿಂದ ರಾಜ್ಯಗಳಿಗೆ ಸೀಮಿತವಾಗಿದ್ದ ಸೋಂಕು, ವಿನಾಯತಿ ಸಿಕ್ಕ ಬಳಿಕ ರಾಜ್ಯಗಳಿಂದ ರಾಜ್ಯಗಳಿಗೆ ಹರಡುವ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ರಾಜಸ್ಥಾನ ಮತ್ತು ಗುಜರಾತ್ ಕೊರೊನಾ ತಾಯಿ ಬೇರಿನಂತೆ ಇತರೆ ರಾಜ್ಯಗಳಿಗೆ ಸೋಂಕು ಹಬ್ಬಿಸುತ್ತಿದೆ. ದೇಶದಲ್ಲಿ ಸದ್ಯ ಇದೇ ರಾಜ್ಯಗಳಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಬಲಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಬಲಿ

ಭಾರತದಲ್ಲಿ ಇನ್ನೂ ಕೊರೊನಾ ಸ್ಫೋಟಗೊಂಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿರುವಾಗಲೇ ಕೆಟ್ಟ ದಾಖಲೆಯನ್ನು ಬರೆಯಲು ಭಾರತ ಮುಂದಾಗಿದೆ. ಹೀಗೆ ದೇಶದಲ್ಲಿ ಗಗನ ಮುಖಿ ಏರುತ್ತಿರುವ ಸೋಂಕು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಪ್ರತಿ ನಿತ್ಯ ಭಾರತದಲ್ಲಿ 8-10 ಸಾವಿರ ಕೇಸ್ ಗಳು ಪತ್ತೆಯಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ ಹೇಳಿದಂತೆ ಒಂದು ವೇಳೆ ಕೊರೊನಾ ಸ್ಫೋಟವಾದ್ರೆ ಭಾರತ ಅಮೆರಿಕಕ್ಕೆ ಪೈಪೋಟಿ ನೀಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಲಾಕ್‍ಡೌನ್ ವಿನಾಯತಿ ಸಾಕಷ್ಟು ಆತಂಕ ಸೃಷ್ಟಿ ಮಾಡಿದೆ. ಸದ್ಯ ಭಾರತ ಅತಿ ಹೆಚ್ಚು ಸೋಂಕಿತರು ಹೊಂದಿರುವ ರಾಷ್ಟ್ರಗಳ ಪೈಕಿ ಆರನೇ ಸ್ಥಾನದಲ್ಲಿದೆ.

ಇಂದು ಬೆಳಗಿನ ವರದಿಗೆ ಬಹುತೇಕ 8-10 ಪ್ರಕರಣಗಳು ಪತ್ತೆಯಾಗಲಿದ್ದು ಸ್ಪೇನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲಿದೆ. ಸ್ಪೇನ್ ನಲ್ಲಿ ಸೋಂಕು ಹತೋಟಿಯಲ್ಲಿದ್ದು ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಅನುಮಾನ. ಹೀಗಾಗಿ ಸ್ಪೇನ್ ಭಾರತಕ್ಕೆ ಪೈಪೋಟಿ ನೀಡುವುದು ಅನುಮಾನ.

ಈಗಾಗಲೇ ಭಾರತ ನೋಡನೋಡುತ್ತಿದ್ದಂತೆ ಇಟಲಿ, ಫ್ರಾನ್ಸ್, ಪೇರು, ಜರ್ಮಿನಿ, ಟರ್ಕಿ ಇರಾನ್, ಮೆಕ್ಸಿಕೊ ಹಿಂದಿಕ್ಕಿ ಮುಂದೆ ಸಾಗುತ್ತಲೇ ಇದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಇನ್ನು ಕೊರೊನಾ ಸ್ಫೋಟವಾಗಿಲ್ಲ ಎಂದು ಹೇಳಿಕ ನೀಡಿದೆ.

ಭಾರತದಲ್ಲಿ ಕೊರೊನಾ ಸೋಂಕಿನ ಸ್ಫೋಟ: ಆರೋಗ್ಯ ಸಂಸ್ಥೆ ಎಚ್ಚರಿಕೆಭಾರತದಲ್ಲಿ ಕೊರೊನಾ ಸೋಂಕಿನ ಸ್ಫೋಟ: ಆರೋಗ್ಯ ಸಂಸ್ಥೆ ಎಚ್ಚರಿಕೆ

ಆದರೆ ಲಾಕ್‍ಡೌನ್ ವಿನಾಯತಿ ನೀಡಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಕೊರೊನಾ ಸ್ಫೋಟವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

ಕೊರೊನಾ ಸೋಂಕಿತರಿರುವ ಟಾಪ್ 5 ದೇಶಗಳು
1. ಅಮೆರಿಕಾ - 18,97,239
2. ಬ್ರೆಜಿಲ್ - 6,14, 941
3. ರಷ್ಯಾ - 4.49.256
4. ಇಂಗ್ಲೆಂಡ್ - 2.84.734
5. ಸ್ಪೇನ್ - 2.40.978
6. ಭಾರತ - 2.36.531

English summary
India's total COVID 19 caseload went past spain's on Saturday to become the fifth largest in the world, on a day when fresh infections in the country crossed 10 thousand for the first time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X