ಲಸಿಕೆ ಕೊರತೆ ತಾತ್ಕಾಲಿಕ ಸಮಸ್ಯೆಯಷ್ಟೇ, ಶೀಘ್ರವೇ ಅಭಿಯಾನ ವೇಗ ಪಡೆಯಲಿದೆ; ಕೋವಿನ್ ಮುಖ್ಯಸ್ಥ

ನವದೆಹಲಿ, ಮೇ 28: ಕೊರೊನಾ ಸೋಂಕಿನ ವಿರುದ್ಧ 18-45ರ ವಯೋಮಾನದವರಿಗೆ ನೀಡಲಾಗುತ್ತಿರುವ ಲಸಿಕಾ ಅಭಿಯಾನ ಶೀಘ್ರದಲ್ಲೇ ವೇಗ ಪಡೆಯಲಿದೆ ಹಾಗೂ ದೇಶದಲ್ಲಿ ಲಸಿಕೆ ಕೊರತೆ ತಾತ್ಕಾಲಿಕ ಸಮಸ್ಯೆಯಷ್ಟೆ ಎಂದು ಕೋವಿನ್ ಮುಖ್ಯಸ್ಥ ಆರ್. ಎಸ್. ಶರ್ಮಾ ಶುಕ್ರವಾರ ಭರವಸೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ಲಸಿಕೆ ಅಭಿಯಾನದ ಸಶಕ್ತ ಸಮಿತಿಯ ಅಧ್ಯಕ್ಷರೂ ಆಗಿರುವ ಅವರು, "ಈ ನಿರ್ದಿಷ್ಟ ವಯೋಮಾನದವರಿಗೆ ಲಸಿಕೆ ನೀಡುವಲ್ಲಿ ಮಾತ್ರ ಕೊರತೆ ಕಂಡುಬಂದಿದೆ. ಲಸಿಕಾ ಅಭಿಯಾನ ಎಲ್ಲರನ್ನೂ ಒಳಗೊಂಡಿದೆ. 45 ವರ್ಷ ಮೇಲ್ಪಟ್ಟ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಸ್ಥಳದಲ್ಲೇ ನೋಂದಣಿಯಾಗಿ ಲಸಿಕೆ ಪಡೆದಿದ್ದಾರೆ. ಲಸಿಕೆ ಅಭಾವ ಎಂಬುದು ತಾತ್ಕಾಲಿಕ ಸಮಸ್ಯೆಯಷ್ಟೆ ಎಂದು ಪುನರುಚ್ಚರಿಸಿದ್ದಾರೆ.

ಕೊರೊನಾ ಲಸಿಕೆಗಳ ಕೊರತೆಯಿಂದಾಗಿ ಲಸಿಕಾ ಅಭಿಯಾನವನ್ನು ಸ್ಥಗಿತಗೊಳಿಸುವುದಾಗಿ ದೆಹಲಿ, ಜಾರ್ಖಂಡ್, ಪಂಜಾಬ್ ಎರಡು ದಿನಗಳ ಹಿಂದೆ ಹೇಳಿದ್ದವು. ಹಲವು ರಾಜ್ಯಗಳಲ್ಲಿಯೂ ಲಸಿಕೆ ಕೊರತೆ ಮಾತುಗಳು ಕೇಳಿಬರುತ್ತಿವೆ.

 Corona Vaccination Will Pick Up Pace Soon Says CoWIN Head

ಶುಕ್ರವಾರ ಲಸಿಕೆ ಅಭಿಯಾನ ಸಂಬಂಧ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ ಮಾಹಿತಿ ನೀಡಿದ್ದು, ರಾಜ್ಯಗಳ ಬಳಿ 18.4 ಮಿಲಿಯನ್ ಕೊರೊನಾ ಲಸಿಕೆಗಳಿವೆ. ಕೇಂದ್ರ, ರಾಜ್ಯಗಳಿಗೆ ಉಚಿತವಾಗಿ 224.6 ಮಿಲಿಯನ್ ಲಸಿಕೆಗಳನ್ನು ನೀಡಿದೆ ಎಂದು ಹೇಳಿಕೊಂಡಿದೆ. ಇದರೊಂದಿಗೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮೂರು ಲಕ್ಷ ಲಸಿಕೆ ಡೋಸ್‌ಗಳನ್ನು ಒದಗಿಸುವುದಾಗಿಯೂ ತಿಳಿಸಿದೆ.

ದೇಶದಲ್ಲಿ ಕೊರೊನಾ ವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 132 ದಿನಗಳಲ್ಲಿ 20,54,51,902 ಫಲಾನುಭವಿಗಳಿಗೆ ಕೊರೊನಾ ವೈರಸ್ ಲಸಿಕೆ ವಿತರಣೆ ಮಾಡಿರುವುದಾಗಿ ಸಚಿವಾಲಯ ಮಾಹಿತಿ ನೀಡಿದೆ. ಗುರುವಾರ ರಾತ್ರಿ 7 ಗಂಟೆ ವೇಳೆಗೆ 26,58,218 ಮಂದಿಗೆ ಕೊರೊನಾ ವೈರಸ್ ಲಸಿಕೆ ನೀಡಲಾಗಿದೆ. ಈ ಪೈಕಿ 24,81,196 ಜನರಿಗೆ ಮೊದಲ ಡೋಸ್ ಹಾಗೂ 1,77,022 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.

ಈ ನಡುವೆ ಡಿಸೆಂಬರ್ 2021ರ ವೇಳೆಗೆ ದೇಶದಲ್ಲಿ 1.08 ಬಿಲಿಯನ್ ಮಂದಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ಘೋಷಣೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+