ಭಾರತದಲ್ಲಿ ಕೊರೊನಾ ಉಲ್ಬಣ: ಒಂದೇ ದಿನ 2,593 ಹೊಸ ಪ್ರಕರಣ
ನವದೆಹಲಿ, ಏಪ್ರಿಲ್ 24: ದೇಶದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 2,593 ಹೊಸ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ಭಾನುವಾರ ಕೋವಿಡ್ -19 ಪ್ರಕರಣಗಳಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ, ಕಳೆದ 24 ಗಂಟೆಗಳಲ್ಲಿ 2,593 ಹೊಸ ಸೋಂಕುಗಳು ವರದಿಯಾಗಿವೆ.
ಭಾರತದಲ್ಲಿ ಸತತ ಐದನೇ ದಿನ 2,000ಕ್ಕೂ ಹೆಚ್ಚು ಕೊರೊನಾವೈರಸ್ ಪ್ರಕರಣಗಳು ದಾಖಲಾಗಿವೆ. ಭಾನುವಾರದ ಸಂಖ್ಯೆಗಳೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15,873ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇಕಡಾ 0.56 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 44 ಸಾವುಗಳು ದಾಖಲಾಗಿದ್ದು, ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,22,193ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,755 ರೋಗಿಗಳು ಚೇತರಿಸಿಕೊಂಡಿದ್ದು ದೇಶಾದ್ಯಂತ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,25,19,479 ರಷ್ಟಿದೆ.
ಭಾರತದಲ್ಲಿ ಮತ್ತೆ ಕೊರೊನಾ ಹೆಚ್ಚಳದಿಂದಾಗಿ ವಿವಿಧ ರಾಜ್ಯಗಳಲ್ಲಿ ಸಡಿಲಗೊಳಿಸಿಲಾಗಿದ್ದ ಮಾಸ್ಕ್ ಹಾಗೂ ಕೊರೊನಾ ನಿಯಮಗಳನ್ನು ಮತ್ತೆ ಕಡ್ಡಾಯಗೊಳಿಸಲಾಗಿದೆ.

ವಿಶ್ವದೆಲ್ಲೆಡೆ ಒಟ್ಟು 508,726,887ಕ್ಕೂ ಅಧಿಕ ಸೋಂಕಿತ ಪ್ರಕರಣಗಳು ವರದಿಯಾಗಿದ್ದು 6,240,856 ಮಂದಿ ಸೋಂಕಿತರು ಸಾವಿನ ಮನೆ ಸೇರಿದ್ದಾರೆ. ಜಾಗತಿಕವಾಗಿ ಈವರೆಗೆ 461,147,867 ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲೇ ಜರ್ಮನಿಯಲ್ಲಿ 1.04 ಲಕ್ಷ, ಫ್ರ್ಯಾನ್ಸ್ 88 ಸಾವಿರ ಹಾಗೂ ದಕ್ಷಿಣ ಕೊರಿಯಾದಲ್ಲಿ 84 ಸಾವಿರ ಸೋಂಕಿತ ಪ್ರಕರಣಗಳನ್ನು ವರದಿ ಮಾಡಿವೆ.

ಕೊವಿಡ್-19 ಬಾಧಿತ ಟಾಪ್ 10 ದೇಶಗಳು-ಯುಎಸ್ಎ: 8,26,28,089 ಭಾರತ: 4,30,54,952 ಬ್ರೆಜಿಲ್: 3,03,38,697 ಫ್ರಾನ್ಸ್: 2,81,64,406 ಜರ್ಮನಿ: 2,40,19,768 ಯುಕೆ: 2,19,33,206 ರಷ್ಯಾ: 1,81,28,691 ದಕ್ಷಿಣ ಕೊರಿಯಾ: 1,68,30,469 ಇಟಲಿ: 1,60,08,181 ಟರ್ಕಿ: 1,50,13,616
ಕೊರೊನಾವೈರಸ್ ಸೋಂಕಿನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು: ಯುಎಸ್ಎ: 10,18,154 ಬ್ರೆಜಿಲ್: 6,62,618 ಭಾರತ: 5,22,149 ರಷ್ಯಾ: 3,74,734 ಮೆಕ್ಸಿಕೋ: 3,24,060 ಪೆರು: 2,12,724 ಯುಕೆ: 1,73,352 ಇಟಲಿ: 1,62,466 ಇಂಡೋನೇಷಿಯಾ: 1,56,040 ಫ್ರಾನ್ಸ್: 1,44,945
ಅತಿಹೆಚ್ಚು ಗುಣಮುಖ ಸಂಖ್ಯೆಯನ್ನು ಹೊಂದಿರುವ ದೇಶಗಳು ಕೊರೊನಾವೈರಸ್ ಸೋಂಕಿನಿಂದ ಅತಿ ಹೆಚ್ಚು ಗುಣಮುಖರಾದವರನ್ನು ಹೊಂದಿರುವ ಟಾಪ್ 10 ದೇಶ: ಯುಎಸ್ಎ: 8,04,02,401 ಭಾರತ: 4,25,17,724 ಬ್ರೆಜಿಲ್: 2,93,53,398 ಫ್ರಾನ್ಸ್: 2,57,50,641 ಜರ್ಮನಿ: 2,11,79,400 ಯುಕೆ: 2,07,14,072 ರಷ್ಯಾ: 1,74,64,120 ಟರ್ಕಿ: 1,48,36,951 ಅರ್ಜೆಂಟೀನಾ: 88,95,999 ಇರಾನ್: 69,60,970












Click it and Unblock the Notifications