ನಿಮ್ಮ ಸಾಧನೆಗೆ ನನ್ನ ಸೆಲ್ಯೂಟ್ : ಅಮಿತ್ ಶಾ ವ್ಯಂಗ್ಯವಾಡಿದ ರಾಹುಲ್!

Recommended Video

      ಅಮಿತ್ ಶಾಗೆ ರಾಹುಲ್ ಗಾಂಧಿ ಸೆಲ್ಯೂಟ್ | Rahul Gandhi salutes Amit Shah | Oneindia Kannada

      ನವದೆಹಲಿ, ಜೂನ್ 22 : ನೋಟುಗಳ ನಿಷೇಧದ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಹಲವು ಆರೋಪಗಳನ್ನು ಮಾಡಿದೆ. ಅಮಿತ್ ಶಾ ನಿರ್ದೇಶಕರಾಗಿದ್ದ ಸಹಕಾರಿ ಬ್ಯಾಂಕ್ ದೇಶದಲ್ಲಿಯೇ ಅತಿಹೆಚ್ಚು ನಿಷೇಧಿತ ನೋಟುಗಳನ್ನು ವಿನಿಮಯ ಮಾಡಿದೆ.

      ಎಐಸಿಸಿ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೀವಾಲ್ ಶುಕ್ರವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಆರ್‌ಟಿಐ ಅಡಿ ಪಡೆದ ದಾಖಲೆಗಳನ್ನು ಬಿಡುಗಡೆ ಮಾಡಿದರು. ಅಮಿತ್ ಶಾ ಮತ್ತು ಅವರ ಪುತ್ರನ ವಿರುದ್ಧ ವಾಗ್ದಾಳಿ ನಡೆಸಿದರು.

      ಮುಂಬೈ ಮೂಲಕ ಆರ್‌ಟಿಐ ಕಾರ್ಯಕರ್ತ ಪಡೆದ ಮಾಹಿತಿಯಂತೆ ಅಮಹದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ 745.59 ಕೋಟಿ ಹಳೆಯ 500 ಮತ್ತು 1000 ರೂ. ನೋಟುಗಳು ಜವಾವಣೆಯಾಗಿದೆ. ಈ ಬ್ಯಾಂಕ್‌ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿದ್ದರು.

      Coop bank collected highest amount of Banned Notes as Amit Shah as director

      ಡಿಸೆಂಬರ್ 10, 2016 ರಿಂದ 14, 2016ರ ತನಕ ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್‌ಗೆ 745.58 ಕೋಟಿ ನಗದು ಜಮಾವಣೆಯಾಗಿದೆ. ದೇಶದಲ್ಲಿ 370 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿವೆ. ಆದರೆ, 5 ದಿನದಲ್ಲಿ ಇಷ್ಟು ಮೊತ್ತದ ಹಣ ಈ ಬ್ಯಾಂಕಿಗೆ ಮಾತ್ರ ಏಕೆ ಜಮಾವಣೆ ಆಯಿತು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

      ಬ್ಯಾಂಕ್‌ನಲ್ಲಿರುವ ಎಲ್ಲರೂ ಆಪ್ತರು : ಅಮಹದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್‌ (ಎಡಿಸಿಬಿ) ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿರುವ ಎಲ್ಲರೂ ಅಮಿತ್ ಶಾ ಆಪ್ತರು. ಬ್ಯಾಂಕ್ ಅಧ್ಯಕ್ಷ ಅಜಯ್ ಪಟೇಲ್ ಬಿಜೆಪಿ ನಾಯಕರಾಗಿದ್ದು, ಅಮಿತ್ ಶಾ ಆಪ್ತರಾಗಿದ್ದಾರೆ.

      ಅಮಿತ್ ಶಾ ಪುತ್ರನ ಕಂಪನಿ ಪಾಲುದಾರಿಕೆಯಲ್ಲಿ ಹೆಸರು ಕೇಳಿಬಂದಿದ್ದ ಯಶ್‌ಪಾಲ್ ಅವರು ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿದ್ದಾರೆ. ನವೆಂಬರ್ 14ರ ಬಳಿಕ ಸಹಕಾರಿ ಬ್ಯಾಂಕ್‌ಗಲು ನಿಷೇಧಿತ ನೋಟುಗಳನ್ನು ಪಡೆಯಬಾರದು ಎಂದು ಸೂಚನೆ ನೀಡಡಲಾಗಿತ್ತು, ಆದರೆ, ಎಡಿಸಿಬಿ ಬ್ಯಾಂಕ್‌ನಲ್ಲಿ ಈ ನಿಯಮ ಪಾಲಿಸಿಲ್ಲ ಎಂಬುದು ಆರೋಪ.

      ರಾಜ್‌ಕೋಟ್ ಜಿಲ್ಲಾ ಸಹಕಾರಿ ಬ್ಯಾಂಕ್ ಸಹ ನೋಟುಗಳ ಜಮಾವಣೆಯಲ್ಲಿ 2ನೇ ಸ್ಥಾನದಲ್ಲಿದೆ. 693.19 ಕೋಟಿ ಹಣ ಬ್ಯಾಂಕ್‌ನಲ್ಲಿ ಜಮಾ ಆಗಿದೆ. ಈ ಬ್ಯಾಂಕ್‌ಗೆ ಜಯಿಸಾಬಿ ವಿಠ್ಠಲಬಾಯಿ ಅವರು ನಿರ್ದೇಶಕರಾಗಿದ್ದು ಅವರು ಗುಜರಾತ್‌ನ ಬಿಜೆಪಿ ಸರ್ಕಾರದಲ್ಲಿ ಸಚಿವರು.

      ಗುಜರಾತ್‌ನ 11 ಸಹಕಾರಿ ಬ್ಯಾಂಕ್‌ಗಳಿಗೆ ಬಿಜೆಪಿ ನಾಯಕರು ನಿರ್ದೇಶಕರಾಗಿದ್ದಾರೆ. ಅವುಗಳಲ್ಲಿ ಈ 2 ಬ್ಯಾಂಕ್‌ಗಳಲ್ಲಿ 3118.51 ಕೋಟಿ ಹಣ ಜಮಾವಣೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+