• search

ರಾಮಮಂದಿರ ನಿರ್ಮಾಣ ನಮ್ಮ ಆಸೆಯಲ್ಲ, ಸಂಕಲ್ಪ: ಭಾಗವತ್

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಛತ್ತರ್ಪುರ್, ಮಾರ್ಚ್ 22: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ನಮ್ಮ ಆಸೆ ಮಾತ್ರವಲ್ಲ, ನಮ್ಮ ಸಂಕಲ್ಪ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

  ಮಧ್ಯಪ್ರದೇಶದ ಛತ್ತರ್ಪುರದಲ್ಲಿ ಮಾ.21 ರಂದು ಮಹಾರಾಜ ಛತ್ರಸಾಲ್ ರ 52 ಅಡಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

  "ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಮಸೀದಿ ಇದ್ದಿದ್ದೇ ಸುಳ್ಳು!"

  ರಾಮಮಂದಿರದ ನಿರ್ಮಾಣವಾಗಬೇಕು ಎಂದು ಬಯಸುವವರು ಶ್ರೀರಾಮನ ಆದರ್ಶಗಳನ್ನು ಪಾಲಿಸಬೇಕು ಎಂದು ಅವರು ಕರೆನೀಡಿದರು.

  Construction of Ram temple is our resolve: Mohan Bhagwat

  ಮಹಾರಾಜ ಛತ್ರಸಾಲ್(4 ಮೇ 1649 - 20 ಡಿಸೆಂಬರ್ 1731) ಮಧ್ಯಕಾಲೀನ ದೊರೆ. ಛತ್ರಪತಿ ಶಿವಾಜಿ ಅವರ ಆದರ್ಶಗಳನ್ನು ಪಾಲಿಸುತ್ತ, ಮೊಘಲರ ವಿರುದ್ಧ ಹೋರಾಡಿದ ಮಹಾನ್ ನಾಯಕ ಎಂಬ ಖ್ಯಾತಿಗಳಿಸಿದ ಛತ್ರಸಾಲ್ ಅವರು ಭಾರತಕ್ಕೆ ನೀದಿದ ಕೊಡುಗೆಯನ್ನು ಈ ಸಮಯದಲ್ಲಿ ಭಾಗವತ್ ನೆನಪಿಸಿಕೊಂಡರು.

  ಮೊಘಲ್ ದೊತರೆಮ ಕ್ರೂರ ನಾಯಕ ಔರಂಗ್ ಜೇಬ್ ವಿರುದ್ಧ ಧೈರ್ಯವಾಗಿ ಹೋರಾಡಿದ ಕೀರ್ತಿಯೂ ಛತ್ರಸಾಲ್ ಗೆ ಸಲ್ಲುತ್ತದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Rashtriya Swayamsevak Sangh(RSS) chief Mohan Bhagwat has said the construction of Ram temple in Ayodhya is their resolve. Bhagwat suggested to the people that those who wanted to build the Ram temple would need to follow in the footsteps of Lord Ram.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more