• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರು ತಿಂಗಳ ಒಟ್ಟಾರೆ ಚುನಾವಣಾ ಸಮೀಕ್ಷೆ: ಏನು ಹೇಳುತ್ತೆ ಮೋದಿ ಭವಿಷ್ಯ?

|
   6 ತಿಂಗಳ ಚುನಾವಣಾ ಸಮೀಕ್ಷೆಯಿಂದ ಮೋದಿ ಭವಿಷ್ಯ ಬಯಲು | Oneindia Kannada

   ಇನ್ನೇನು ಎರಡ್ಮೂರು ತಿಂಗಳಲ್ಲಿ, ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯೆಂದೇ ಬಿಂಬಿತವಾಗಿರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಎದುರಾಗಲಿದೆ. ಜೊತೆಗೆ, ತೆಲಂಗಾಣದಲ್ಲಿ ಅಸೆಂಬ್ಲಿ ವಿಸರ್ಜನೆಯಾಗಿ, ಅಲ್ಲಿ ನೀತಿ ಸಂಹಿತೆ ಜಾರಿಯಾಗಿದೆ.

   ವಿವಿಧ ಮಾಧ್ಯಮಗಳ ಸಹಯೋಗದೊಂದಿಗೆ ಈಗ ಸಾರ್ವತ್ರಿಕ ಚುನಾವಣೆ ನಡೆದರೆ, ಜನಾಭಿಪ್ರಾಯ ಯಾರ ಪರವಾಗಿದೆ ಎನ್ನುವ ಸಮೀಕ್ಷೆಗಳು ಹೊರಬೀಳುತ್ತಿವೆ. ತೈಲಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿಯುತ್ತಿರುವ ಈ ಹೊತ್ತಿನಲ್ಲಿ, ಮೋದಿ ವಿರುದ್ದ ಅಪಸ್ವರ ಹೆಚ್ಚಾಗುತ್ತಿದೆ.

   ಹಾಗಂತ, ಇದರ ಲಾಭ ಕಾಂಗ್ರೆಸ್ ಖಂಡಿತ ಪಡೆಯುತ್ತಿಲ್ಲ, ಬದಲಿಗೆ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಸ್ಥಾನದಲ್ಲಿ ನಿಲ್ಲುವ ಸಾಧ್ಯತೆಯಿದೆ ಎನ್ನುವ ಮಾತು ಸಮೀಕ್ಷೆಯಲ್ಲಿ ವ್ಯಕ್ತವಾಗುತ್ತಿದೆ. ಪ್ರಧಾನಿ ಹುದ್ದೆಗೆ ಯಾರು ಸೂಕ್ತ ಎನ್ನುವುದಕ್ಕೆ ಮೋದಿಯೇ ಸದ್ಯಕ್ಕೆ ಮೇಲುಗೈ ಸಾಧಿಸುತ್ತಿದ್ದಾರೆಯೇ ಹೊರತು, ರಾಹುಲ್ ಆಗಲಿ ಇನ್ನೊಬ್ಬರಾಗಲಿ ಪೈಪೋಟೀಯಲ್ಲೇ ಇಲ್ಲ.

   ಇಂದು ನಾಲ್ಕು ರಾಜ್ಯಗಳ ಚುನಾವಣೆ ದಿನಾಂಕ ಘೋಷಿಸಲಿರುವ ಆಯೋಗ

   ಅಧಿಕೃತವಾಗಿ ಹಾಲೀ ಲೋಕಸಭೆ ವಿಸರ್ಜನೆಗೊಳ್ಳಲು ಇನ್ನೂ ಏಳೆಂಟು ತಿಂಗಳು ಇರುವಾಗ, ಈಗ ಬರುವ ಸಮೀಕ್ಷೆ ಮುಂಬರುವ ಚುನಾವಣೆಯ ಫಲಿತಾಂಶದ ಹತ್ತಿರಕ್ಕೆ ಬರುತ್ತದೋ ಇಲ್ಲವೋ ಎನ್ನುವುದನ್ನು ಸಮಯವೇ ನಿರ್ಧರಿಸಬೇಕು.

   ಇದೇ ವರ್ಷದ ಮೇ ತಿಂಗಳ ಆದಿಯಿಂದ, ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ, ಅಂದರೆ ಸುಮಾರು ಆರು ತಿಂಗಳಲ್ಲಿ ಪ್ರಕಟವಾದ ಜನಮತ ಸಂಗ್ರಹ, ಮೂಡ್ ಆಫ್ ದಿ ನೇಶನ್ ಪ್ರಕಾರ, ಸಾರ್ವಜನಿಕರು ಯಾವ ಪಕ್ಷದ ಪರವಾಗಿ, ಯಾರು ಪ್ರಧಾನಿಯಾದರೆ ಸೂಕ್ತ ಎನ್ನುವ ನಿಲುವನ್ನು ಹೊಂದಿದ್ದಾರೆ ಎನ್ನುವ ಒಟ್ಟಾರೆ ಸಂಗ್ರಹವನ್ನು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

   ರಾಜಸ್ಥಾನದ ಅಸೆಂಬ್ಲಿಗೆ ಚುನಾವಣೆ ನಡೆದರೆ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ

   ರಾಜಸ್ಥಾನದ ಅಸೆಂಬ್ಲಿಗೆ ಚುನಾವಣೆ ನಡೆದರೆ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ

   ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 4 ವರ್ಷವಾದ ಹಿನ್ನೆಲೆಯಲ್ಲಿ ದೇಶದಲ್ಲಿ ಮತದಾರರ ಒಲವು ಯಾವ ಪಕ್ಷದ ಕಡೆಗಿದೆ ಎಂಬುದನ್ನು ಎಬಿಪಿ ನ್ಯೂಸ್ ಹಾಗೂ ಸಿಎಸ್ ಡಿಎಸ್ ಸಂಸ್ಥೆ ಸಮೀಕ್ಷೆ ನಡೆಸಿ ಫಲಿತಾಂಶ ಹೊರ ಹಾಕಿದೆ.ಇದರಂತೆ ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಇದ್ದು, ಮತದಾರರು ಕಾಂಗ್ರೆಸ್ ನತ್ತ ಒಲವು ತೋರಿದ್ದಾರೆ. Mood of the Nation ಸಮೀಕ್ಷೆಯಂತೆ ಕಾಂಗ್ರೆಸ್ಸಿಗೆ ಶೇ 44ರಷ್ಟು ಮತಗಳು ಸಿಗಲಿದ್ದು, ಭಾರತೀಯ ಜನತಾ ಪಕ್ಷಕ್ಕೆ ಶೇ 39ರಷ್ಟು ಮತಗಳು ಮಾತ್ರ ಲಭಿಸಲಿದೆ. ಈ ಸಂದರ್ಭದಲ್ಲಿ 200 ಸ್ಥಾನಗಳುಳ್ಳ ರಾಜಸ್ಥಾನದ ಅಸೆಂಬ್ಲಿಗೆ ಚುನಾವಣೆ ನಡೆದರೆ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಮೇ ತಿಂಗಳಲ್ಲಿ ನಡೆದ ಸಮೀಕ್ಷೆ.

   ಸಮೀಕ್ಷೆ: ದಕ್ಷಿಣ ರಾಜ್ಯಗಳಲ್ಲಿ ಎನ್ ಡಿಎ ನೆಲೆಯಿಲ್ಲ ಎಂದು ಸಾಬೀತು

   ಈ ಕ್ಷಣ ಬಿಹಾರದಲ್ಲಿ ಚುನಾವಣೆ ನಡೆದರೆ ಬಿಜೆಪಿಗೆ ಮುನ್ನಡೆ

   ಈ ಕ್ಷಣ ಬಿಹಾರದಲ್ಲಿ ಚುನಾವಣೆ ನಡೆದರೆ ಬಿಜೆಪಿಗೆ ಮುನ್ನಡೆ

   ಈ ಕ್ಷಣ ಬಿಹಾರದಲ್ಲಿ ಚುನಾವಣೆ ನಡೆದರೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟ ಅದ್ಭುತ ಸಾಧನೆ ತೋರಲಿದೆ ಎಂದು ಎಬಿಪಿ ನ್ಯೂಸ್ ಮತ್ತು ಸಿಎಸ್‌ಡಿಎಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಹೇಳಿದೆ. ಎನ್‌ಡಿಎ ಸರಕಾರವನ್ನು ಬೆಂಬಲಿಸುತ್ತಿರುವ ಜೆಡಿಯು ನಾಯಕ ನಿತಿಶ್ ಕುಮಾರ್ ನೇತೃತ್ವದಲ್ಲಿ ಜೆಡಿಯು-ಬಿಜೆಪಿ ಕಳೆದ ಚುನಾವಣೆಗಿಂತ ಉತ್ತಮ ಸಾಧನೆ ತೋರಲಿದ್ದು, ಶೇ.60ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿವೆ. ಇದು ಕೂಡಾ ಮೇ ತಿಂಗಳಲ್ಲಿ ನಡೆದ ಸಮೀಕ್ಷೆ.

   ದೇಶದಲ್ಲಿ ಮೋದಿ ಅಲೆ ಇದ್ದಂತಿಲ್ಲ, ರಾಹುಲ್ ಪರ ಅಲೆ ಇಲ್ಲವೇ ಇಲ್ಲ!

   ಪೂರ್ವ ಭಾರತದಲ್ಲಿ ಎನ್ ಡಿಎ ಜಯಭೇರಿ

   ಪೂರ್ವ ಭಾರತದಲ್ಲಿ ಎನ್ ಡಿಎ ಜಯಭೇರಿ

   ಎಬಿಪಿಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆ 2018, ಮೇ ತಿಂಗಳಲ್ಲಿ ನಡೆಸಲಾದ ಸಮೀಕ್ಷೆ: ಈ ಸಮಯಕ್ಕೆ ಲೋಕಸಭೆ ಚುನಾವಣೆ ನಡೆದರೆ, ಪೂರ್ವ ಭಾರತದಲ್ಲಿ ಎನ್ ಡಿಎ ಜಯಭೇರಿ ಬಾರಿಸಲಿದ್ದು, ಕಳೆದ ಚುನಾವಣೆಗಿಂತ ಉತ್ತಮ ಫಲಿತಾಂಶ ತರಲಿದೆ. ಸೀಟುಗಳ ಲೆಕ್ಕದಲ್ಲಿ 142 ಸ್ಥಾನಗಳ ಪೈಕಿ ಎನ್ ಡಿಎ ಗೆ 86 ರಿಂದ 94, ಯುಪಿ ಎಗೆ 22 ರಿಂದ 26, ಇತರೆ 26 ರಿಂದ 30 ಸ್ಥಾನಗಳು ಸಿಗುವ ನಿರೀಕ್ಷೆಯಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎಗೆ 58, ಯುಪಿಎಗೆ 21 ಹಾಗೂ ಇತರರಿಗೆ 63 ಸ್ಥಾನಗಳು ಸಿಕ್ಕಿತ್ತು.

   ಶಿವಸೇನೆ ದೋಸ್ತಿ ಹೆಚ್ಚು ಲಾಭ, ಸ್ವತಂತ್ರ ಸ್ಪರ್ಧೆಯೂ ಬಿಜೆಪಿಗೆ ಲಾಭ

   ಬಿಜೆಪಿ ಸರಕಾರವಿರುವ ಮಹಾರಾಷ್ಟ್ರ

   ಬಿಜೆಪಿ ಸರಕಾರವಿರುವ ಮಹಾರಾಷ್ಟ್ರ

   ಬಿಜೆಪಿ ಸರಕಾರವಿರುವ ಮಹಾರಾಷ್ಟ್ರದಲ್ಲಿ, ಹಲವಾರು ಭಿನ್ನಾಭಿಪ್ರಾಯಗಳಿದ್ದರೂ ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆ ಮೈತ್ರಿಕೂಟ ಈಗಲೂ ಮುನ್ನಗ್ಗಲಿದೆ. ಆದರೆ, ತನ್ನ ಮತಸಂಖ್ಯೆಯನ್ನು ಗಣನೀಯವಾಗಿ ಏರಿಸಿಕೊಂಡಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಭಾರೀ ಟಕ್ಕರ್ ನೀಡಲಿದೆ ಎಂದು ಮೇ ತಿಂಗಳಲ್ಲಿ ನಡೆದ ಎಬಿಪಿ ಸಮೀಕ್ಷೆ ಹೇಳಿದೆ. 2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಎನ್‌ಡಿಎ ಮಹಾರಾಷ್ಟ್ರದಲ್ಲಿ ಶೇ.51ರಷ್ಟು ಮತ ಗಳಿಸಿದ್ದರೆ, ಇದೀಗ ಅದರ ಮತಗಳಿಕೆ ಶೇಕಡಾ 3ರಷ್ಟು ಕಡಿಮೆಯಾಗಲಿದೆ. ಆದರೆ, ಕಳೆದ ಬಾರಿ ಶೇ.35ರಷ್ಟು ಮಾತ್ರ ಮತ ಪಡೆದಿದ್ದ ಯುಪಿಎ ಈಬಾರಿ ಶೇ.40ರಷ್ಟು ಮತ ಪಡೆದು ಬಿಜೆಪಿ ಮತ್ತು ಶಿವಸೇನೆಗೆ ಬೆವರಿಳಿಸಲಿದೆ - ಮೇ ತಿಂಗಳಲ್ಲಿ ನಡೆದ ಸಮೀಕ್ಷೆ.

   ಎಬಿಪಿ ನ್ಯೂಸ್ ಸಮೀಕ್ಷೆ : ಮತ್ತೆ ಕೇಂದ್ರದಲ್ಲಿ ಮೋದಿ ಸರ್ಕಾರ್

   ಪಶ್ಚಿಮ-ಕೇಂದ್ರ ಭಾರತದಲ್ಲಿ ಎನ್ ಡಿಎ ಜಯಭೇರಿ

   ಪಶ್ಚಿಮ-ಕೇಂದ್ರ ಭಾರತದಲ್ಲಿ ಎನ್ ಡಿಎ ಜಯಭೇರಿ

   ಎಬಿಪಿಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆ 2018 (ಮೇ ತಿಂಗಳ ಸಮೀಕ್ಷೆ): ಈ ಸಮಯಕ್ಕೆ ಲೋಕಸಭೆ ಚುನಾವಣೆ ನಡೆದರೆ, ಪಶ್ಚಿಮ-ಕೇಂದ್ರ ಭಾರತದಲ್ಲಿ ಎನ್ ಡಿಎ ಜಯಭೇರಿ ಬಾರಿಸಲಿದ್ದು, ಕಳೆದ ಚುನಾವಣೆಗಿಂತ ಸ್ವಲ್ಪಮಟ್ಟಿನ ಪ್ರಗತಿ ಸಾಧಿಸಲಿದೆ. 543 ಲೋಕಸಭಾ ಸ್ಥಾನಗಳ ಪೈಕಿ ಪಶ್ಚಿಮ ಹಾಗೂ ಕೇಂದ್ರ ಭಾರತದಲ್ಲಿರುವ 118 ಲೋಕಸಭಾ ಸ್ಥಾನಗಳಿದ್ದು, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲಯನ್ಸ್ (ಎನ್ ಡಿಎ)ಗೆ 70 ರಿಂದ 78 ಸ್ಥಾನಗಳು ಸಿಕ್ಕರೆ, ಯುಪಿಎಗೆ 41 ರಿಂದ 47, ಇತರೆ 2.

   ಉತ್ತರ ಭಾರತದಲ್ಲಿ ಎನ್ ಡಿಎ ಜಯಭೇರಿ

   ಉತ್ತರ ಭಾರತದಲ್ಲಿ ಎನ್ ಡಿಎ ಜಯಭೇರಿ

   ಎಬಿಪಿಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆ 2018 (ಮೇ ತಿಂಗಳ ಸಮೀಕ್ಷೆ): ಈ ಸಮಯಕ್ಕೆ ಲೋಕಸಭೆ ಚುನಾವಣೆ ನಡೆದರೆ, ಉತ್ತರ ಭಾರತದಲ್ಲಿ ಎನ್ ಡಿಎ ಜಯಭೇರಿ ಬಾರಿಸಲಿದ್ದು, ಕಳೆದ ಚುನಾವಣೆಗಿಂತ ಸ್ವಲ್ಪಮಟ್ಟಿನ ಪ್ರಗತಿ ಸಾಧಿಸಲಿದೆ. 543 ಲೋಕಸಭಾ ಸ್ಥಾನಗಳ ಪೈಕಿ ಉತ್ತರ ಭಾರತದಲ್ಲಿರುವ 151 ಲೋಕಸಭಾ ಸ್ಥಾನಗಳಿದ್ದು, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲಯನ್ಸ್ (ಎನ್ ಡಿಎ)ಗೆ 86 ರಿಂದ 94 ಸ್ಥಾನಗಳು ಸಿಕ್ಕರೆ, ಯುಪಿಎಗೆ 23 ರಿಂದ 27, ಇತರೆ 33 ರಿಂದ 39 ಸ್ಥಾನಗಳು ಸಿಗಲಿವೆ.

   ದಕ್ಷಿಣ ಭಾರತದಲ್ಲಿ ಎನ್ ಡಿಎ ವಿರುದ್ಧ ಯುಪಿಎ ಜಯಭೇರಿ

   ದಕ್ಷಿಣ ಭಾರತದಲ್ಲಿ ಎನ್ ಡಿಎ ವಿರುದ್ಧ ಯುಪಿಎ ಜಯಭೇರಿ

   ಎಬಿಪಿಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆ 2018 (ಮೇ ತಿಂಗಳ ಸಮೀಕ್ಷೆ): ಈ ಸಮಯಕ್ಕೆ ಲೋಕಸಭೆ ಚುನಾವಣೆ ನಡೆದರೆ, ದಕ್ಷಿಣ ಭಾರತದಲ್ಲಿ ಎನ್ ಡಿಎ ವಿರುದ್ಧ ಯುಪಿಎ ಜಯಭೇರಿ ಬಾರಿಸಲಿದ್ದು, ಕಳೆದ ಚುನಾವಣೆಗಿಂತ ಸ್ವಲ್ಪಮಟ್ಟಿನ ಪ್ರಗತಿ ಸಾಧಿಸಲಿದೆ. ಎನ್ ಡಿಎ : 18-22, ಯುಪಿಎ : 67-75, ಇತರೆ : 38-44.

   ಎಬಿಪಿ ಸಿಎಸ್ ಡಿಎಸ್ ಸಂಸ್ಥೆ

   ಎಬಿಪಿ ಸಿಎಸ್ ಡಿಎಸ್ ಸಂಸ್ಥೆ

   ಎಬಿಪಿ ಸಿಎಸ್ ಡಿಎಸ್ ಸಂಸ್ಥೆ - ಮೇ ತಿಂಗಳಲ್ಲಿ ನಡೆಸಿದ ಸಮೀಕ್ಷೆ

   ದಕ್ಷಿಣ ಭಾರತ: 132 ಸ್ಥಾನ : ಎನ್ ಡಿಎ : 18-22, ಯುಪಿಎ : 67-75, ಇತರೆ : 38-44

   ಉತ್ತರ ಭಾರತ: 151 ಸ್ಥಾನ: ಎನ್ ಡಿಎ : 86-94, ಯುಪಿಎ : 23-27, ಇತರೆ : 33-39

   ಪೂರ್ವ ಭಾರತ : 142: ಎನ್ ಡಿಎ : 86-94, ಯುಪಿಎ : 22-26, ಇತರೆ : 26-30

   ಪಶ್ಚಿಮ -ಕೇಂದ್ರ ಭಾರತ: 118: ಎನ್ ಡಿಎ : 70-78, ಯುಪಿಎ : 41-47, ಇತರೆ : 0-2

   ಇಂಡಿಯಾ ಟುಡೇ ಸಿಎಸ್‌ಡಿಎಸ್, ಲೋಕನೀತಿ

   ಇಂಡಿಯಾ ಟುಡೇ ಸಿಎಸ್‌ಡಿಎಸ್, ಲೋಕನೀತಿ

   ಇಂಡಿಯಾ ಟುಡೇ ಸಿಎಸ್‌ಡಿಎಸ್, ಲೋಕನೀತಿ ಜೊತೆ ಸೇರಿ ಮೇ ತಿಂಗಳಲ್ಲಿ ನಡೆಸಿದ ಸಮೀಕ್ಷೆ ವರದಿಯ ಪ್ರಕಾರ ಎನ್‌ಡಿಎ ಮೈತ್ರಿಕೂಟ 274, ಯುಪಿಎ ಮೈತ್ರಿಕೂಟ 164, ಇತರರು 105 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟ ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕಡಿಮೆ ಮತಗಳನ್ನು ಪಡೆಯಲಿದೆ.

   ಇಂಡಿಯಾ ಟುಡೇ - ಕಾರ್ವಿ ಸಮೀಕ್ಷೆ

   ಇಂಡಿಯಾ ಟುಡೇ - ಕಾರ್ವಿ ಸಮೀಕ್ಷೆ

   India Today-Karvy ನಡೆಸಿದ ಮೂಡ್ ಆಫ್‌ ದಿ ನೇಷನ್ ಸಮೀಕ್ಷೆಯ ವರದಿ ಆಗಸ್ಟ್ ಹದಿನೆಂಟರಂದು ಪ್ರಕಟವಾಯಿತು. ಎನ್‌ಡಿಎ 281 ಸೀಟು, ಯುಪಿಎ 122 ಸೀಟು, ಇತರರು 140 ಸೀಟುಗಳನ್ನು ಪಡೆಯಲಿದ್ದಾರೆ. ಎನ್‌ಡಿಎ ಶೇ 36ರಷ್ಟು, ಯುಪಿಎ ಶೇ 31ರಷ್ಟು, ಇತರರು ಶೇ 33ರಷ್ಟು ವೋಟ್ ಶೇರ್ ಪಡೆಯಲಿದ್ದಾರೆ.

   ಮೋದಿ ದಿ ಬೆಸ್ಟ್

   ಮೋದಿ ದಿ ಬೆಸ್ಟ್

   ಇಂಡಿಯಾ ಟುಡೇ - ಕಾರ್ವಿ ಸಮೀಕ್ಷೆ - ಆಗಸ್ಟ್ - ಇದುವರೆಗಿನ ಅತ್ಯುತ್ತಮ ಪ್ರಧಾನಿ

   ನರೇಂದ್ರ ಮೋದಿ - ಶೇ. 26 2. ಇಂದಿರಾ ಗಾಂಧಿ - ಶೇ. 20 3. ಅಟಲ್ ಬಿಹಾರಿ ವಾಜಪೇಯಿ - ಶೇ. 12 4. ಜವಾಹರ್ ಲಾಲ್ ನೆಹರೂ - ಶೇ.10 5. ರಾಜೀವ್ ಗಾಂಧಿ - ಶೇ. 7 6. ಲಾಲ್ ಬಹಾದ್ದೂರ್ ಶಾಸ್ತಿ, ಮನಮೋಹನ್ ಸಿಂಗ್ - ಶೇ. 6 7. ಮೊರಾರ್ಜಿ ದೇಸಾಯಿ, ನಂದಾ, ಚರಣ್ ಸಿಂಗ್ - ಶೇ. 2 8. ವಿ ಪಿ ಸಿಂಗ್, ಚಂದ್ರಶೇಖರ್, ಪಿ ವಿ ನರಸಿಂಹರಾವ್, ದೇವೇಗೌಡ - ಶೇ. 1

   ಎಬಿಪಿ ನ್ಯೂಸ್ ಮತ್ತು ಸಿವೋಟರ್ ಜಂಟಿ ಸಮೀಕ್ಷೆ

   ಎಬಿಪಿ ನ್ಯೂಸ್ ಮತ್ತು ಸಿವೋಟರ್ ಜಂಟಿ ಸಮೀಕ್ಷೆ

   ಎಬಿಪಿ ನ್ಯೂಸ್ ಮತ್ತು ಸಿವೋಟರ್ ಜಂಟಿಯಾಗಿ ಅಕ್ಟೋಬರ್ ತಿಂಗಳಲ್ಲಿ ನಡೆಸಿರುವ ಚುನಾವಣೆಪೂರ್ವ ಸಮೀಕ್ಷೆ. ಈಕ್ಷಣ ಲೋಕಸಭೆ ಚುನಾವಣೆ ನಡೆದರೆ, ರಾಹುಲ್ ಗಾಂಧಿ ಅವರ ಯುಪಿಎಗೆ ಭಾರೀ ಮುಖಭಂಗವಾಗುವುದು ಶತಃಸಿದ್ಧ. ಹಾಗೆಯೆ, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಮತ್ತು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದನ್ನೂ ಯಾರೂ ತಪ್ಪಿಸಲಾರರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Upcoming parliament election 2019: Consolidated survey report from May18 to Oct18 from the various media group jointly conducted survey. From May to October survey report, NDA will retain the power.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more