ಮೋದಿ ಇಂಗ್ಲಿಷ್ ಬಗ್ಗೆ ಯುವ ಕಾಂಗ್ರೆಸ್ ನಿಂದ ಕೀಳು ಅಭಿರುಚಿ ಟ್ವೀಟ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇಂಗ್ಲಿಷ್ ಸರಿಯಾಗಿ ಮಾತನಾಡಲು ಬಾರದು ಎಂಬ ಅರ್ಥ ಬರುವಂಥ ಪೋಸ್ಟ್ ವೊಂದನ್ನು ಯುವ ಕಾಂಗ್ರೆಸ್ ನ ಆನ್ ಲೈನ್ ಮ್ಯಾಗಜೈನ್ ನಲ್ಲಿ ಹಾಕಿ, ಆ ನಂತರ ಅದನ್ನು ತೆಗೆದುಹಾಕಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
Congress' online magazine tweets derogatory meme attacking PM Modi, deletes later
— ANI Digital (@ani_digital) 21 November 2017
Read @ANI story | https://t.co/4uBvxWHfBM pic.twitter.com/JhH82acg5S
ಟ್ವಿಟ್ಟರ್ ನಲ್ಲಿ ಈ ಬಗ್ಗೆ ಚಿತ್ರವೊಂದನ್ನು ಹಾಕಿದ್ದು, ಅದರಲ್ಲಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಯುನೈಟೆಡ್ ಕಿಂಗ್ ಡಮ್ ನ ಪ್ರಧಾನಿ ತೆರೇಸಾ ಮೇ ಮಧ್ಯೆ ಸಂಭಾಷಣೆ ನಡೆಯುತ್ತಿರುವಂತಿದೆ. ಆಗ ಪ್ರಧಾನಿ ಮೋದಿ, "ನನ್ನ ವಿರುದ್ಧ ವಿಪಕ್ಷಗಳು ಹಾಕುತ್ತಿರುವ 'ಮೆಮೆ' ಬಗ್ಗೆ ಗೊತ್ತಿದೆಯಾ ಎಂದು ಕೇಳುತ್ತಾರೆ.
ಆಗ ಟ್ರಂಪ್, ಅದು ಮೆಮೆ ಅಲ್ಲ, ಮೀಮ್ಸ್ ಎನ್ನುತ್ತಾರೆ. ಆಗ ತೆರೇಸಾ ಮೇ, ನೀವು ಟೀ ಮಾರುವುದಕ್ಕೆ ಸರಿ ಎನ್ನುತ್ತಾರೆ. ಈ ಟ್ವೀಟ್ ಅನ್ನು ನಂತರ ತೆಗೆದುಹಾಕಲಾಗಿದೆ.

ಈ ಟ್ವೀಟ್ ಬಗ್ಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ. ಇಂಥ ಕೆಟ್ಟ ಅಭಿರುಚಿಯ ಟ್ವೀಟ್ ಅನ್ನು ರಾಹುಲ್ ಗಾಂಧಿ ಒಪ್ಪುತ್ತಾರಾ ಎಂದು ಕೂಡ ಅವರು ಪ್ರಶ್ನೆ ಮಾಡಿದ್ದಾರೆ. ಭಾರತದ ಬಡವರ ಬಗ್ಗೆ ಕಾಂಗ್ರೆಸ್ ನ ಧೋರಣೆ ಇದು. ಯುವರಾಜರು ಇದನ್ನು ಬೆಂಬಲಿಸುತ್ತಾರಾ ಎಂದು ಟ್ವೀಟ್ ಕೂಡ ಮಾಡಿದ್ದಾರೆ.
ಟ್ವಿಟ್ಟರ್ ಪೋಸ್ಟ್ ನಿಂದ ಕಾಂಗ್ರೆಸ್ ಗೆ ಸಾಕಷ್ಟು ಹಾನಿಯಾದ ಮೇಲೆ, ಇಂಥ ಹಾಸ್ಯಗಳನ್ನು ಒಪುವುದಿಲ್ಲ ಮತ್ತು ತಿರಸ್ಕರಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಈ ಟ್ವಿಟ್ಟರ್ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಇಂಥ ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications