ಭಾರತದ ಪುರಾತನ ರಾಜಕೀಯ ಪಕ್ಷಕ್ಕೆ ಬರ್ಥ್ ಡೇ ವಿಷಸ್!

Posted By:
Subscribe to Oneindia Kannada

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಡಿಸೆಂಬರ್ 28 ಹುಟ್ಟುಹಬ್ಬದ ಸಂಭ್ರಮ. ಭಾರತದ ಅತ್ಯಂತ ಪುರಾತನ ಪಕ್ಷಕ್ಕೆ 130 ವಸಂತಗಳು ತುಂಬಿವೆ. 1885ರಲ್ಲಿ ಸ್ಥಾಪನೆಯಾದ ಪಕ್ಷ ಅಲಾನ್ ಅಕ್ಟಾವಿಯಾನ್ ಹ್ಯೂಮ್, ಥಿಯೋಸಾಫಿಕಲ್ ಸೊಸೈಟಿ, ದಾದಾಭಾಯಿ ನರೋಜಿ, ದಿನ್ ಶಾ ವಾಛಾ ಮುಂತಾದ ನಾಯಕರನ್ನು ಕಂಡಿದೆ.

ಸ್ವಾತಂತ್ರ್ಯ ಪೂರ್ವದಿಂದ ಈಗಿನ ಮೋದಿ ಆಡಳಿತದ ತನಕ ಕಾಂಗ್ರೆಸ್ ಪಕ್ಷ ಅನೇಕ ಬದಲಾವಣೆಗಳನ್ನು ಕಂಡಿದೆ. ಇತ್ತೀಚಿನ ವರ್ಷಗಳಲ್ಲಿ ಕಳೆಗುಂದಿರುವ ತನ್ನ ವರ್ಚಸ್ಸಿಗೆ ಹೊಸ ಹೊಳಪು ತರಲು ಕಾಂಗ್ರೆಸ್ ಶತ ಪ್ರಯತ್ನಪಡುತ್ತಿದೆ.[ನಾನು ಇಂದಿರಾಗಾಂಧಿ ಸೊಸೆ ನಾನೇಕೆ ಹೆದರಲಿ: ಸೋನಿಯಾ]

1977ರ ತನಕ 30 ವರ್ಷಗಳ ಕಾಲ ದೇಶವನ್ನಾಳಿದ ಪಕ್ಷ ಕಳೆದ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಸೋಲು ಕಂಡಿತು. 44 ಸ್ಥಾನಕ್ಕೆ ಕುಸಿಯಿತು. ಇದರ ಬೆನ್ನಲ್ಲೇ ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತನ್ನ ಅಧಿಪತ್ಯವನ್ನು ಕಳೆದುಕೊಂಡಿದೆ.

ಜವಹರ್ ಲಾಲ್ ನೆಹರೂ, ಇಂದಿರಾಗಾಂಧಿ ಆಡಳಿತ ಕಂಡ ಕಾಂಗ್ರೆಸ್ ಗೆ ಈಗ ಮೋದಿ ಅವರ ಚುನಾವಣೆ ನಂಬರ್ ಗೇಮ್ ಆಟದ ಮರ್ಮ ಅರಿಯಲು ಆಗುತ್ತಿಲ್ಲ. [ರಾಜಕೀಯದ ಆಧುನಿಕ 'ಚಾಣಕ್ಯ'ನ ಬೆನ್ನೇರಿದ ಸೋನಿಯಾ ಪಡೆ]

ಜಾತ್ಯಾತೀತ ಶಕ್ತಿಗಳನ್ನು ಒಗ್ಗೂಡಿಸಿ ಮುನ್ನಡೆಸಲು ಮುಂದಾದರೂ ಪಕ್ಷದ ಹಿರಿಯ ನಾಯಕರಾದ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಪ್ರಿಯಾಂಕಾ ಗಾಂಧಿ ನಾಯಕತ್ವ ನೀಡಿ ಎಂಬ ಕೂಗು ಕೇಳಿ ಬಂದರೂ ಜಾರಿಗೊಳಿಸಲು ಇನ್ನೂ ಸೋನಿಯಾಜೀ ಮನಸ್ಸು ಮಾಡಿಲ್ಲ. ನೈಸರ್ಗಿಕ ಅಧಃಪತನದ ಹಾದಿಯಲ್ಲಿ ಕಾಂಗ್ರೆಸ್ ಇರುವಂತೆ ಭಾಸವಾಗುತ್ತಿದೆ. ಪುರಾತನ ಪಕ್ಷದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ:[ಪ್ರಿಯಾಂಕಾ ನನ್ನ ಉತ್ತರಾಧಿಕಾರಿ ಎಂದಿದ್ದ ಇಂದಿರಾ ಗಾಂಧಿ!]

ಶೈಕ್ಷಣಿಕ ಪ್ರಗತಿ ಕಾಣಲು ಪಕ್ಷ ಸ್ಥಾಪನೆ

ಶೈಕ್ಷಣಿಕ ಪ್ರಗತಿ ಕಾಣಲು ಪಕ್ಷ ಸ್ಥಾಪನೆ

1884ರಲ್ಲಿ ಎಒ ಹ್ಯೂಮ್ ಅವರ ಆಧ್ಯಕ್ಷತೆಯಲ್ಲಿ ಮದ್ರಾಸ್ ನ ಥಿಯೋಸಾಫಿಕಲ್ ಸೊಸೈಟಿಯ 17 ಸದಸ್ಯರ ಜೊತೆ ಸಭೆ ನಡೆಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉದಯಕ್ಕೆ ನಾಂದಿ ಹಾಡಿದರು. ಭಾರತದಲ್ಲಿ ಶೈಕ್ಷಣಿಕ ಪ್ರಗತಿ ಕಾಣುವುದು ಮುಖ್ಯ ಉದ್ದೇಶವಾಗಿತ್ತು.

ಮೊಟ್ಟಮೊದಲ ಸಭೆ ಪುಣೆಯಲ್ಲಿ ಆಯೋಜನೆ

ಮೊಟ್ಟಮೊದಲ ಸಭೆ ಪುಣೆಯಲ್ಲಿ ಆಯೋಜನೆ

ಮೊಟ್ಟಮೊದಲ ಸಭೆ ಪೂನಾ(ಪುಣೆ)ದಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ, ಕಾಲರಾ ಭೀತಿಯಿಂದ ಬಾಂಬೆ(ಈಗಿನ ಮುಂಬೈ)ಗೆ ಶಿಫ್ಟ್ ಮಾಡಲಾಯಿತು. ಅಂದಿನ ವೈಸ್ ರಾಯ್ ಡಫ್ರಿನ್ ಅವರ ಅನುಮತಿ ಪಡೆದು ಕಾಂಗ್ರೆಸ್ ತನ್ನ ಸಭೆಯನ್ನು ನಡೆಸಿತು. ಉಮೇಶ್ ಚಂದ್ರ ಚಟರ್ಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 72 ಸದಸ್ಯರು ಭಾಅಗವಹಿಸಿದ್ದರು.

ಬಂಗಾಳ ವಿಭಜನೆ ನಂತರ ಕಾಂಗ್ರೆಸ್ಸಿಗೆ ಬಲ

ಬಂಗಾಳ ವಿಭಜನೆ ನಂತರ ಕಾಂಗ್ರೆಸ್ಸಿಗೆ ಬಲ

1905ರಲ್ಲಿ ಲಾರ್ಡ್ ಕರ್ಜನ್ ಅವರು ಬೆಂಗಾಲ ವಿಭಜನೆ ಘೋಷಿಸಿದರು. ಆಗ ಸ್ವದೇಶಿ ಚಳವಳಿಯ ಮುಂದಾಳತ್ವ ಸುರೇಂದ್ರನಾಥ್ ಬ್ಯಾನರ್ಜಿ ಅವರು ವಹಿಸಿಕೊಂಡರು. ಇದರಿಂದ ಪಕ್ಷಕ್ಕೆ ಜನ ಬೆಂಬಲ ವ್ಯಕ್ತವಾಯಿತು.

ಮಹಾತ್ಮಾ ಗಾಂಧಿಜೀ ಅವರ ಎಂಟ್ರಿ

ಮಹಾತ್ಮಾ ಗಾಂಧಿಜೀ ಅವರ ಎಂಟ್ರಿ

1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮಹಾತ್ಮಾ ಗಾಂಧಿಜೀ ಅವರು ಬಂದ ಮೇಲೆ ಕಾಂಗ್ರೆಸ್ಸಿಗೆ ಹೆಚ್ಚಿನ ಬಲ ಬಂದಿತು. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೂ ಇದರಿಂದ ಶಕ್ತಿ ಬಂದಿತು. ಲಕ್ಷಾಂತರ ಮಂದಿ ಕಾಂಗ್ರೆಸ್ ಗೆ ಬೆಂಬಲವಾಗಿ ನಿಂತರು. ಕ್ವಿಟ್ ಇಂಡಿಯಾ ನಂತರ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಒತ್ತಡಕ್ಕೆ ಸಿಲುಕಿದರು. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು.

15 ಸಾರ್ವಕಾಲಿಕ ಚುನಾವಣೆ ಎದುರಿಸಿದ ಕಾಂಗ್ರೆಸ್

15 ಸಾರ್ವಕಾಲಿಕ ಚುನಾವಣೆ ಎದುರಿಸಿದ ಕಾಂಗ್ರೆಸ್

15 ಸಾರ್ವಕಾಲಿಕ ಚುನಾವಣೆ ಎದುರಿಸಿದ ಕಾಂಗ್ರೆಸ್, 6 ಬಾರಿ ಸ್ವಂತ ಬಲದಿಂದ ಇನ್ನು ನಾಲ್ಕು ಬಾರಿ ಮೈತ್ರಿ ಮೂಲಕ ಜಯ ದಾಖಲಿಸಿ 49 ವರ್ಷಗಳ ಕಾಲ ಆಡಳಿತ ನಡೆಸಿತು. ಆದರೆ, 2009ರಿಂದ ಕಾಂಗ್ರೆಸ್ ಬಲ ದೇಶದೆಲ್ಲೆಡೆ ಕುಗ್ಗತೊಡಗಿದೆ.

ಸದ್ಯಕ್ಕೆ ಕಾಂಗ್ರೆಸ್ ರಾಜ್ಯಗಳ ಸಿಎಂಗಳು

ಸದ್ಯಕ್ಕೆ ಕಾಂಗ್ರೆಸ್ ರಾಜ್ಯಗಳ ಸಿಎಂಗಳು

ಅರುಣಾಚಲಪ್ರದೇಶ: ನಬಂ ಟುಕಿ
ಅಸ್ಸಾಂ: ತರುಣ್ ಗೊಗಾಯ್
ಹಿಮಾಚಲಪ್ರದೇಶ: ವೀರಭದ್ರಸಿಂಗ್
ಕರ್ನಾಟಕ: ಸಿದ್ದರಾಮಯ್ಯ
ಕೇರಳ: ಉಮ್ಮನ್ ಚಾಂಡಿ
ಮಣಿಪುರ: ಓಕ್ರಾಮ್ ಇಬೊಬಿ ಸಿಂಗ್
ಮೇಘಾಲಯ: ಮುಕುಲ್ ಸಂಗ್ಮಾ
ಮಿಜೋರಾಮ್: ಪು ಲಲ್ಥಾನ್ಹಾವಾಲ
ಉತ್ತರಾಖಂಡ್: ಹರೀಶ್ ರಾವತ್

ಕಾಂಗ್ರೆಸ್ ನೀಡಿದ ಪ್ರಧಾನ ಮಂತ್ರಿಗಳು

ಕಾಂಗ್ರೆಸ್ ನೀಡಿದ ಪ್ರಧಾನ ಮಂತ್ರಿಗಳು

ಜವಹರ ಲಾಲ್ ನೆಹರೂ, ಗುಲ್ಜಾರಿಲಾಲ್ ನಂದಾ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿವಿ ನರಸಿಂಹ ರಾವ್, ಮನಮೋಹನ್ ಸಿಂಗ್
ಕಾಂಗ್ರೆಸ್ ಬಲದಿಂದ ಪ್ರಧಾನಿಯಾದವರು: ಮೋರಾರ್ಜಿ ದೇಸಾಯಿ, ಚರಣ್ ಸಿಂಗ್, ವಿ.ಪಿ ಸಿಂಗ್, ಚಂದ್ರಶೇಖರ್, ಎಚ್.ಡಿ ದೇವೇಗೌಡ, ಐಕೆ ಗುಜ್ರಾಲ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian National Congress turns 130 today, on December 28, 2015. An enviable history by any count. It had started its journey as a safety valve during the colonial rule and underwent several phases in the subsequent years to emerge as the main opponent to the same colonial masters.
Please Wait while comments are loading...